#worldcupfinal | ವಿಶ್ವಕಪ್ ಗೆಲ್ಲಲಿ ಭಾರತ! ದರ್ಗಾದಲ್ಲಿ ವಿಶೇಷ ಪ್ರಾರ್ಥನೆ
Special prayers were offered at the dargah in Shivamogga to wish India win the World Cup, Shivamogga News, Shivamogga News, Live News

KARNATAKA NEWS / ONLINE / Malenadu today/ Nov 18, 2023 SHIVAMOGGA NEWS
Shivamogga | Malnenadutoday.com | ನಾಳೆ ವಿಶ್ವಕಪ್ ಫೈನಲ್ (#worldcupfinal). ಟೀಂ ಇಂಡಿಯಾ ಅಜೆಯವಾಗಿ ಪೈನಲ್ಗೆ ಬಂದಿದೆ. ಸೋತು, ಗೆದ್ದು ಆಸ್ಟ್ರೇಲಿಯಾ ಭಾರತಕ್ಕೆ ಎದುರಾಳಿಯಾಗಿ ನಿಂತಿದೆ. ನಾಳೆ ಏನಾಗುವುದು ಬಲ್ಲವರು ಯಾರು? ಗೆಲ್ಲುವುದು ನಮ್ಮವರೇ ಇದು ನಿರೀಕ್ಷೆ..
ಇದರ ನಡುವೆ ಶಿವಮೊಗ್ಗದಲ್ಲಿ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಶಿವಮೊಗ್ಗದ ಹಜರತ್ ಸೈಯ್ಯದ್ ಷಾ ಅಲೀಂ ದಿವಾನ್ ಶಾ ಖಾದ್ರಿ ದರ್ಗಾದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದಾರೆ.
READ : ಹಾವು ಕಚ್ಚಿದ್ರೂ 2 ದಿನ ಆರಾಮಾಗಿದ್ದ ಮಹಿಳೆ! ನಂತರ ನಡೀತು ಈ ಘಟನೆ!
ದರ್ಗಾದಲ್ಲಿ ಹೂವಿನ ಚಾದರ ಹೊಂದಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಜೊತೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ವಿಶ್ವಕಪ್ನಲ್ಲಿ ಭಾರತ ಜಯಶಾಲಿ ಆಗಬೇಕು ಎಂದು ಕೋರಿದರು.
ಭಾರತ ಗೆಲ್ಲಲಿ ಎಂಧು ಘೋಷಣೆ ಕೂಗಿದ ಮಂದಿ ಬಳಿಕ ಕ್ರಿಕೆಟ್ ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ನಾಳೆ ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.. ವರ್ಲ್ಡ್ ಕಪ್ ನಮ್ಮದೇ ಎಂದಿದ್ದಾರೆ