KARNATAKA NEWS/ ONLINE / Malenadu today/ Nov 6, 2023 SHIVAMOGGA NEWS
SHIVAMOGGA | ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಲಾಟ್ನಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಗಳನ್ನ ಓಪನ್ ಮಾಡಲು ನಿನ್ನೆ ಎರಡು ಬಾರಿ ಸ್ಫೋಟ ನಡೆಸಲಾಗಿತ್ತು. ಅದರ ವಿವರವನ್ನು ಹೇಳುವಾದರೆ, ನಿನ್ನೆ ಬೆಳಗಿನ ಜಾವದ ವರೆಗೂ ಕಾರ್ಯಾಚರಣೆ ಮುಂದುವರಿದಿತ್ತು. ಗೋಣಿ ಚೀಲ ಬಿಗಿದ್ದಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಒತ್ತಡ ಹೇರಿ ಲಾಕ್ ಓಪನ್ ಮಾಡುವುದು ಸಹ ಅಪಾಯಕ್ಕೆ ದಾರಿಮಾಡಿಕೊಡುವ ಸಂಭವ ಇತ್ತು. ಹೀಗಾಗಿ ಬೀಗವನ್ನ ಒಡೆಯಲು ಸಣ್ಣ ಮಟ್ಟಿಗಿನ ಸ್ಫೋಟವನ್ನ ಮಾಡಲಾಯ್ತು.
ತಡರಾತ್ರಿ 2.40 ರ ಸುಮಾರಿಗೆ ಮೊದಲ ಸಲ ಸ್ಫೋಟಕವನ್ನ ಬಳಸಿ ಒಂದು ಟ್ರಂಕ್ನ್ನ ಓಪನ್ ಮಾಡಲಾಯ್ತು. ಅದರಲ್ಲಿ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು.
ಆನಂತರ 3.20 ರ ಹೊತ್ತಿಗೆ ಮತ್ತೊಂದು ಟ್ರಂಕ್ನ್ನು ಕೂಡ ಸ್ಫೋಟಕ ಬಳಸಿ ಸಿಡಿಸಲಾಯ್ತು. ಅದರಲ್ಲಿಯು ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು.
ಸ್ಪೋಟಕ ಅಳವಡಿಸಿ ರಾತ್ರಿ 2.40ಕ್ಕೆ ಮೊದಲ ಬಾರಿ ಸ್ಪೋಟಿಸಿ ಒಂದು ಟ್ರಂಕ್ ತೆರೆಯಲಾಯಿತು. ಅದರಲ್ಲಿ ಕೆಲವು ನ್ಯೂಸ್ ಪೇಪರ್‌ಗಳು, ಬಿಳಿ ಬಣ್ಣದ ಪೌಡರ್ ಇರುವ ಪ್ಯಾಕೆಟ್ ದೊರೆತಿದೆ. ರಾತ್ರಿ 3.24ಕ್ಕೆ ಎರಡನೇ ಬಾರಿ ಸ್ಪೋಟಿಸಿ ಮತ್ತೊಂದು ಟ್ರಂಕ್ ತೆಗೆಯಲಾಯಿತು. ಅದರಲ್ಲಿಯು ನ್ಯೂಸ್ ಪೇಪರ್ ಮತ್ತು ಬಿಳಿ ಬಣ್ಣದ ಪೌಡರ್ ದೊರೆತಿದೆ.
ಇನ್ನೂ ಈ ಪೆಟ್ಟಿಗೆಗಳಲ್ಲಿ ಸಿಕ್ಕಿದ್ದು ಏನು ಎಂಬುದನ್ನ ಎಸ್ಪಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ವಾಟ್ಸ್ಯಾಪ್ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?
ಶಿವಮೊಗ್ಗ ಬಾಂಬ್ | Shivamogga bomb| : #ShivamoggaBomb #Shivamoggasafe #shivamoggarailwaystation
