STATE NEWS

ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA |  ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿಯ ಕೊಲೆ ಘಟನೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಮೂಲತಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂ ಕುಂಡ್ಲೂರು ನಿವಾಸಿಯಾದ ಅವರು ತುಂಗಾ ಕಾಲೇಜಿನಲ್ಲಿ ಅದ್ಯಯನ ಮಾಡಿದ್ರು. 

ಆನಂತರ ಕುವೆಂಪು ವಿವಿಯಲ್ಲಿ ಅಧ್ಯಯನ ಮುಗಿಸಿ ಭೂವಿಜ್ಞಾನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇಡೀ ಇಲಾಖೆಯಲ್ಲಿ ಉತ್ತಮ ಹೆಸರನ್ನ ಗಳಿಸಿದ್ದ ಪ್ರತಿಮಾ ಖಡಕ್ ಅಧಿಕಾರಿಯು ಸಹ ಆಗಿದ್ದರು. ಈ ಬಗ್ಗೆ ಅವರ ಇಲಾಖೆಯ ಸಹದ್ಯೋಗಿಗಳು ಸಹ ನೆನಪು ಮಾಡಿಕೊಳ್ಳುತ್ತಾರೆ. 

READ : BREAKING NEWS | ತೀರ್ಥಹಳ್ಳಿ ಮೂಲದ ಉಪನಿರ್ದೇಶಕಿ ಪ್ರತಿಮಾ ಹತ್ಯೆ | ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿಯೇ ಭೀಕರ ಘಟನೆ

ಉತ್ತಮ ಅಧಿಕಾರಿ ಎನಿಸಿದ್ದ ಪ್ರತಿಮಾರವರ ಕೌಟುಂಬಿಕ ಜೀವನದಲ್ಲಿ ಒಡಕು ಮೂಡಿತ್ತಾದರೂ, ಆ ವಿಚಾರವೂ ವೈಯಕ್ತಿಕ ನೆಲೆಗಟ್ಟಿಗೆ ಸೀಮಿತವಾಗಿತ್ತು. ಇನ್ನೂ ಸದ್ಯ ಪ್ರತಿಮಾರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಮಾರವರ ಅತ್ತೆ ಪ್ರೇಮಾರವರು ಮಾದ್ಯಮವೊಂದರ ಬಳಿ ಮಾತನಾಡಿದ್ದಾರೆ. 

ಈ ವೇಳೆ ನಿನ್ನೆಯಷ್ಟೆ ಪ್ರತಿಮಾ ಕರೆ ಮಾಡಿದ್ದರು. ಇತ್ತೀಚೆಗೆ ಮನೆಯ ಗೃಹಪ್ರವೇಶ ಮಾಡಿ ಅವರು ಬೆಂಗಳೂರಿಗೆ ತೆರಳಿದ್ದರು. ಮೂರು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಆಕೆಗೆ ಯಾವುದೇ ಬೆದರಿಕೆ ಇರಲಿಲ್ಲ ಎಂದಿದ್ದಾರೆ 


END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Malenadu Today