ಶಿವಮೊಗ್ಗ ಖಾಸಗಿ ಬಸ್​ಸ್ಡ್ಯಾಂಡ್​ಗೆ ಥಟ್ ಅಂತಾ ಭೇಟಿ ಕೊಟ್ಟ ನೂತನ MLA

New MLA visits Shivamogga private bus stand

ಶಿವಮೊಗ್ಗ ಖಾಸಗಿ ಬಸ್​ಸ್ಡ್ಯಾಂಡ್​ಗೆ ಥಟ್ ಅಂತಾ ಭೇಟಿ ಕೊಟ್ಟ ನೂತನ MLA

KARNATAKA NEWS/ ONLINE / Malenadu today/ May 26, 2023 SHIVAMOGGA NEWS

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಸ್​ಎನ್ ಚನ್ನಬಸಪ್ಪ ರವರು ಶಿವಮೊಗ್ಗದ ಖಾಸಗಿ ಬಸ್ ಸ್ಟ್ಯಾಂಡ್​ಗೆ ಭೇಟಿಕೊಟ್ಟಿದ್ದಾರೆ.  ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರಿಗೆ ದೂರುಗಳ ದೊಡ್ಡಪಟ್ಟಿಯೇ ಎದುರಾಯ್ತು. 

ಖಾಸಗಿ ಬಸ್​ ನಿಲ್ದಾಣದಲ್ಲಿ  ಸಂಜೆಯಾದರೆ ಕುಡುಕರ ಕಾಟ ಮಿತಿ ಮೀರಿದ್ದು, ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪ ಪ್ರಮುಖವಾಗಿತ್ತು. ಬಸ್ ನಿಲ್ದಾಣದ ಒಳಗೆಯೇ ಮನಸ್ಸಿಗೆ ಬಂದಂತೆ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, - 10ಕ್ಕೂ ಹೆಚ್ಚು ತಿಂಡಿ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರು ವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ನಿಲ್ದಾಣದ ಒಳಗಿರುವ ಅಂಗಡಿಗಳು ಹೆಚ್ಚುವರಿ ಜಾಗವನ್ನು ಅತಿ ಕ್ರಮಣ ಮಾಡಿ ವಹಿವಾಟು ನಡೆಸ್ತಿದ್ಧಾರೆ…ನಿಲ್ದಾಣದಲ್ಲಿ ಸ್ವಚ್ಚತೆಯಿಲ್ಲ,ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆ ಹದಗೆಟ್ಟಿದೆ.  ಶೌಚಾಲಯಕ್ಕೆ ಐದು ರೂ. ನಿಗದಿ ಮಾಡಿದ್ದರ ಹತ್ತು ರೂ.ಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಾರೆ.

ಬಸ್ ನಿಲ್ದಾಣದ ಒಳಗಿರುವ ಲಾಡ್ಜ್‌ನಲ್ಲಿ ಬೆಡ್ ಒಂದಕ್ಕೆ 100 ರೂ. ಶುಲ್ಕ ಇದ್ದರೆ ಅದನ್ನು ನಿರ್ವಹಿಸುವವರು 150ರೂ. ಪಡೆಯುತ್ತಾರೆ.  ಹೀಗೆ ಹಲವಾರು ದೂರುಗಳು ಶಾಸಕರಿಗೆ ಎದುರಾದವು. ಎಲ್ಲವನ್ನು ಆಲಿಸಿದ ಶಾಸಕರು, ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಅಲ್ಲಿಂದ ಹೊರಟರು. 

ಪ್ರಯಾಣಿಕರಿದ್ದ ಬೋಗಿಗಳಿಂದ ಲಿಂಕ್​ ಕಳಚಿಕೊಂಡು ಮುಂದಕ್ಕೆ ಹೋದ ತಾಳಗುಪ್ಪ-ಬೆಂಗಳೂರು ಇಂಟರ್​ಸಿಟಿ ಟ್ರೈನ್​ ಇಂಜಿನ್​

ಶಿವಮೊಗ್ಗ ತಾಳಗುಪ್ಪ-ಬೆಂಗಳೂರು ರೈಲಿನ ಇಂಜಿನ್​ ಇವತ್ತು ಭದ್ರಾವತಿ ಸಮೀಪ  ಬೋಗಿಗಳಿಂದ ಕಳಚಿಕೊಂಡು ಮುಂದಕ್ಕೆ ಹೋಗಿತ್ತು. ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದಲ್ಲಿ ಈ ಘಟನೆ ಇವತ್ತು ಬೆಳಗ್ಗೆ ಸಂಭವಿಸಿದೆ. 

ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು, (20652 - Talguppa Bangalore Intercity Sf Express) ನ ಇಂಜಿನ್ – ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡಿದ್ದರಿಂದ ಘಟನೆ ಸಂಭವಿಸಿದೆ.  ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು.

ತಾಳಗುಪ್ಪದಿಂದ ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ರೈಲು, ಬೆಳಿಗ್ಗೆ 7 ಗಂಟೆ 5 ನಿಮಿಷಕ್ಕೆ ಭದ್ರಾವತಿ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು. ಮಾರ್ಗಮಧ್ಯೆ  ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್ ಬೋಗಿಗಳ ಬಿಟ್ಟು ಮುಂದಕ್ಕೆ ಚಲಿಸಿದೆ. ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್ ನನ್ನು, ಲೋಕೋ ಪೈಲೆಟ್ ನಿಲ್ಲಿಸಿದ್ದಾರೆ . 

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಹಾಗೂ ಶಿವಮೊಗ್ಗದ ರೈಲ್ವೆ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಎಂಜಿನ್ ಹಾಗೂ ಬೋಗಿ ನಡುವೆ ಸಂಪರ್ಕ ಕಲ್ಪಿಸಿದ್ದಾರೆ. ನಂತರ ರೈಲು ಭದ್ರಾವತಿಯತ್ತ ಪ್ರಯಾಣ ಬೆಳೆಸಿದೆ.ತದನಂತರ ಭದ್ರಾವತಿ ನಿಲ್ದಾಣದಲ್ಲಿ ಹೆಚ್ಚುವರಿ ದುರಸ್ತಿ ಕಾರ್ಯ ನಡೆಸಲಾಗಿದೆ. 

ಹೊಸನಗರದಲ್ಲಿ ಗೋಮೂತ್ರ, ಸಗಣಿ ನೀರು ಸುರಿದುಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿಭಟನೆ ! ಕಾರಣವೇನು ಗೊತ್ತಾ?

ಹೊಸನಗರ/ ನಿರ್ಲಕ್ಷ್ಯ ಒಳಗಾದ ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಈ ಮಧ್ಯೆ ಟ್ಯಾಂಕರ್​ಗಳಲ್ಲಿ ಹಳ್ಳಿಹಳ್ಳಿಗೆ ನೀರಿ ಸೌಕರ್ಯಗಳನ್ನ ಒದಗಿಸಲಾಗುತ್ತಿದೆಯಾದರೂ, ಅದರ ಬಿಲ್​ ಮಂಜೂರಾತಿ ಆಗುತ್ತಿಲ್ಲ. ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕರ್ ಶೆಟ್ಟಿ ಇವತ್ತು ಹೊಸನಗರ ತಾಲ್ಲೂಕು ಪಂಚಾಯಿತಿ ಎದುರು ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ ನಡೆಸಿದ್ದಾರೆ. 

