ಶಿವಮೊಗ್ಗದಲ್ಲಿ ಸಾವಿರಾರು ಜನರು ಒಟ್ಟಾಗಿ World Cup Final ಮ್ಯಾಚ್​ ನೋಡಬಹುದು ! ಇಲ್ಲಿದೆ ಅವಕಾಶ!

Arrangements have been made for the live streaming of the World Cup final match at The Nehru Stadium in Shivamogga, Modi, India, Australia,

ಶಿವಮೊಗ್ಗದಲ್ಲಿ  ಸಾವಿರಾರು ಜನರು ಒಟ್ಟಾಗಿ World Cup Final  ಮ್ಯಾಚ್​ ನೋಡಬಹುದು ! ಇಲ್ಲಿದೆ ಅವಕಾಶ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

 Shivamogga |  Malnenadutoday.com |   ಗುಜರಾತ್​ನ ಅಹಮದಾಬಾದ್​ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿರುವ ವಿಶ್ವಕಪ್​ ಫೈನಲ್ ಪಂದ್ಯ ವಿಕ್ಷಣೆಗೆ ಹಲವೆಡೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಪೂರಕವಾಗಿ ಶಿವಮೊಗ್ಗದಲ್ಲಿಯು ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ನೆಹರೂ ಸ್ಟೇಡಿಯಂನಲ್ಲಿ ವಿಶ್ವಕಪ್​ 

ಭಾರತ  ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ನೆಹರೂ ಕ್ರೀಡಾರಗಣದಲ್ಲಿ ಪ್ರಸಾರ ಮಾಡುವ ಸಂಬಂಧ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಪ್ರಕಟಣೆ ನೀಡಿದೆ

 

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಯನ್ನು  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೊಡ್ಡ ಎಲ್.ಇ.ಡಿ ‌ಗಳನ್ನು ಅಳವಡಿಸಿ ಫೈನಲ್​ ಪಂದ್ಯಾವಳಿಯನ್ನು ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ನೀಡುವಂತೆ ಇಲಾಖೆ ಸೂಚಿಸಿದೆ. 

READ :#worldcupfinal | ವಿಶ್ವಕಪ್​ ಗೆಲ್ಲಲಿ ಭಾರತ! ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು  ಮಧ್ಯಾಹ್ನ  1.30 ರಿಂದ ಮ್ಯಾಚ್ ಮುಕ್ತಾಯವಾಗುವವರೆಗೆ ನೆಹರು ಕ್ರೀಡಾಂಗಣದಲ್ಲಿ ದೊಡ್ಡ ಎಲ್.ಇ.ಡಿ ಸ್ಟೀನ್‌ಗಳನ್ನು ಆಳವಡಿಸಿ, ನೇರ ಪ್ರಸಾರ ಮಾಡುತ್ತಿರುವ ಬಗ್ಗೆ ತಿಳಿಸಲಾಗಿದ್ದು, ಜನರೆಲ್ಲಾ ಒಂದಾಗಿ ಮ್ಯಾಚ್ ನೋಡಲು ಅವಕಾಶ ಲಭ್ಯವಾಗಿದೆ