ಸಂಸದರು ಉದ್ಘಾಟಿಸಿದ ಬೆನ್ನಲ್ಲೆ ಬಂದ್ ಆದ ತುಂಗಾ ಸೇತುವೆ ! ಏನಿದು ಟ್ವಿಸ್ಟ್ !?

Tunga bridge closed after mp's inauguration What's the twist!?

ಸಂಸದರು  ಉದ್ಘಾಟಿಸಿದ ಬೆನ್ನಲ್ಲೆ ಬಂದ್ ಆದ ತುಂಗಾ ಸೇತುವೆ ! ಏನಿದು ಟ್ವಿಸ್ಟ್ !?

SHIVAMOGGA |  Dec 20, 2023  |  ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಕಣ್ಣಿಗೆ ರಾಚುವಂತಿದೆ. ತಮ್ಮ ಎರಡು ಸಲದ ಅದಿಕಾರವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೆ ತಂದಿದ್ದಾರೆ. 

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ರಸ್ತೆ, ಮೇಲ್ಸೇತುವೆ ರೈಲ್ವೆ ವಿಮಾನ ನಿಲ್ದಾಣದಂತ ಕಾರ್ಯಗಳಲ್ಲಿ ಸಂಸದರ ಪಾತ್ರ ದೊಡ್ಡದಿದೆ. ಇವತ್ತು ರೈಲು ಹತ್ತುವ ಪ್ರಯಾಣಿಕರಿಂದ ಹಿಡಿದು ರಸ್ತೆಯಲ್ಲಿ ಸಾಗುವ ವಾಹನ ಸವಾರರು ಸಂಸದ ಬಿ.ವೈ ರಾಘವೇಂದ್ರರ ಹೆಸರು ಹೇಳದೆ ಸಾಗಲಾರರು. 

ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿರುವ ಬಿ.ವೈ ರಾಘವೇಂದ್ರ ಶಿವಮೊಗ್ಗದ ನ್ಯೂ ಮಂಡ್ಲಿ ಬಳಿಯ ನೂತನ ಸೇತುವೆಯನ್ನು ಉದ್ಘಾಟಿಸಲು ಆತುರ ತೋರಿದ್ದೇಕೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಮೊನ್ನೆ ತಾನೆ ಉದ್ಘಾಟನೆಯಾದ ಸೇತುವೆ ಸಾರ್ವಜನಿಕೆ ಸೇವೆಗೆ ಮುಕ್ತವಾಗಿತ್ತು, ಆದರೆ ಕೆಲವೇ ದಿನಗಳ ನಂತರ ಸೇತುವೆ ಬಂದ್ ಆಗಿದ್ದು,ಸೇತುವೆಯ ಇಕ್ಕೆಲ ರಸ್ತೆಗೆ ಡಾಂಬರ್ ಹಾಕುವ ಕೆಲಸ ನಡೆಯುತ್ತಿದೆ. 

READ :ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ ಬೆಂಗಳೂರು ಎಮ್ಮೆ ಸಂತೋಷ್​ & ಗ್ಯಾಂಗ್! 13 ಲಕ್ಷಕ್ಕೂ ಅಧಿಕ ಮೌಲ್ಯದ ಮಾಲು ಜಪ್ತಿ! ಪ್ರಕರಣದ ವಿವರ ಇಲ್ಲಿದೆ

ಎನ್. ಹೆಚ್ ರಸ್ತೆಗೆ ಪೂರಕವಾಗಿ ನಿರ್ಮಾಣವಾದ ಸೇತುವೆ ಕಾಮಗಾರಿ ಪೂರ್ಣವಾದ ನಂತರವಷ್ಟೆ  ಅಧಿಕಾರಿಗಳು ಕಂಪ್ಲೀಷನ್ ಸರ್ಟಿಫಿಕೇಟ್ ನೀಡುತ್ತಾರೆ ಆದರೆ ಇಲ್ಲಿ ಈ ರೀತಿಯ ಪಾರದರ್ಶಕತೆಯಲ್ಲಿ ಉದ್ಘಾಟನೆ ನಡೆದಿದೆ ಎಂಬುದೇ ಅನುಮಾನವಾಗಿದೆ. ಸೇತುವೆ ಉದ್ಘಾಟನೆ ನಂತರ ಈಗ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ.

ಇದೊಂದು ತರಾತುರಿಯ ನಿರ್ದಾರವಲ್ಲದೆ ಮತ್ತೇನು ಅಲ್ಲ. ಎಲ್ಲಾ ಕಾಮಗಾರಿಗಳು ಪೂರ್ಣ ಗೊಂಡ ನಂತರ ಸರ್ಕಾರದ ಶಿಷ್ಟಾಚಾರದಂತೆ ಸಂಸದರು ಸೇತುವೆ ಉದ್ಘಾಟನೆ ಮಾಡಿದ್ದರೆ, ಒಳ್ಳೆಯದಿತ್ತು. ಈ ಆತುರದ ಸೇತುವೆ ಉದ್ಘಾಟನೆ ಈಗ ಕಾಂಗ್ರೇಸ್ ಪಕ್ಷಕ್ಕೆ ಆಹಾರವಾಗಿದ್ದು, ಪಕ್ಷದ ವಕ್ತಾರ ಆಯನೂರು ಮಂಜುನಾಥ್ ನೇತವಾಗಿ ಕುಟುಕಿದ್ದಾರೆ.

ಸೇತುವೆ ಉದ್ಘಾಟನೆ ಅಧಿಕೃತವೋ? ಅನಧಿಕೃತವೋ ? ಎಂಬ ಸಂಶಯವೂ ಇದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಸೇತುವೆ ಕಾಮಗಾರಿ ಪೂರ್ಣಗೊಳಿಸಿದ ಸರ್ಟಿಫಿಕೇಟ್ ಸಿಕ್ಕಿಲ್ಲ. 

ಕಾರ್ಯಕ್ರಮದಲ್ಲಿ ಎಂಎಲ್ ಸಿ ಡಿಎಸ್ ಅರುಣ್, ರುದ್ರೆಗೌಡ ಮೊದಲಾದವರು ಉಪಸ್ಥಿತರಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿ ತರಾತುರಿಯಲ್ಲಿ ಉದ್ಘಾಟನೆ ನೆರವೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆಯನೂರು ಮಂಜುನಾಥ್ ಎತ್ತಿರುವ ಪ್ರಶ್ನೆಗಳಿಗೆ ಸಂಸದರು ಉತ್ತರಿಸಿದಲ್ಲಿ ಮಾತ್ರ ಜನತೆಗೆ ಸತ್ಯಾಂಶ ತಿಳಿಯಲಿದೆ.