ನ್ಯಾಷನಲ್ ಹೈವೆಯಲ್ಲಿ ವೀಲ್ಹಿಂಗ್​! ಸೆಕ್ಷನ್ 281,​ 184, 177, 129, 194 ಅಡಿಯಲ್ಲಿ ಕೇಸ್!

ಹಂಚಿಕೊಳ್ಳಿ
WhatsApp Facebook X Telegram
shivamogga police image
ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಅಟೆಂಪ್ಟು ಮರ್ಡರ್ ಕೇಸ್ : ಕಾರು ಡಿಕ್ಕಿ ಹೊಡೆಸಿ ಕೊಲೆ ಯತ್ನ!

Bike Wheeling on Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೊಂದು ವೀಲ್ಹಿಂಗ್​ ಕೇಸ್​ ಹಿಡಿದಿದ್ದಾರೆ. ಈ ಸಲ ಮಲವಗೊಪ್ಪದ ಬಳಿ ವೀಲ್ಹಿಂಗ್​ ಮಾಡ್ತಿದ್ದವನ ವಿಡಿಯೋ ನೋಡಿ ಆತನ ವಿರುದ್ಧ ಕೇಸ್ ದಾಖಲಿಸಿದ್ಧಾರೆ. ಶಿವಮೊಗ್ಗ – ಭದ್ರಾವತಿ ಮಾರ್ಗದ ಮಧ್ಯೆ ಸಿಗುವ ಮಲವಗೊಪ್ಪ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಆರೋಪಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ . ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳೀಯರ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತ ಯುವಕನ ಮೇಲೆ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಮಾಡಿದ್ದಾರೆ. ಅಲ್ಲದೆ ಬೈಕ್ ಸೀಜ್ ಮಾಡಿ, ಸವಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 281 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ 1988ರ ಕಲಂ 184, 177, 129, 194ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor