KARNATAKA NEWS/ ONLINE / Malenadu today/ Nov 7, 2023 SHIVAMOGGA NEWS
Hosanagara | ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್ನ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಜಯನಗರ ಪೊಲೀಸ್ ಠಾಣೆಗೆ (jayanagar police station shivamogga ) ಅನುಮಾನಸ್ಪದ ಬಾಕ್ಸ್ ಸಿಕ್ಕ ಬಗ್ಗೆ ಪೊಲೀಸರಿಗೆ ಮಾಹಿತಿಲಭ್ಯವಾಗಿತ್ತು. ಅದರ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿತ್ತು. ಹಾಗಾಗಿ ಇರುವ ಸಂಶಯ ದಟ್ಟವಾಗಿ ಬೆಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳ ಆಗಮಿಸಬೇಕಾಗಿ ಬಂತು.
ರಾಜಧಾನಿಯಿಂದ ಬಂದ ಬಾಂಬ್ ಸ್ಕ್ವಾಡ್ ಕೊನೆಗೆ ಪೆಟ್ಟಿಗೆಯ ಬೀಗವನ್ನ ಸ್ಫೋಟಿಸಿ ಬಾಕ್ಸ್ನ್ನ ಓಪನ್ ಮಾಡಿತ್ತು. ಬಳಿಕ ಅದರೊಳಗಿರುವ ವಸ್ತುಗಳನ್ನ ಪ್ರಾಯೋಗಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಾಥಮಿಕ ಹಂತದ ತನಿಖೆಯಲ್ಲಿ ಬಾಕ್ಸ್ನಲ್ಲಿ ಇದ್ದದ್ದು ಟೇಬಲ್ ಸಾಲ್ಟ್ ಎಂಬುದು ಗೊತ್ತಾಗಿತ್ತು. ಆದರೆ ಆ ಪೆಟ್ಟಿಗೆ ಯಾರದ್ದು ಅದರ ಹಿಂದೆ ಯಾರಿದ್ದಾರೆ ಎಂಬುದು ನಿಗೂಢವಾಗಿತ್ತು.
READ : ತೋಟಕ್ಕೆ ಹೋಗಿದ್ದ ಅಜ್ಜಿ ನಿಗೂಢ ನಾಪತ್ತೆ| 48 ಗಂಟೆ ಕಳೆದರೂ ಸಿಗದ ಕ್ಲ್ಯೂ| ಹೊಸನಗರದಲ್ಲಿ ವೃದ್ಧೆಗಾಗಿ ಕೂಂಬಿಂಗ್!
ಅಂದು ಇಡೀ ದಿನ ಹೈಡ್ರಾಮಕ್ಕೆ ಕಾರಣವಾಗಿದ್ದ ಕಬ್ಬಿಣದ ಪೆಟ್ಟಿಗೆಯ ಹಿಂದಿನ ರಹಸ್ಯ ಇದೀಗ ಬಯಲಾಗಿದೆ. ಈ ಪೆಟ್ಟಿಗೆಯ ವಿಚಾರವಾಗಿ ಶಿವಮೊಗ್ಗ ಪೊಲೀಸರು ಭಾನುವಾರವೇ ಇಬ್ಬರನ್ನ ವಶಕ್ಕೆ ಪಡೆದಿದ್ದರು.ಅವರ ವಿಚಾರಣೆಯಲ್ಲಿ ರೋಚಕ ವಿಷಯ ಹೊರಕ್ಕೆ ಬಂದಿದೆ.
ಶಿವಮೊಗ್ಗ ರೈಲ್ವೆ ಇಲಾಖೆಯ ಪಾರ್ಕಿಂಗ್ ಲಾಟ್ ನಲ್ಲಿ ಎರಡು ಪೆಟ್ಟಿಗೆಗಳನ್ನು ಇಟ್ಟು ಎಸ್ಕೇಪ್ ಆಗಿದ್ದ ಒಮಿನಿ ವಾಹನದಲ್ಲಿ ತಿಪಟೂರು ಮೂಲದ ಇಬ್ಬರು ಇದ್ದರು. ಅವರನ್ನ ಬೆನ್ನಟ್ಟಿದ್ದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಶಿವಮೊಗ್ಗಕ್ಕೆ ವಾಪಸ್ ಆಗಿದ್ದರು.
READ : SHIVAMOGGA RAILWAY STATION | ಏನಿತ್ತು ಅನುಮಾಸ್ಪದ ಪೆಟ್ಟಿಗೆಯಲ್ಲಿ ? ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಇಬ್ಬರು ಆರೋಪಿಗಳನ್ನ ಜಬಿವುಲ್ಲಾ ಹಾಗೂ ನಸ್ರುಲ್ಲಾ ಎಂದು ಗುರುತಿಸಲಾಗಿದೆ. ಈ ಆರೋಪಿಗಳು, ತಮ್ಮದೇ ಆದ ವಿಶಿಷ್ಟ ವಂಚನೆಯ ಜಾಲವನ್ನ ಮಾಡಿಕೊಂಡಿದ್ದು, ಅದರ ಒಂದು ಭಾಗವೇ ಈ ಬಾಕ್ಸ್ ಆಗಿತ್ತು.
ತಿಪಟೂರು ಮೂಲದ ನಸ್ರುಲ್ಲಾ ಹಾಗೂ ಜಬಿವುಲ್ಲಾ ಎಂಬಿಬ್ಬರು ಹಣದ ಅವಶ್ಯಕತೆ ಇರುವ ವ್ಯಕ್ತಿಗಳನ್ನ ಸಂಪರ್ಕ ಮಾಡಿ ಅವರಿಗೆ ಲೋನ್ ಕೊಡಿಸುವುದಾಗಿ ಹೇಳಿ ಅವರಿಂದ ಕಮಿಷನ್ ಪಡೆಯುತ್ತಿದ್ದರು
READ : ಅನುಮಾನಸ್ಪದ ಬಾಕ್ಸ್ ಇದ್ದ ಸ್ಥಳದಲ್ಲಿ ಎರಡು ಸಲ ಸ್ಫೋಟ! ಕಾರಣವೇನು? ನಡೆದಿದ್ದೇನು?
ಆನಂತರ ಲೋನ್ ಕೇಳಿದ ವ್ಯಕ್ತಿಯನ್ನ ಕರೆದುಕೊಂಡು ಒಂದೆರಡು ಕಡೆ ಓಡಾಡಿ ಅವರಿಗೆ ನಂಬಿಕೆ ಹುಟ್ಟಿಸುತ್ತಿದ್ದರು. ತಮ್ಮ ಕಮಿಷನ್ ಪಡೆದ ನಂತರ ಪೆಟ್ಟಿಗೆಯಲ್ಲಿ ಬಾರವಾದ ವಸ್ತುಗಳನ್ನ ತುಂಬಿಸಿ ಅದನ್ನ ಒಂದು ಕಡೆಯಲ್ಲಿ ಇಟ್ಟು ಹಣ ನಾವು ತಲಪಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಕಡೆಯಲ್ಲಿ ಇಟ್ಟಿದ್ದೇವೆ ತೆಗೆದುಕೊಳ್ಳಿ ಪೊಲೀಸ್ ಇಲಾಖೆಯ ಪ್ರಾಬ್ಲಮ್ ಇದೆ ಎಂದು ಹೇಳುತ್ತಿದ್ದರಂತೆ. ಹಾಗೆ ಇಟ್ಟು ಹೋದ ಬಾಕ್ಸ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಕ್ಕೆ ಬರಬೇಕಾಗಿದ್ದು, ಅದರ ವಿವರವನ್ನು ಸದ್ಯದಲ್ಲಿಯೇ ನೀಡುತ್ತೇವೆ
