ರಾಜ್ಯದಲ್ಲಿ ಬ್ಯಾನ್​ ಆಗತ್ತಾ ಗುಟ್ಕಾ, ಪಾನ್ ಮಸಾಲಾ?: ಸಿಎಂ ಡಿಕೆ ಶಿವಕುಮಾರ್ ಕೊಟ್ಟ ವಾರ್ನಿಂಗ್​ ಏನು

ಹಂಚಿಕೊಳ್ಳಿ
WhatsApp Facebook X Telegram
CM DK Shivakumar Warns Tobacco Manufacturers
CM DK Shivakumar Warns Tobacco Manufacturers

ಬೆಂಗಳೂರು, : ರಾಜ್ಯದಲ್ಲಿ ಮಾರಾಟವಾಗುವ ಗುಟ್ಕಾ ಹಾಗೂ ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳಲ್ಲಿ ಅಲ್ಪ ಪ್ರಮಾಣದ ಮಾದಕ ದ್ರವ್ಯಗಳು ಕಂಡುಬಂದರೂ ಸಹ ಅವುಗಳನ್ನು ತಕ್ಷಣವೇ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗ: ಬಾವಿ ಮೋಟಾರ್ ಆನ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಭಾನುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಮತ್ತು ‘ನಶಾ ಮುಕ್ತ್ ಭಾರತ್’ ಅಭಿಯಾನದಲ್ಲಿ ಪಾಲ್ಗೊಂಡು ಅವರು ಉತ್ಪಾದಕರಿಗೆ ಈ ಕಠಿಣ ಸಂದೇಶ ರವಾನಿಸಿದ್ದಾರೆ.

ಕೆಲವರು ಪಾನ್ ಮಸಾಲಾ ಮತ್ತು ಗುಟ್ಕಾ ಸೇವನೆಯ ಮೂಲಕ ಮಾದಕ ನಶೆ ಅಥವಾ ಕಿಕ್ ಪಡೆದುಕೊಳ್ಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಸಿಎಂ ತಿಳಿಸಿದರು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಅವರು, ಇಂತಹ ಹಾನಿಕಾರಕ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ಆದಾಯದ ನಷ್ಟವಾಗಬಹುದು. ಆದರೆ, ನಮಗೆ ಕಂದಾಯಕ್ಕಿಂತಲೂ ಸಾರ್ವಜನಿಕರ ಆರೋಗ್ಯ ಮತ್ತು ಯುವ ಪೀಳಿಗೆಯ ಭವಿಷ್ಯವೇ ಅತ್ಯಂತ ಪ್ರಮುಖವಾಗಿದೆ. ತಂಬಾಕು ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡ್ರಗ್ಸ್ ಮಿಶ್ರಣ ಮಾಡಿರುವುದು ದೃಢಪಟ್ಟರೆ, ಇಡೀ ಕರ್ನಾಟಕದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

CM DK Shivakumar Warns Tobacco Manufacturers

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor