ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಇಲ್ಲಿನ ಮಹಿಷಿ ಪ್ರದೇಶದಲ್ಲಿರುವ ತುಂಗಾನದಿಯಲ್ಲಿ ನಾಲ್ವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ವಕೀಲರು ಎನ್ನಲಾದ ಕಾರ್ತಿಕ್, ನಕುಲ್, ಚೇತನ್ ಹಾಗೂ ಪವನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ನೀರಿಗೆ ಮುಳುಗಿದವರನ್ನ ಬೆಂಗಳೂರಿನ ನಾಲ್ವರು ವಕೀಲರಾದ ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಕತ್ರಿಗುಪ್ಪೆ ಕಡೆಯಿಂದ ಮದುವೆ ಸಮಾರಂಭಕ್ಕಾಗಿ ಶಿವಮೊಗ್ಗ ನಗರಕ್ಕೆ ಬಂದಿದ್ದ ಇವರು, ನಂತರ ಗೂಗಲ್‌ನಲ್ಲಿ ಸ್ಥಳವೊಂದನ್ನು ನೋಡಿಕೊಂಡು ಎರಡು ಟಿಟಿ (TT) ವಾಹನಗಳಲ್ಲಿ ತೀರ್ಥಹಳ್ಳಿ ಕಡೆಗೆ ಬಂದಿದ್ದರು ಎನ್ನಲಾಗಿದೆ.
ನೀರಿನ ಬಳಿ ಆಟವಾಡುತ್ತಿದ್ದ ವೇಳೆ ಮೊದಲು ಒಬ್ಬಾತ ನೀರಿಗೆ ಇಳಿದಿದ್ದು, ಆತನನ್ನು ಹಿಡಿದು ಮೇಲೆತ್ತಲು ತೆರಳಿದ ಉಳಿದ ಮೂವರು ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ವಕೀಲ ವೃತ್ತಿಯಲ್ಲಿದ್ದರು ಎನ್ನಲಾಗಿದ್ದು, ಘಟನಾ ಸ್ಥಳದಲ್ಲಿ ನಾಪತ್ತೆಯಾಗಿದ್ದವರಿಗಾಗಿ ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
