Shivamogga Police ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಬಳಿ ಸಿಟಿ ಬಸ್‌ಗಳನ್ನು ತಡೆದು ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲ್ವೆ ನಿಲ್ದಾಣದ ಗಣಪತಿ ದೇವಸ್ಥಾನದ ಮುಂಭಾಗದಲ್ಲೇ ಬಸ್‌ಗಳನ್ನು ನಿಲ್ಲಿಸುವಂತೆ ಮುಂಚಿತವಾಗಿ ಸೂಚನೆ ನೀಡಿದ್ದರೂ, ನಿಯಮ ಮೀರಿ ಆಟೋ ನಿಲ್ದಾಣದವರೆಗೂ ಬಸ್ ತಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ನ 65ನೇ ಸಂಸ್ಥಾಪನಾ ದಿನಾಚರಣೆ: ಯುವಶಕ್ತಿಗೆ ನಾಯಕರ ಕರೆ!
ಸ್ಥಳದಲ್ಲಿದ್ದ ಆಟೋ ಚಾಲಕರ ಮನವಿ ಹಾಗೂ ಕುಂದುಕೊರತೆಗಳನ್ನು ಆಲಿಸಿದ ಪೊಲೀಸರು, ಸಿಟಿ ಬಸ್‌ಗಳ ನಿಯಮ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡುವ ಜೊತೆಯಲ್ಲೇ ಆಟೋ ಚಾಲಕರಿಗೂ ಖಡಕ್ ಎಚ್ಚರಿಕೆ ರವಾನಿಸಿದರು. ಸಿಟಿ ಬಸ್‌ಗಳ ವಿಚಾರದಲ್ಲಿ ಚಾಲಕರ ಬೇಡಿಕೆಯನ್ನು ಆಲಿಸಿದಂತೆಯೇ, ಆಟೋ ಚಾಲಕರೂ ಸಹ ಸಂಚಾರ ನಿಯಮ ಹಾಗೂ ಇಲಾಖೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಾಳೆಯಿಂದಲೇ ನಗರದಲ್ಲಿ ಆಟೋಗಳ ದಾಖಲೆಗಳ ತಪಾಸಣೆ ತಿಳಿಸಿದರು.
ನಗರದ ಬಹುತೇಕ ಆಟೋಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ (FC) ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದ್ದರಿಂದ ನಾಳೆಯಿಂದ ನಡೆಯುವ ಕಾರ್ಯಾಚರಣೆಯ ವೇಳೆ ಪ್ರತಿಯೊಂದು ಆಟೋದ ಫಿಟ್‌ನೆಸ್ ಸರ್ಟಿಫಿಕೇಟ್, ಇನ್ಷೂರೆನ್ಸ್ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳು ಸರಿಯಾಗಿರಬೇಕು. ಒಂದು ವೇಳೆ ದಾಖಲೆಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುವುದು ಕಂಡುಬಂದರೆ, ಅಂತಹ ಆಟೋಗಳನ್ನು ತಕ್ಷಣವೇ ಜಪ್ತಿಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರು.
