KARNATAKA NEWS/ ONLINE / Malenadu today/ Nov 8, 2023 SHIVAMOGGA NEWS
Shivamogga | ಈ ಹಿಂದೆ ಶಿವಮೊಗ್ಗದಲ್ಲಿ ಚಿನ್ನದ ಅಡಮಾನ ಸಾಲದ ವಿಚಾರ ರಾಷ್ಟ್ರಮಟ್ಟದ ಸದ್ದು ಮಾಡಿತ್ತು. ಇವತ್ತಿಗೂ ಈ ಪ್ರಕರಣ ಸೂಕ್ಷ್ಮ ರೀತಿಯಲ್ಲಿ ಮುಂದುವರಿಯುತ್ತಲೇ ಇದೆ. ಇದೀಗ ಪ್ರತಿಷ್ಟಿತ ಬ್ಯಾಂಕ್ಗೆ ನಕಲಿ ಚಿನ್ನ ಕೊಟ್ಟು ಅಡಮಾನ ಸಾಲ ಪಡೆದ ಘಟನೆ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ IPC 1860 (U/s-420,34) ಅಡಿಯಲ್ಲಿ ದಾಖಲಾಗಿರುವ ಕೇಸ್ನಲ್ಲಿ ಇಬ್ಬರು ಲೇಡಿಸ್ ಸೇರಿದಂತೆ ಆರು ಮಂದಿ ವಿರುದ್ಧ ಕೇಸ್ ದರ್ಜ್ ಆಗಿದೆ.
ಏನಿದು ಪ್ರಕರಣ
ಸ್ಟೇಷನ್ ವ್ಯಾಪ್ತಿಯಲ್ಲಿಯೇ ಇರುವ ಬ್ಯಾಂಕ್ವೊಂದರ ಮ್ಯಾನೇಜರ್ ಈ ಕೇಸ್ ದಾಖಲಿಸಿದ್ದಾರೆ. ದಾಖಲಾದ ದೂರಿನ ಪ್ರಕಾರ, ಶಿವಮೊಗ್ಗದ ನಿವಾಸಿಗಳು ಬ್ಯಾಂಕ್ನ ಚಿನ್ನಪರೀಕ್ಷಿಕರ ಜೊತೆ ಸೇರಿದಂತೆ 18 ಚಿನ್ನದ ಅಡಮಾನ ಸಾಲ ಪಡೆದುಕೊಂಡಿದ್ದಾರೆ. ಸಾಲಕ್ಕೆ ಒತ್ತೆ ಇಟ್ಟ 1898 ಗ್ರಾಂ ಚಿನ್ನದಲ್ಲಿ 386 ಗ್ರಾಂ ಮಾತ್ರ ಅಸಲಿ ಚಿನ್ನವಿದ್ದು, ಉಳಿದದ್ದು ಲೇಪಿತ ಚಿನ್ನವಾಗಿದೆ.
ವಿವಿಧ ಹಂತಗಳಲ್ಲಿ ಬ್ಯಾಂಕ್ನವರನ್ನ ನಂಬಿಸಿ ಚಿನ್ನದ ಅಡಮಾನ ಸಾಲ ಪಡೆದು ಆರೋಪಿಗಳು ಆರಾಮಗಿದ್ದರು. ಈ ಮಧ್ಯೆ ಅನುಮಾನ ಬಂದು ಪರೀಕ್ಷೆ ಮಾಡಿದಾಗ ಅಡವಿಟ್ಟಿರುವುದು ಲೇಪಿತ ಚಿನ್ನ ಎಂಬುದು ಗೊತ್ತಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಸಂಬಂಧ ಕೇಸ್ ದಾಖಲಾಗಿದೆ.