ಈ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಕಸಗುಡಿಸಿ ಪ್ರತಿಭಟಿಸಿದ್ದ ಕರುಣಾಕರ್ ಶೆಟ್ಟರು, ಈ ಸಲ ಇಡೀ ತಾಲ್ಲೂಕಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು, ಹಣ ಮಂಜೂರು ಏಕೆ ಮಾಡುತ್ತಿಲ್ಲ. ಹೊಸನಗರಕ್ಕೆ ಮಾತ್ರವೇ ಈ ನಿರ್ಲಕ್ಷ್ಯವೇ ಏಕೆ ಎಂದು ಪ್ರಶ್ನಿಸಿದ್ದಾರೆ. ಜನರು ಕುಡಿಯುವ ನೀರು ಒದಗಿಸಿ ಎಂದು ಪ್ರಶ್ನಿಸುತ್ತಾರೆ. ಆದರೆ ಪಂಚಾಯಿತಿಗಳಿಗೆ ಹಣ ಒದಗಿಸುತ್ತಿಲ್ಲ. ನೀರಿನ ಟ್ಯಾಂಕರ್​ಗಳ ಮೂಲಕ ನೀರು ಒದಗಿಸಲು ಸಾಧ್ಯವಾಗದೇ, ಜನರಿಂದ ಮಾತು ಕೇಳಬೇಕಾದ ಸನ್ನಿವೇಶವಿದೆ ಎಂದು ಅಳಲು ತೋಡಿಕೊಂಡಿದ್ಧಾರೆ. 

ಕಳೆದ ಒಂದುವರೆ ತಿಂಗಳಿನಿಂದ ಮನೆ ಮನೆಗೆ ನೀರನ್ನ ಟ್ಯಾಂಕರ್ ಮೂಲಕ ಒದಗಿಸಲಾಗಿದೆ. ಈ ಮಧ್ಯೆ   ಜಿಲ್ಲಾಡಳಿತ ನಡೆಸಿದ ಟಾಸ್ಕ್​ ಫೋರ್ಸ್ ಸಭೆಯಲ್ಲಿ, ಪ್ರತಿ ತಾಲ್ಲೂಕಿಗೆ 15 ಲಕ್ಷ ರೂಪಾಯಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ಧರು. ನೀರಿನ ಸೌಲಭ್ಯ ಒದಗಿಸಿ ಎಂದು ಹೇಳಿದ್ದರು. ಆದರೆ ಇದುವರೆಗೂ ಬಿಡಿಗಾಸನ್ನು ಸಹ ನೀಡಿಲ್ಲ . ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಆದರೆ ನಾವು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ನಾವಿಲ್ಲಿ ಶುದ್ಧವಾಗಿದ್ದೇವೆ , ನಾವು ಶುದ್ಧವಾಗಿದ್ದೇವೆ ಎನ್ನುವುದನ್ನ ತೋರಿಸುವುದ್ದಕ್ಕಾಗಿಯೇ ಕಚೇರಿ ಮುಂದೆ ಸಗಣಿ ನೀರನ್ನ ಸುರಿದುಕೊಂಡು ಶುದ್ಧವಾಗಿದ್ದೇನೆ. ಹಾಗಾಗಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ಧಾರೆ. 

ಇನ್ನೂ ಕರುಣಾಕರ್​ ಶೆಟ್ಟರ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಉಪವಿಭಾಗೀಯ ಅಧಿಕಾರಿಯವರು ಹೊಸನಗರ ತಾಲ್ಲೂಕಿಗೆ,  ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗೆ 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಪೈಕಿ 10 ಲಕ್ಷ ರೂಪಾಯಿ ಅನುದಾನ ಮೊದಲ ಕಂತಿನಲ್ಲಿ ಬಂದಿದೆ. ನಗರ ಪಂಚಾಯ್ತಿಯಿಂದಲೇ ಮೊದಲು ಹಣ ಬಿಡುಗಡೆ ಮಾಡಿ, ಕುಡಿಯುವ ನೀರಿನ ಸೌಕರ್ಯಕ್ಕೆಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈಹಿನ್ನೆಲೆಯಲ್ಲಿ ಕರುಣಾಕರ್ ಶೆಟ್ಟರು ಪ್ರತಿಭಟನೆಯನ್ನ ಕೈ ಬಿಟ್ಟಿದ್ಧಾರೆ. 

ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!