ತಗ್ಗಿದ ಶರಾವತಿ ಹಿನ್ನೀರು ! ಸಿಗಂದೂರು ಸಂಪರ್ಕ ಕಲ್ಪಿಸುವ ಮುಪ್ಪಾನೆ ಲಾಂಚ್​ ಸ್ಥಗಿತ !

Sharavathi backwaters down! Muppane launch to connect Sikandur suspended!

ತಗ್ಗಿದ  ಶರಾವತಿ ಹಿನ್ನೀರು ! ಸಿಗಂದೂರು ಸಂಪರ್ಕ ಕಲ್ಪಿಸುವ ಮುಪ್ಪಾನೆ ಲಾಂಚ್​ ಸ್ಥಗಿತ !

 KARNATAKA NEWS/ ONLINE / Malenadu today/ May 27, 2023 12:00 PM SHIVAMOGGA NEWS

ಸಾಗರ/ ಜೋಗ , ಕಾರ್ಗಲ್, ಸಿಗಂದೂರು, ತುಮರಿ ಸಂಪರ್ಕದ ಹಲ್ಕೆ-ಮುಪ್ಪಾನೆ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸ ಲಾಗಿದೆ. ಇದಕ್ಕೆ ಕಾರಣ ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿರುವುದು. ಹಿನ್ನೀರಿನಲ್ಲಿ ವಾಡಿಕೆಗಿಂತಲೂ ಹೆಚ್ಚು ನೀರು ಇಳಿದಿದ್ದು,

ಈ ಹಿನ್ನೆಲೆಯಲ್ಲಿ ಲಾಂಚ್​ ಸಂಚಾರಕ್ಕೆ ಬೃಹತ್  ಕಲ್ಲುಗಳು, ಮರದ ದಿಮ್ಮಿಗಳು , ಮರಳಿನ ದಿಬ್ಬ ಅಡ್ಡಿ ಮಾಡುತ್ತಿದೆ. ಇದರಿಂದಾಗಿ ಲಾಂಚ್​ ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಕಾರಣಕ್ಕೆ  ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾರ್ಗಲ್, ಜೋಗದ ಮೂಲಕ ಸಿಗಂದೂರಿಗೆ ಬರುವ ಭಕ್ತರಿಗೆ ಈ ಮಾರ್ಗವು (sigandur chowdeshwari launch)ಸುಮಾರು 60 ಕಿ.ಮೀ. ದೂರವನ್ನು ಕಡಿಮೆಗೊಳಿಸುತ್ತಿತ್ತು.

ಪ್ರಯಾಣಿಕರಿದ್ದ ಬೋಗಿಗಳಿಂದ ಲಿಂಕ್​ ಕಳಚಿಕೊಂಡು ಮುಂದಕ್ಕೆ ಹೋದ ತಾಳಗುಪ್ಪ-ಬೆಂಗಳೂರು ಇಂಟರ್​ಸಿಟಿ ಟ್ರೈನ್​ ಇಂಜಿನ್​

ನೀರಿನ ಮಟ್ಟ ಹೆಚ್ಚಾದ ನಂತರ ಪುನಃ ಸಂಚಾರವನ್ನು ಸಂಚಾರವನ್ನು ಪುನ‌ ಆರಂಭಿಸಲಾಗುವುದು ಎಂದು ಸಾಗರ ಉಪ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.