ಹಾವು ಕಚ್ಚಿದ್ರೂ 2 ದಿನ ಆರಾಮಾಗಿದ್ದ ಮಹಿಳೆ! ನಂತರ ನಡೀತು ಈ ಘಟನೆ!

Two days after being bitten by a snake, a woman died at Anduvane in Chikkamagaluru district

ಹಾವು ಕಚ್ಚಿದ್ರೂ  2 ದಿನ ಆರಾಮಾಗಿದ್ದ ಮಹಿಳೆ! ನಂತರ ನಡೀತು ಈ ಘಟನೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Chikkamagaluru| Malnenadutoday.com |  ಹಾವು ಕಡಿದ ಬಳಿಕ, ಎರಡು ದಿನ ಆರೋಗ್ಯವಾಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಂಡುವಾನೆಯಲ್ಲಿ ಸಂಭವಿಸಿದೆ. 

ಇಲ್ಲಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 42 ವರ್ಷದ ಮಹಿಳೆ ಸ್ಥಳೀಯ ನಿವಾಸಿ ಸುಜಾತ ಎಂಬವರಿಗೆ ಹಾವು ಕಚ್ಚಿತ್ತು. ತಕ್ಷಣವೇ ಅವರು ವಿಷಯ ಪತಿಗೆ ತಿಳಿಸಿದ್ರು. ಪರಿ ವೆಂಕಟೇಶ್ ಗೌಡ ಎಂಬವರು, ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಕ್ಷೇಮವಾಗಿದ್ದ ಮಹಿಳೆಯನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಾಗಿದೆ . ಎಲ್ಲಾ ಪರೀಕ್ಷೆಗಳಲ್ಲಿಯು ರಿಪೋರ್ಟ್ ನಾರ್ಮಲ್​ ಬಂದಿದೆ. 

READ : ಬಾಂಬೆ ಬ್ಲಡ್​ ಎಂದರೇ ಏನು? ವಿಶ್ವದ ವಿಶಿಷ್ಟ ರಕ್ತದ ಬಗ್ಗೆ ಶಿವಮೊಗ್ಗದಲ್ಲೇಕೆ ಸುದ್ದಿಯಾಗ್ತಿದೆ ಗೊತ್ತಾ?

ಹಾಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ನಿನ್ನೆ ಗುರುವಾರ ಸುಜಾತರವರು ಸುಸ್ತು ಎಂದು ಮನೆಯವರಿಗೆ ಹೇಳಿದ್ದಾರೆ. ಆ ಬಳಿಕ ಪುನಃ ಆಸ್ಪತ್ರೆಗೆ ಪತಿಯೊಂದಿಗೆ ತೆರಳಿದ್ದಾರೆ. ಅಲ್ಲಿ ಅವರು ಸಾವನ್ನಪ್ಪಿದ್ದಾರೆ