ಧೀರೇನ್ ಆರ್. ರಾಜ್‌ಕುಮಾರ್ ಅಭಿನಯದ ಪಬ್ಬಾರ್ ಸಿನಿಮಾದಲ್ಲಿ ಶಿವಣ್ಣ ಸ್ಪೆಷಲ್​ ಕ್ಯಾರೆಕ್ಟರ್​! ಶಿವಮೊಗ್ಗದಲ್ಲಿ ಮಾಹಿತಿ ರಿವಿಲ್

ಹಂಚಿಕೊಳ್ಳಿ
WhatsApp Facebook X Telegram
Dheeren R Rajkumar's 'Pabbar' Set for Release on Dec 11; Team Addresses Press in Shivamogga Malenadu Today
Dheeren R Rajkumar's 'Pabbar' Set for Release on Dec 11; Team Addresses Press in Shivamogga Malenadu Today

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನ. 26: ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ, ನಟ ಧೀರೇನ್ ಆರ್. ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿರುವ ‘ಪಬ್ಬಾರ್’ ಕನ್ನಡ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ತಿಳಿಸಿದರು.

ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವ 143’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ಧೀರೇನ್, ‘ಪಬ್ಬಾರ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವು ವಿಭಿನ್ನ ಆಯಾಮಗಳನ್ನು ಹೊಂದಿದ್ದು, ಎರಡು-ಮೂರು ಬಗೆಯ ಛಾಯೆಗಳಲ್ಲಿ ಪ್ರೇಕ್ಷಕರಿಗೆ ಕಾಣಿಸಲಿದ್ದಾರೆ ಎಂದು ವಿವರಿಸಿದರು.

ನಟ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಆಯುರ್ವೇದ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಟ ಶಿವರಾಜ್‌ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆ.ಜಿ.ಎಫ್.’ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್‌ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸೈಯಾಜಿ ಶಿಂಧೆ, ಮಂಗಳಾ ರಘು ಹಾಗೂ ಭರತ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ ಎಂದರು.

ಇದೊಂದು ಸಾಹಸಮಯ ಅಪರಾಧ ಕಥಾಹಂದರ ಹೊಂದಿರುವ ಭಾವನಾತ್ಮಕ ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಸಮೀಪ ಹರಿಯುವ ‘ಪಬ್ಬಾರ್’ ನದಿ ಚಿತ್ರದ ಕಥೆಯ ಪ್ರಮುಖ ಕೇಂದ್ರಬಿಂದುವಾಗಿದ್ದು, ನದಿ ಹಾಗೂ ಕಣಿವೆಯ ಹಿನ್ನೆಲೆಯಲ್ಲಿಯೇ ಕಥೆ, ಸಂಘರ್ಷ ಮತ್ತು ಕುತೂಹಲಕಾರಿ ಸನ್ನಿವೇಶಗಳು ತೆರೆದುಕೊಳ್ಳುವುದರಿಂದ ಚಿತ್ರಕ್ಕೆ ‘ಪಬ್ಬಾರ್’ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.

ಬೆಂಗಳೂರು, ಮೈಸೂರು, ಕೊಡಗು, ವಾರಾಣಸಿ ಹಾಗೂ ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಸಾಹಸಮಯ ಸನ್ನಿವೇಶಗಳ ಜತೆಗೆ ಭಾವನಾತ್ಮಕ ಅಂಶಗಳಿಗೂ ಆದ್ಯತೆ ನೀಡಲಾಗಿದೆ. ಯುವಜನರ ಜತೆಗೆ ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ರೀತಿಯಲ್ಲಿ ಸಿನಿಮಾ ರೂಪಿಸಲಾಗಿದೆ ಎಂದು ತಿಳಿಸಿದರು.

ಚಿತ್ರತಂಡಕ್ಕೆ ಶಿವಮೊಗ್ಗ ಜಿಲ್ಲೆಯೊಂದಿಗೆ ವಿಶೇಷ ನಂಟಿದ್ದು, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಸುಮಾರು 10ರಿಂದ 15 ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಟ ಧೀರೇನ್ ಆರ್. ರಾಜ್‌ಕುಮಾರ್, ಶ್ರೀಹರ್ಷ ಗೋ ಭಟ್, ಪವನ್ ಕುಮಾರ್, ಪ್ರದೀಪ್ ಅಂಚೆ, ಮಾಸ್ಟರ್ ಆರ್ಯನ್ ಗೌಡ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor