ಸರ್ಕಾರಿ ಬಸ್‌ ಹತ್ತುವಾಗ ನೂಕುನುಗ್ಗಲು| ಚಕ್ರಕ್ಕೆ ಸಿಲುಕಿ ಮಹಿಳೆ ಸಾವು | ಸಿಗಂದೂರಲ್ಲಿ ಏನಾಯ್ತು?

Rush while boarding the government bus A woman died after getting stuck under the wheel What happened in Sigandur?

ಸರ್ಕಾರಿ ಬಸ್‌ ಹತ್ತುವಾಗ ನೂಕುನುಗ್ಗಲು| ಚಕ್ರಕ್ಕೆ ಸಿಲುಕಿ ಮಹಿಳೆ ಸಾವು | ಸಿಗಂದೂರಲ್ಲಿ ಏನಾಯ್ತು?
Sigandur

SHIVAMOGGA | MALENADUTODAY NEWS | May 18, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಸಮೀಪ ನಡೆಯಬಾರದ ಘಟನೆಯೊಂದು ನಡೆದಿದೆ. ಬಸ್‌ ಹತ್ತುವ ಭರದಲ್ಲಿ, ವಾಹನದ ಚಕ್ರದಡಿ ಸಿಲುಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಹೊಳೆಬಾಗಿಲಿನ ಅಂಬಾರಗೋಡ್ಲು ಹತ್ತರ ಈ ಘಟನೆ ಸಂಭವಿಸಿದೆ. 

ಲಾಂಚ್‌ ಓಡಾಟದ ಜಾಗದ ಬಳಿ ಸಾಗರ ಕಡೆಗೆ ಹೊರಟಿದ್ದ ಬಸ್‌ಗೆ ಹತ್ತಲು ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಮಹಿಳೆಯೊಬ್ಬರು ಆಯತಪ್ಪಿ ಬಸ್‌ನ ಚಕ್ರದಡಿ ಬಿದ್ದಿದ್ದಾರೆ. ಜನಸಂದಣಿಯ ನಡುವೆ ಬಸ್‌ ಮುಂದಕ್ಕೆ ಹೋಗಿದೆ. ಈ ವೇಳೆ ಅಪಾಯ ಸಂಭವಿಸಿದೆ. 

ಮೃತರನ್ನು ಧಾರವಾಡ ಜಿಲ್ಲೆ ಸೋಮಿನ ಕೊಪ್ಪದ ಮಂಜುಳಾ (38) ಎಂದು ಗುರುತಿಸಲಾಗಿದೆ. ಅವರು ನಿನ್ನೆ  ಸಿಗಂದೂರಿಗೆ ಬಂದಿದ್ದು ದರ್ಶನ ಮುಗಿಸಿ ವಾಪಸ್‌ ಆಗುತ್ತಿದ್ದರು. ಕುಟುಂಬ ಸದಸ್ಯರ ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮುಂದಾದಾಗ ಈ ಘಟನೆ ಸಂಭವಿಸಿದೆ. 

ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರಿಂದ ರಶ್‌ ಆಗುತ್ತಿದೆ. ಅಲ್ಲದೆ ಬಸ್‌ ಹತ್ತಿ ಸೀಟು ಹಿಡಿಯುವ ಸಂಬಂಧ ಸಾಕಷ್ಟು ಘಟನೆಗಳು ನಡೆಯುತ್ತವೆ. ಹೀಗೆ ಉಂಟಾದ ರಶ್‌ ಘಟನೆಗೆ ಕಾರಣವಾಯ್ತಾ ಇನ್ನಷ್ಟೆ ಗೊತ್ತಾಗಬೇಕಿದೆ. ಇನ್ನೊಂದೆಡೆ ನಿನ್ನೆ ಶುಕ್ರವಾರ ಆದ್ದರಿಂದ ಸಹಜವಾಗಿಯೇ ಸಿಗಂದೂರಿನಲ್ಲಿ ರಶ್‌ ಜಾಸ್ತಿಯಿರುತ್ತದೆ. ಒಟ್ಟಾರೆ ಘಟನೆಗೆ ನೂಕುನುಗ್ಗಲು ಕಾರಣ ಎಂಬುದು ಗೊತ್ತಾಗಿದ್ದು, ಆದರೆ ನೂಕುನುಗ್ಗಲು ಉಂಟಾಗಲು ಎದುರಾದ ಸನ್ನಿವೇಶ ಏನು ಎಂಬುದನ್ನ ಪೊಲೀಸರು ಕಂಡು ಹಿಡಿಯಬೇಕಿದೆ. ಸದ್ಯ ಈ ಕುರಿತಾಗಿ ಸಾಗರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ.