Shivamogga bomb ? | ರೈಲ್ವೆ ನಿಲ್ದಾಣದಲ್ಲಿ ಏನೆಲ್ಲಾ ಆಯ್ತು? ಸ್ಫೋಟಿಸಿದ್ದೇನು? ಪೆಟ್ಟಿಗೆಯಲ್ಲಿ ಏನಿತ್ತು? Full Report

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

ನಿನ್ನೆ ಮಧ್ಯಾಹ್ನದಿಂದ ಶಿವಮೊಗ್ಗ ರೈಲ್ವೆ ನಿಲ್ದಾಣ ದಲ್ಲಿ ಆರಂಭವಾದ ಪ್ರಹಸನ ನಿನ್ನೆ ತಡರಾತ್ರಿ ಬಿಡುವಿಲ್ಲದ ಮಳೆಯೊಂದಿಗೆ ಅಂತ್ಯ ಕಂಡಿದೆ. ಅಂತಿಮವಾಗಿ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ ಬಿಳಿ ಪೌಡರ್​ ಕಂಡು ಬಂದಿದೆ. ಇದಕ್ಕು ಮೊದಲು ಪೆಟ್ಟಿಗೆಯನ್ನ ಓಪನ್​ ಮಾಡಲು ಸಣ್ಣಸ್ಫೋಟವನ್ನು ಕೂಡ ಮಾಡಲಾಗಿತ್ತು. ಬಿಳಿ ಪೌಡರ್​ ಸ್ಫೋಟಕವಲ್ಲ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಇನ್ನೂ ಶಾಸಕ ಎಸ್​.ಎನ್​ ಚನ್ನಬಸಪ್ಪ ಶಿವಮೊಗ್ಗ ಸೇಫ್ ಎಂದಿದ್ದಾರೆ. 

ಶಿವಮೊಗ್ಗ ಬಾಂಬ್ | Shivamogga bomb| 

ನಿನ್ನೆ ಮಧ್ಯಾಹ್ನ ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆಯಾದ ಬಗ್ಗೆ ವರದಿಯಾಯ್ತು.  ಫುಡ್ ಗ್ರೈನ್ಸ್ ಆ್ಯಂಡ್ ಶುಗರ್ಸ್  ಎಂದು ಬರೆಯಲಾಗಿದ್ದ ಎರಡು ದೊಡ್ಡ ಪೆಟ್ಟಿಗೆಗಳನ್ನ  ರೈಲ್ವೆ ಸ್ಟೇಷನ್ ನ ಪಾರ್ಕಿಂಗ್ ಲಾಟ್ ನಲ್ಲಿ ಇರಿಸಲಾಗಿತ್ತು . ಒಂದು ದಿನವಾದರೂ ಸಹ ಬಾಕ್ಸ್ ತೆಗೆದುಕೊಂಡು ಹೋಗಲು ಯಾರು ಮುಂದಾಗಿಲ್ಲ. ಹೀಗಾಗಿ ನಿನ್ನೆ ಸಿಬ್ಬಂದಿ ಅನುಮಾನಗೊಂಡು ಪರಿಶೀಲನೆಗೆ ಮುಂದಾಗಿದ್ದಾರೆ. 

ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಅವರು ಸ್ಪೋಟಕ ಪತ್ತೆ ಮಷಿನ್​ನ ಮೂಲಕ ಪೆಟ್ಟಿಗೆಯನ್ನ ಪರಿಶೀಲಿಸಿದ್ದಾರೆ. ಆದರೆ ಅಂತಹ ವಿಶೇಷಗಳು ಅಲ್ಲಿ ಕಂಡು ಬಂದಿರಲಿಲ್ಲ. ಆದಾಗ್ಯು ಅನುಮಾನ ಹೆಚ್ಚಾದ್ದರಿಂದ ಸ್ಥಳಕ್ಕೆ ಶ್ವಾನದಳ ಆಗಮಿಸಿತು. ಆನಂತರ ವಿಶೇಷ ಪೊಲೀಸರ ತಂಡ ರಚನೆ ಆಯ್ತು. ಸ್ಥಳದಲ್ಲಿ ಮಾಧ್ಯಮಗಳು ಮೊಕ್ಕಾಂ ಹೂಡಿದವು. ಆದರೆ ಬಾಂಬ್​ ನಿಷ್ಕ್ರೀಯ ದಳ ಬೆಂಗಳೂರಿನಿಂದ ಬರಬೇಕಾಗಿದ್ದರಿಂದ ರಾತ್ರಿಯವರೆಗೂ ಕಾಯಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು. 

ಇನ್ನೂ ಮಧ್ಯಾಹ್ನ ಸಂಜೆಯಾಗಿ, ಸಂಜೆಗೆ ಕತ್ತಲಾವರಿಸಿ, ಕರೆಂಟ್ ಬೆಳಕು ರೈಲ್ವೆ ನಿಲ್ದಾಣವನ್ನು ಬೆಳಗುವ ಹೊತ್ತಿಗೆ ಪೆಟ್ಟಿಗೆಯ ಸುತ್ತ ಮರಳು ಚೀಲಗಳನ್ನು ಹಾಕಿ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇತ್ತಾ ಹವಾಮಾನ ವರದಿ ಕೊಟ್ಟ ಸೂಚನೆಯಂತೆ ಸುರಿಯಲಾರಂಭಿಸಿದ ಮಳೆ ಪೆಟ್ಟಿಗೆಯಲ್ಲಿ ಏನಿದೆ ಎಂಬ ನಿಗೂಢತೆಯನ್ನು ಇನ್ನಷ್ಟು ಹೊತ್ತು ಕಾಯುವಂತೆ ಮಾಡಿತು.. ನಿನ್ನೆ ಬೆಳಗ್ಗೆ  ಬೆಳಿಗ್ಗೆ 10 ಗಂಟೆಗೆ ಪತ್ತೆಯಾದ  ಬಾಕ್ಸ್ ನಲ್ಲಿ ಏನಿದೆ ಎಂಬುದು ರಾತ್ರಿ 10 ಗಂಟೆಯಾದರೂ ಗೊತ್ತಾಗಲಿಲ್ಲ. ಶಾಸಕ ಎಸ್​.ಎನ್​ ಚೆನ್ನಬಸರಪ್ಪರವರು ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಮುಂದೇನು ಎಂಬಂತೆ ಕಾಯುತ್ತಿದ್ದರು.. 

READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?

ಇಷ್ಟೆಲ್ಲಾ ಆಗುವ ಹೊತ್ತಿಗೆ ಸಿಸಿ ಟಿವಿ ಪೂಟೇಜ್​ನಲ್ಲಿ ಅನುಮಾನಸ್ಪದ ವಾಹನ ಪತ್ತೆಯಾಗಿತ್ತು. ಪೆಟ್ಟಿಗೆ ಇಳಿಸಿದ್ದ ಒಮಿನಿ ವಾಹನದ ಚಿತ್ರಣದ ಬೆನ್ನುಬಿದ್ದಿದ್ದ ಪೊಲೀಸರು ಓರ್ವನನ್ನ ವಶಕ್ಕೆ ತೆಗೆದುಕೊಂಡಿದ್ದರು. ಒಂದು ಪೊಲೀಸ್ ಟೀಂ ಆತನನ್ನು ವಿಚಾರಣೆಗೆ ಒಳಪಡಿಸಿತ್ತಾದರೂ ಅಲ್ಲೇನು ಹೆಚ್ಚಿಗೆ ವಿಷಯ ಸಿಕ್ಕಂತಿರಲಿಲ್ಲ. 

ರಾತ್ರಿ ಮಧ್ಯರಾತ್ರಿ ಆಗುವಹೊತ್ತಿಗೆ ಬೆಂಗಳೂರಿನಿಂದ ಬಾಂಬ್​ ನಿಷ್ಕ್ರೀಯ ದಳದ ಆಗಮನವಾಯ್ತು. ಅವರ ಸಿದ್ಧ ಉಡುಪನ್ನ ಧರಿಸಿ ಶಂಕಿತ ಪೆಟ್ಟಿಗೆಯ ಬಳಿ ಓಡಾಡಿ ನೋಡುವ ಹೊತ್ತಿಗೆ ಮತ್ತೆ ವರುಣನ ಆಗಮನ. ಕಾರ್ಯಾಚರಣೆಗೆ ಮತ್ತೆ ಬ್ರೇಕ್​.. 

READ : BREAKING NEWS | ತೀರ್ಥಹಳ್ಳಿ ಮೂಲದ ಉಪನಿರ್ದೇಶಕಿ ಪ್ರತಿಮಾ ಹತ್ಯೆ | ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿಯೇ ಭೀಕರ ಘಟನೆ

ಸ್ಫೋಟಕ ನಿಷ್ಕ್ರೀಯ ದಳದ ಸಿಬ್ಬಂದಿ ತಮ್ಮ ಕೆಲಸ ಮಾಡಲು ಬಿಡದಂತೆ ವರ್ಷಧಾರೆ ಇನ್ನಿಲ್ಲದಂತೆ ಕಾಡಿತು. ಅಂತಿಮವಾಗಿ ತಡರಾತ್ರಿಯ ವೇಳೆ. ಪೆಟ್ವಿಗೆಯ ರಹಸ್ಯ ಬಯಲಾಗುವ ಕ್ಲೈಮ್ಯಾಕ್ಸ್​ ಸನ್ನಿವೇಶ ಕಾಣ ಸಿಕ್ಕಿತ್ತು. ವಿಶೇಷ ದಳದ ಸಿಬ್ಬಂದಿ ಪೆಟ್ಟಿಗೆಯ ಬೀಗವನ್ನು ಸಣ್ಣದೊಂದು ಬ್ಲಾಸ್ಟ್ ಮಾಡಿ ಓಪನ್ ಮಾಡಿದ್ರು. ಆನಂತರ ಪೆಟ್ಟಿಗೆಯೊಳಗೆ ಹಣಕಿ ನೋಡಿದರೆ, ಬಿಳಿ ಪೌಡರ್​ನ ಬ್ಯಾಗ್​ಗಳು ದೊರಕಿದವು. ಏನದು? 

ಎಲ್ಲಾ ಆಯ್ತು..  ಆದರೆ ಏನದು ಪೆಟ್ಟಿಗೆಯೊಳಗಿನ ಪೌಡರ್​…ಮುಂಜಾವಿನ ಹೊತ್ತಿಗೆ ಹೊಸ ಪ್ರಶ್ನೆಯೊಂದು ತಲೆದೋರಿತು. ಸದ್ಯ ಈ ಬಗ್ಗೆ ಎಸ್​ಪಿಯವರು ಅದು ಸ್ಫೋಟಕ ಅಲ್ಲ ಎಂದಿದ್ದಾರೆ. ಇನ್ನೊಂದೆಡೆ ಶಾಸಕ ಎಸ್​ಎನ್​ ಚೆನ್ನಬಸಪ್ಪ ಸಿಕ್ಕಿದ್ದು ಮುಖಕ್ಕೆ ಹಚ್ಚುವ ಪೌಡರ್​ ಸಹ ಅಲ್ಲ ಎಂದಿದ್ದಾರೆ. ಹಾಗಾದರೇ ಏನದು ಎಫ್​ಎಸ್​ಎಲ್​ ನ ಲ್ಯಾಬ್​ನಲ್ಲಿ ಪೌಡರ್​ ಪ್ರಯೋಗ ನಡೆದ ಬಳಿಕ ಸತ್ಯ ಸ್ಪಷ್ಟವಾಗಲಿದೆ..ಅಂತಿಮವಾಗಿ ಶಾಸಕರು ಹೇಳುವಂತೆ ಶಿವಮೊಗ್ಗ ಸೇಫ್​…(shivamogga safe)ಪ್ರಕರಣದ ತನಿಖೆ ಮಾತ್ರ ಮುಂದುವರಿಯಲಿದೆ 

TAGS: #ShivamoggaBomb #Shivamoggasafe #shivamoggarailwaystation 


Leave a Comment