ತಿಪಟೂರು ಡಮ್ಮಿ ಟ್ರಂಕ್​ EXCLUSIVE ಕಥೆ! ಮುಳಬಾಗಿಲು ಸಾಹುಕಾರರು, ಶಿವಮೊಗ್ಗದ ಗೋಪಿಸರ್ಕಲ್ಲು! ಬಲೇ ಬಾಬಣ್ಣನದ್ದು ಏನ್​ ಪ್ಲಾನ್​ ಅಂತೀರಾ?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS

Shivamogga | ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಸಿಕ್ಕಿದ್ದ ಅನುಮಾನಸ್ಪದ ಬಾಕ್ಸ್​ ವಿಚಾರ ಡಮ್ಮಿಯಾಗೋಯ್ತು! ಅದರಲ್ಲಿ ಬಾಂಬ್ ಇರಲಿಲ್ಲ. ಬದಲಿಗೆ ಅದರಲ್ಲಿ ಇದ್ದಿದ್ದು ಉಪ್ಪು ! ಇಷ್ಟೆಕ್ಕೆ ಇಡೀ ದಿನ ಶಂಕಿತ ವರದಿಗಳು ರಾರಾಜಿಸಿದವು ಎಂದು ಜನರ ನಡುವೆ,  ಪ್ರಕರಣದ ಕ್ಲ್ಯೈಮ್ಯಾಕ್ಸ್​  ಮುಗಿದ ಮೇಲೆ ಚರ್ಚೆಯಾಗುತ್ತಿದೆ.. 

Malenadu Today

ಆದರೆ, ಈ ಡಮ್ಮಿ ಟ್ರಂಕ್​ ಪ್ರಕರಣ ಮತ್ತೊಂದು ರೋಚಕ ಕ್ರಿಮಿನಲ್​ ಕೇಸನ್ನ ಬಯಲು ಮಾಡಿದೆ. ನಂಬಿಕೆಯನ್ನೇ ದ್ರೋಹಕ್ಕೆ ಬಳಸಿಕೊಳ್ಳುತ್ತಿದ್ದ ಗ್ಯಾಂಗ್ ಇದುವರೆಗೂ ಹಲವರನ್ನ ಮೋಸದ ಮಾಡಿದ್ದ ಜೋಡೆತ್ತುಗಳು ಸಿಕ್ಕಿಬೀಳುವುದಕ್ಕೆ ಇಡೀ ಕೇಸ್ ಕಾರಣವಾಗಿದೆ. ಇಷ್ಟಕ್ಕೂ ಏನಿದು ಪ್ರಕರಣ ಅನ್ನೋದನ್ನ ಈಗಾಗಲೇ ಸೂಕ್ಷ್ಮವಾಗಿ ಹೇಳಿದ್ದವು. ಇದೀಗ ಪ್ರಕರಣ ಪೂರ್ತಿ ವಿವರ ಎಫ್​ಐಆರ್​ನಲ್ಲಿ ಬಯಲಾಗಿದೆ. 

READ : ಸಿಡಿಯಿತು ಅನುಮಾನಸ್ಪದ ಬಾಕ್ಸ್ ನ​ ಮನಿ ರಹಸ್ಯ!? ಏನದು ಗೊತ್ತಾ? ತುಮಕೂರು-ತಿಪಟೂರು-ಶಿವಮೊಗ್ಗ!?

IPC 1860 (U/s-420,268,506,511,34) ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ತಿಪಟೂರು ಮೂಲದವರು ದೂರು ನೀಡಿದ್ದನ್ನ ಆಧರಿಸಿ ಕೇಸ್ ದಾಖಲಿಸಲಾಗಿದೆ. 420 ಅಂದರೆ ಮೋಸ ವಂಚನೆ, 268 ಅಂದರೆ ಸಾರ್ವಜನಿಕರಿಗೆ ಉಪದ್ರ ನೀಡುವುದು ಅಥವಾ ಪಬ್ಲಿಕ್ ನ್ಯೂಸೆನ್ಸ್​, 506 ಅಂದರೆ ಅಪರಾದ ಮಾಡುವ ಉದ್ಧೇಶದಿಂದ ಎಸಗಿದ ಕ್ರಿಮಿನಲ್ ಕೃತ್ಯ 511 ಜೀವಾವಧಿ ಅಥವಾ ಇತರೇ ಶಿಕ್ಷೆಗಳಿಂದ ದಂಡಿಸಲ್ಪಡುವ ಅಪರಾಧ ಕೃತ್ಯವನ್ನು ಎಸೆಗಿದ ಅಪರಾಧ. 34 ಎಂದರೇ ಒಂದೇ ಉದ್ದೇಶದಿಂದ ಹಲವರು ಕೃತ್ಯವೆಸಗಿದ್ದು ಸಮಾನ ದಂಡನೆಗೆ ಬಳಸುವ ಸೆಕ್ಷನ್​. 

Malenadu Today

ಹೀಗೆ ಸಾಲು ಸಾಲು ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್​​ನಲ್ಲಿ ಏನಿದೆ ಎಂಬುದರ ವಿವರವನ್ನು ನೋಡುವುದಾದರೆ,  2023 ನೇ ಸಾಲಿನ ಜನವರಿ ತಿಂಗಳಲಿ ತಿಪಟೂರಿನ ಗಾಂಧಿನಗರದ ನಜ್ರುಲ್ಲಾ ಎಂಬವರು ದೂರುದಾರರಿಗೆ  ಪರಿಚಯವಾಗಿರುತ್ತಾರೆ 

READ : ಅನುಮಾನಸ್ಪದ ಬಾಕ್ಸ್​ ಇದ್ದ ಸ್ಥಳದಲ್ಲಿ ಎರಡು ಸಲ ಸ್ಫೋಟ! ಕಾರಣವೇನು? ನಡೆದಿದ್ದೇನು?

ತಿಪಟೂರು ಮೂಲದ ದೂರುದಾರರು ರಿಯಲ್ ಎಸ್ಟೇಟ್​ ಕೆಲಸ ಮಾಡಿಕೊಂಡಿರುವವರು. ಅವರಿಗೆ  ವ್ಯವಹಾರದ ಸಲುವಾಗಿ ಹಣದ ಅವಶ್ಯಕತೆ ಇರುವುದನ್ನ ನಜ್ರುಲ್ಲಾ ಅಲಿಯಾಸ ಬಾಬಣ್ಣ ಗಮನಿಸಿದ್ದ. ಹೀಗಾಗಿ ದೂರುದಾರರಿಗೆ  ನನಗೆ ಮುಳುಬಾಗಿಲಿನ ವ್ಯವಹಾರಕ್ಕೆ ಹಣ ಕೊಡುವ ದೊಡ್ಡ ಸಾಹುಕಾರರು ಪರಿಚಯ ಇದಾರೆ, ಅವರ ಬಳಿಯಿಂದ ನಿನ್ನ ವ್ಯವಹಾರಕ್ಕೆ, ಹಣ ಕೊಡಿಸುತ್ತೇನೆ ಎಂದು ಹೇಳಿದ್ದ. ಮೊದಲು ಸುಮ್ಮನಿದ್ದ ದೂರುದಾರರು ಕೊನೆಗೆ ಹಣದ ಅನಿವಾರ್ಯತೆಗಾಗಿ ಹೂ ಎಂದು ಸಮ್ಮತಿಸಿದ್ದರು. 

ಹೀಗೆ ಆರಂಭವಾಗಿ ನಂತರ ತಿಪಟೂರು ನಗರದ ಗೌವರ್ನಮೆಂಟ್ ಬಸ್ ಸ್ಟ್ಯಾಂಡ್ ಗೆ ಬರಲು ತಿಳಿಸಿದ್ದ್ದ ಬಾಬಣ್ಣ, ದೂರುದಾರರನ್ನ  ಭೇಟಿಯಾಗಿ ಅವರಿಗೆ ಕಮಿಷನ್ ಹಣ ಹಾಗೂ ಖರ್ಚಿಗೆ ಹಣ ನೀಡಬೇಕು ಎಂದು ಎರಡುವರೆ ಲಕ್ಷ ರೂಪಾಯಿಯನ್ನ ಪಡೆದುಕೊಂಡಿದ್ದ. ತದನಂತೆ ತನ್ನ ಸ್ನೇಹಿತ ಜಬಿವುಲ್ಲಾನ ಒಮಿನಿಯಲ್ಲಿ  ದೂರುದಾರರನ್ನ ಕರೆದುಕೊಂಡು ಮುಳಬಾಗಿಲಿನ ಸಾಹುಕಾರರನ್ನ ಭೇಟಿ ಮಾಡಿಸ್ತೀನಿ ಎಂದು ಕರೆದೊಯ್ದಿದ್ದ. ಅಲ್ಲಿ ಸಾಹುಕಾರರ ಮನೆಯನ್ನು ತೋರಿಸದೇ ಕಾರಿನಲ್ಲಿಯೇ ಕೂರಿಸಿ, ಬರುವಾಗ ಸಾಹುಕಾರರು ಬ್ಯುಸಿ ಇದ್ದಾರೆ ಎಂದಿದ್ದನ್ನಂತೆ ನಜ್ರುಲ್ಲಾ.. 

SHIVAMOGGA RAILWAY STATION | ಏನಿತ್ತು ಅನುಮಾಸ್ಪದ ಪೆಟ್ಟಿಗೆಯಲ್ಲಿ ? ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಅಲ್ಲದೆ ತನ್ನ ಜೊತೆಯಲ್ಲಿ ಎರಡು ಬಾಕ್ಸ್​ಗಳನ್ನು ತಂದಿದ್ದ ನಜ್ರುಲ್ಲಾ ಇದರಲ್ಲಿ ಇಬ್ಬರಿಗೆ ಸೇರಬೇಕಾದ ಹಣ ಇದೆ, ತಿಪಟೂರಲ್ಲಿ ಡೆಲಿವರಿ ಮಾಡುತ್ತೇನೆ ಎಂದಿದ್ದನ್ನಂತೆ. ಆನಂತರ ತಿಪಟೂರಿನಲ್ಲಿ ನಿಮ್ಮ ಮನೆಗೆ ತಲುಪಿಸುತ್ತೇನೆ. ಇದರಲ್ಲಿ ಇನ್ನೊಬ್ಬರಿಗೆ ಸೇರಬೇಕಾದ ಹಣವು ಇದೆ ಎಂದಿದ್ದ. ಇಷ್ಟೆಲ್ಲದರ ಬಳಿ ಮರುದಿನ ಬಾಬಣ್ಣ ಅಲಿಯಾಸ್ ನಜ್ರುಲ್ಲಾ ಹೊಸ ನಾಟಕ ಆರಂಭ ಮಾಡಿದ್ದಾನೆ. ಯಾರೋ ದುಷ್ಮನ್​ ಪೊಲೀಸರಿಗೆ ಹಾಕಿಕೊಟ್ಟಿದ್ದಾರೆ. ವಿಷಯ ಲೀಕ್ ಆಗಿದೆ ಎಂದೆಲ್ಲಾ ಕಥೆ ಹೇಳಲು ಆರಂಭವಾಗಿದೆ. 

ಅಷ್ಟೊತ್ತಿಗೆ ದೂರುದಾರರಿಗೂ ಅನುಮಾನ ಕಾಡಲು ಆರಂಭವಾಗಿದೆ. ಅದಕ್ಕೆ ಸಹವಾಸವೇ ಬೇಡ, ತನ್ನ ದುಡ್ಡು ವಾಪಸ್ ಕೊಡಪ್ಪ ಎಂದು ಹೇಳಿದ್ದಾರೆ. ಆಗ ಶಿವಮೊಗ್ಗದ ಹೈಡ್ರಾಮಾ ಆರಂಭವಾಗಿದೆ. ನವೆಂಬರ್ ಮೂರನೇ ತಾರೀಖು ನಜ್ರುಲ್ಲಾ ದೂರುದಾರರಿಗೆ ಫೋನ್ ಮಾಡಿ ಶಿವಮೊಗ್ಗದ ಗೋಪಿ ಸರ್ಕಲ್​ ಗೆ ಬರುವಂತೆ ತಿಳಿಸಿದ್ದನಂತೆ. ಅದರಂತೆ ದೂರುದಾರರು ಗೋಪಿ ಸರ್ಕಲ್​ಗೆ ಬಂದು ಕಾಯುತ್ತಿದ್ದರು. ಆದರೆ ಇತ್ತ ನಜ್ರುಲ್ಲಾ ಜಬಿವುಲ್ಲಾ ಜೊತೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಲಾಟ್​ನಲ್ಲಿ ಎರಡು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಬಳಿಕ ಗೋಪಿಸರ್ಕಲ್​ಗೆ ಹೋಗಿ ದೂರುದಾರರಿಗೆ ರೈಲ್ವೆ ನಿಲ್ದಾಣದಲ್ಲಿ ಎರಡು ಪೆಟ್ಟಿಗೆ ಇಟ್ಟಿದ್ದೇನೆ. ಒಂದು ನಿನ್ನದು ಇನ್ನೊಂದು ಗೋವಾದ ….ರವರದ್ದು.. ಪೊಲೀಸರಿದ್ದಾರೆ ಹುಷಾರಾಗಿ ಪೆಟ್ಟಿಗೆ ತಗೆದುಕೊಂಡು ಹೋಗು ಎಂದು ಮನಸ್ಸಿನಲ್ಲಿ ಲಾರಿ ಲೋಡ್ ಭಯ ತುಂಬಿ ಹೋಗಿದ್ದರು. 

Malenadu Today

ಇತ್ತ ದೂರುದಾರರು ಯಾಕೋ ಈ ಸಹವಾಸ ಸರಿಯಲ್ಲ ಎನಿಸಿ ಪೆಟ್ಟಿಗೆನೂ ಬೇಡ ಏನೂ ಬೇಡ ಎಂದು ಸೀದಾ ತಿಪಟೂರಿಗೆ ಹೋಗಿದ್ದಾರೆ. ಅತ್ತ ಗೋವಾ….ರವರು ಅಲ್ಲಿಗೆ ಬರುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ ಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು. ಆನಂತರ ಟಿವಿಗಳಲ್ಲಿ ಅನುಮಾನಸ್ಪದ ಬಾಕ್ಸ್​ ಸ್ಟೋರಿಯನ್ನು ನೋಡುತ್ತಲೇ ದೂರುದಾರರು ಶಿವಮೊಗ್ಗ ಪೊಲೀಸರನ್ನ ಸಂಪರ್ಕಿಸಿ ಹೀಗೀಗೆ ಎಂದು ತಿಳಿಸಿ ಕಂಪ್ಲೆಂಟ್ ಕೊಟ್ಟಿದ್ದಾರೆ. 

Shivamogga bomb ? | ರೈಲ್ವೆ ನಿಲ್ದಾಣದಲ್ಲಿ ಏನೆಲ್ಲಾ ಆಯ್ತು? ಸ್ಫೋಟಿಸಿದ್ದೇನು? ಪೆಟ್ಟಿಗೆಯಲ್ಲಿ ಏನಿತ್ತು? Full Report

ಹಣ ಕೊಡಿಸುತ್ತಾರೋ ಇಲ್ಲವೋ ಪೆಟ್ಟಿಗೆಯನ್ನು ತೆರೆದ ಮೇಲಷ್ಟೆ ಗೊತ್ತಾಗಬೇಕು. ಆದರೆ ಪೆಟ್ಟಿಗೆ ತೋರಿಸಿ, ಎಲ್ಲೋ ಇಟ್ಟು, ಅಲ್ಲಿದೆ ದುಡ್ಡು ತಗೊ? ಪೊಲೀಸರಿದ್ದಾರೆ ಹುಷಾರು ಅಂದರೆ, ದೈರ್ಯ ತೋರುವ ಗಂಡ್ಮಗ ಸಿಗೋದು ಕಷ್ಟ..ಕಷ್ಟ. ಇದನ್ನೆ ಬಂಡವಾಳ ಮಾಡ್ಕೊಂಡಿದ್ದ ನಜ್ರುಲ್ಲಾ ಬಹಳ ಜನರಿಗೆ ಬಹಳ ಸಾಹುಕಾರರನ್ನ  ಬರೀ ಮಾತಲ್ಲೇ ತೋರಿಸಿದ್ದಾರಂತೆ. ಹಲವರಿಂದ ಐದು ಹತ್ತು ಅಂತಾ ಸಿಕ್ಕಷ್ಟು ಕಮಿಷನ್ ಪಡ್ಕೊಂಡು, ಅವರಿಗೆ ಉಪ್ಪು ಪೇಪರ್​ನ ಟ್ರಂಕ್​ ತೋರಿಸಿ ದುಡ್ಡಿದೆ…ದುಡ್ಡಿದೆ…ಪೊಲೀಸು ಪೊಲೀಸು ಎಂದು ಹೆದರಿಸ್ತಿದ್ದನಂತೆ. 

ಸದ್ಯ ರೈಲ್ವೆ ನಿಲ್ದಾಣದ ಕೇಸ್​ನಿಂದಾಗಿ ನಜ್ರುಲ್ಲಾ ಸಿಕ್ಕಿಬಿದ್ದಿದ್ದಾನೆ. ಸಿಸಿ ಟಿವಿಯಲ್ಲಿ ಈತ ಬಂದಿದ್ದ ಒಮಿನಿಯ ಮಾಹಿತಿ ಸಿಕ್ಕಿದ್ದರಿಂದ ನಜ್ರುಲ್ಲಾ ತಕ್ಷಣವೇ ಟ್ರೇಸ್ ಆಗಿದ್ದ.  ಸಾಲ ಕೊಡಿಸ್ತೀನಿ ಎಂದು ಸುಲಿಗೆ ಮಾಡ್ತಿದ್ದ ನಜ್ರುಲ್ಲಾ ಶಿವಮೊಗ್ಗ ಪೊಲೀಸರಿಗೆ ಉಪ್ಪು ತಿನ್ನಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನಿಗೆ ಪೊಲೀಸರು ನೀರು ಕುಡಿಸ್ತಿದ್ದಾರೆ.. 


Leave a Comment