18 ಅಕೌಂಟ್​ನಲ್ಲಿ 80 ಲಕ್ಷ ನಕಲಿ ಚಿನ್ನದ ಸಾಲ! ಒಂದುವರೆ ಕೋಟಿ ಲೋನ್ ಕೇಳಿದಾಗ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

 Shivamogga |  Malnenadutoday.com |   ಶಿವಮೊಗ್ಗದ ಪ್ರತಿಷ್ಟಿತ ಬ್ಯಾಂಕ್​ ಫೇಕ್ ಗೋಲ್ಡ್ ಗ್ಯಾಂಗ್​ವೊಂದು ಮೋಸ ಮಾಡಿದ ಪ್ರಕರಣದ ಬಗ್ಗೆ ಶಿವಮೊಗ್ಗದ  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ​ನಲ್ಲಿ ಕೇಸ್ ದಾಖಲಾಗಿತ್ತು, ಐಪಿಸಿ ಸೆಕ್ಷನ್​ IPC 1860 (U/s-420,34) ಅಡಿಯಲ್ಲಿ ದಾಖಲಾಗಿರುವ ಕೇಸ್​ನಲ್ಲಿ ಇಬ್ಬರು ಲೇಡಿಸ್​ ಸೇರಿದಂತೆ ಆರು ಮಂದಿ ವಿರುದ್ಧ ಕೇಸ್ ದರ್ಜ್​ ಆಗಿತ್ತು. ಈ ಪ್ರಕರಣದ ಮತ್ತಷ್ಟು ವಿವರ ಇಲ್ಲಿದೆ 

ಮಲವಗೊಪ್ಪ ಗ್ರಾಮದಲ್ಲಿರುವ ಪ್ರತಿಷ್ಟಿತ ಬ್ಯಾಂಕ್​ನಲ್ಲಿ ಫೇಕ್​ ಗೋಲ್ಡ್ ಗ್ಯಾಂಗ್ ಆರೋಪಿಗಳು ಬರೋಬ್ಬರಿ 18 ಅಕೌಂಟ್​ಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಸರಿಸುಮಾರು 80 ಲಕ್ಷ ರೂಪಾಯಿ ಸಾಲ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಆರೋಪಿಗಳ ಪೈಕಿ ಬ್ಯಾಂಕ್​ನ ಅಧಿಕೃತ ಚಿನ್ನ ಪರೀಕ್ಷಕ ಕೂಡ ಒಬ್ಬನಾಗಿದ್ದ. 

READ : ಚಿನ್ನ ಅಡಮಾನ ಸಾಲ! ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ! ಬ್ಯಾಂಕ್​ಗೆ ವಂಚಿಸಿದ ಇಬ್ಬರು ಮಹಿಳೆಯರು ಸೇರಿ 6 ಮಂದಿ ವಿರುದ್ಧ ಕೇಸ್

ಪ್ರಕರಣ ಪತ್ತೆಯಾಗಿದ್ದು ಹೇಗೆ? 

ಫೇಕ್ ಗ್ಯಾಂಗ್​ ಚಿನ್ನದ ಅಡಮಾನದ ಸಂಬಂಧ ಮತ್ತೆ ಸಾಲ ಕೇಳಲು ಬ್ಯಾಂಕ್​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ಬೇರೊಬ್ಬ ಚಿನ್ನ ಪರೀಕ್ಷಕ  ಗ್ಯಾಂಗ್​ನ ಚಿನ್ನ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಫೇಕ್ ಗ್ಯಾಂಗ್ ನೀಡಿರುವುದು ಅಸಲಿಯಲ್ಲ ನಕಲಿ ಚಿನ್ನ  ಎಂಬುದು ಗೊತ್ತಾಗಿದೆ. ಅನುಮಾನ ಬಂದ ಫೇಕ್ ಗ್ಯಾಂಗ್ ಈ ಹಿಂದೆ ನೀಡಿದ ಎಲ್ಲಾ ಚಿನ್ನಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅಡಮಾನಕ್ಕಿಟ್ಟಿರುವುದು ನಕಲಿ ಚಿನ್ನ ಎಂಬುದು ಗೊತ್ತಾಗಿದೆ. 

ಈ ಸಂಬಂಧ ಅಲರ್ಟ್​ ಆದ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಲಿಗೆ ಮತ್ತೆ ಲೋನ್ ಕೇಳಲು ಬಂದ ಗ್ಯಾಂಗ್​ಗೆ ಹರೀಶ್​ ಇದ್ದಿದ್ದರೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಚಿನ್ನದ ಪರೀಕ್ಷೆಯನ್ನು ಬೇರೊಬ್ಬರಿಂದ ನಡೆಸಿದ್ದ ಬ್ಯಾಂಕ್ ಸಿಬ್ಬಂದಿಯಿಂದ ಕೃತ್ಯ ಬಯಲಾಗಿದೆ. ಇಲ್ಲವಾದರೆ ಮತ್ತೆ ಕೋಟಿಗಟ್ಟಲೇ ಹಣ ಗ್ಯಾಂಗ್​ನ ಪಾಲಾಗುತ್ತಿತ್ತು. 


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು