ಕಳೆನಾಶಕ ಕುಡಿದಿದ್ದ ವಿದ್ಯಾರ್ಥಿ ಸಾವು! ಕಡಿಮೆ ಅಂಕ ಕಾರಣವಾಯ್ತಾ?

ಹಂಚಿಕೊಳ್ಳಿ
WhatsApp Facebook X Telegram
Shikaripura Police incidentಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಕರ್ತವ್ಯ ನಿರತ ಪೊಲೀಸ್ ಶಂಕರ್ ಅವರಿಗೆ ಬೈಕ್ ಡಿಕ್ಕಿಯಾಗಿದೆ. ಗಾಯಾಳುವನ್ನು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಪ್ಪನಹಳ್ಳಿಯ ಮೂವರು ಸವಾರರು ವಶಕ್ಕೆ.
ಶಿಕಾರಿಪುರ ಸುದ್ದಿ, ಟೆರೇಸ್‌ನಿಂದ ಬಿದ್ದು ಸಾವು, ಹೊಸದೂಪದಹಳ್ಳಿ. Shikaripura News, Teacher Death, Nandihalli School, Shivamogga District News.

Shikaripura Student / ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ/ ವಿದ್ಯಾರ್ಥಿಯೊಬ್ಬ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಜಿಲ್ಲೆಯ ಶಿಕಾರಿಪುರದಲ್ಲಿ ವರದಿಯಾಗಿದೆ. ಘಟನೆ ನಡೆದು 20 ದಿನಗಳು ಕಳೆದಿದ್ದು, ಕಳೆನಾಶಕ ಕುಡಿದಿದ್ದ ವಿದ್ಯಾರ್ಥಿ ಇದೀಗ ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ನಿನ್ನೆ ಅಂದರೆ ಬಾನುವಾರ ಬೆಳಗ್ಗೆ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆದಿದೆ.

ಘಟನೆಯ ವಿವರ

ದುರ್ಗಾವರ್ ಜಯಂತ್ ಎಂಬ ವಿದ್ಯಾರ್ಥಿ ಮೃತ ದುರ್ದೈವಿ, ಈತ ಇಲ್ಲಿ ವಿನಾಯಕನಗರ ವಾಸಿ ಖಾಸಗಿ ಬಸ್ ಏಜೆಂಟ್ ಹಾಲೇಶ್ ಅವರ ಪುತ್ರ. ಕಳೆದ ಜೂನ್ 6ರಂದು ಹೊರಬಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶದಲ್ಲಿ ಈತನಗೆ ಕಡಿಮೆ ಮಾರ್ಕ್​ ಬಂದಿತ್ತು. ಈ ಕಾರಣಕ್ಕೆ ವಿದ್ಯಾರ್ಥಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದ ಎನ್ನಲಾಗಿದೆ.

ಆನಂತರ ವಿದ್ಯಾರ್ಥಿಯನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಇದ್ದಾಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ಧಾನೆ. ನಿನ್ನೆ ದಿನ ಈತನ ಅಂತ್ಯಕ್ರಿಯೆ ನಡೆದಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor