ಶಿರಾಳಕೊಪ್ಪ | ಶಿವಮೊಗ್ಗ | ಸೀದಾ ಹೋಟೆಲ್‌ನೊಳಗೆ ನುಗ್ಗಿದ ಬೆಳಗಾವಿ ಮೂಲದ ಕಾರು |

Shiralakoppa | Shimoga | Belgaum-based car that entered Hotel

ಶಿರಾಳಕೊಪ್ಪ | ಶಿವಮೊಗ್ಗ |  ಸೀದಾ ಹೋಟೆಲ್‌ನೊಳಗೆ ನುಗ್ಗಿದ ಬೆಳಗಾವಿ ಮೂಲದ ಕಾರು |
Shiralakoppa,Shimoga ,Belgaum,

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ವಾಹನಗಳು ರಸ್ತೆಯಲ್ಲಿ ಡಿಕ್ಕಿಯಾಗುವುದು ಸಾಮಾನ್ಯ. ಆದರೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ಕಾರೊಂದು ರಸ್ತೆ ಪಕ್ಕದ ಹೋಟೆಲ್‌ವೊಂದಕ್ಕೆ ನುಗ್ಗಿ ಅಪಘಾತಕ್ಕೀಡಾಗಿದೆ.  ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ರಸ್ತೆ ಬದಿಯಲ್ಲಿದ್ದ  ಹೋಟೆಲ್ ಒಳಗೆ ನುಗ್ಗಿದೆ. 

ಶಿರಾಳಕೊಪ್ಪ  ಪಟ್ಟಣದ ಸೊರಬ ರಸ್ತೆ ಹಾಗೂ ಆನವಟ್ಟಿ ರಸ್ತೆ ಸೇರುವ ವೃತ್ತದಲ್ಲಿ ಈ ಘಟನೆ ಸಂಭವಿಸಿದೆ. ಅತ್ತ ಹುಬ್ಬಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರೊಂದು, ಸ್ಥಳದಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಚಾಲಕ ಕಂಟ್ರೋಲ್‌ ತೆಗೆದುಕೊಳ್ಳುವ ಹೊತ್ತಿಗೆ ಅಡ್ಡಾದಿಡ್ಡಿ ಓಡಿದ ಕಾರು ಸೀದಾ ಅಲ್ಲಿದ್ದ ಹೋಟೆಲ್‌ವೊಂದಕ್ಕೆ ನುಗ್ಗಿದೆ. 

ಇನ್ನೂ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿದ್ದ  ಅಜ್ಜ ಹಾಗೂ ಅವರ ಮೊಮ್ಮಗನಿಗೆ ಕಾರು ಡಿಕ್ಕಿಯಾಗಿದ್ದು, ಗಾಗಯೊಂಡಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ಅವರನ್ನ ಅಡಿಮಟ್‌ ಮಾಡಲಾಗಿದೆ. ಆ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಕಾರನ್ನು ಹೋಟೆಲ್‌ನಿಂದ ಹೊರಗಡೆ ತೆಗೆದಿದ್ದಾರೆ.  ಇನ್ನೂ ಕಾರಿನಲ್ಲಿದ್ದವರು ಬೆಳಗಾವಿ ಮೂಲದವರಾಗಿದ್ದು, ಧರ್ಮಸ್ಥಳಕ್ಕೆ  ದರ್ಶನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.