ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

Accident while overtaking! Bike rider dies on the spot!

ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ  ಸ್ಥಳದಲ್ಲಿಯೇ ಸಾವು!

KARNATAKA NEWS/ ONLINE / Malenadu today/ May 26, 2023 SHIVAMOGGA NEWS

ಶಿಕಾರಿಪುರ ತಾಲ್ಲೂಕಿನ  ಅಂಬರಗೊಪ್ಪ ಗ್ರಾಮದ ಬಳಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಬೈಕ್​ ಗೆ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ  ಹಾವೇರಿ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ನಿವಾಸಿ ಸಾವನ್ನಪ್ಪಿದ್ದಾನೆ.

ಹೇಗಾಯ್ತು ಘಟನೆ?

ಶಿಕಾರಿಪುರದಿಂದ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದ 37 ವರ್ಷದ ಹನುಮಂತಪ್ಪ ಎಂಬವರು ತೆರಳುತ್ತಿದ್ದರು. ಈ ವೇಳೆ ಅಂಬಾರಗೊಪ್ಪದ ಗ್ರಾಮ ಬಳಿ ಪ್ಯಾಸೆಂಜರ್ ವಾಹನವೊಂದು ನಿಂತಿದೆ. ಜನರನ್ನ ಇಳಿಸ್ತಿದ್ದ ವಾಹನವನ್ನು ಓವರ್ ಟೇಕ್​ ಮಾಡಿಕೊಂಡು ಹನುಮಂತಪ್ಪ ಮುಂದಕ್ಕೆ ಹೋಗಿದ್ದಾರೆ. ಇದೆ ವೇಳೆ, ಎದುರಿನಿಂದ ಬಂದ ವೆಹಿಕಲ್​ವೊಂದು ಹನುಮಂತಪ್ಪರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಹನುಮಂತಪ್ಪ ಮೃತರಾಗಿದ್ದಾರೆ. ಈ ಸಂಬಂಧ  ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಹಿಳೆಯರೇ ಹುಷಾರ್! ಅಶ್ಲೀಲ ಚಿತ್ರ ತೋರಿಸಿ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡ್ತಾರೆ! ಇಲ್ಲಿದೆ ಬೆಂಗಳೂರು-ಶಿವಮೊಗ್ಗ-ಚಿಕ್ಕಮಗಳೂರು ಕೇಸ್!

ಶಿವಮೊಗ್ಗ/  ಎಷ್ಟೆ ಸಲಿಗೆಯಿದ್ದರೂ, ಮೋಬೈಲ್​ನಲ್ಲಿ ಅಶ್ಲೀಲ ಫೋಟೋ ವಿಡಿಯೋಗಳನ್ನ ಸೆಂಡ್ ಮಾಡಬೇಡಿ ಅಥವಾ ಆ ರೀತಿಯಲ್ಲಿ ಚಿತ್ರಗಳನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡಬೇಡಿ. ಇದು ಮಹಿಳೆಯರಿಗೆ ಕಾನೂನು ಬದ್ದ ಸಂಸ್ಥೆಗಳು ನೀಡುತ್ತಲೇ ಬಂದಿರುವ ಸಲಹೆ. ಆದಾಗ್ಯು, ನಂಬಿಕೆಯನ್ನು ಬಳಸಿಕೊಂಡು ಮಹಿಳೆಯರನ್ನ ಯಾಮಾರಿಸುತ್ತಿರುವ ಕೃತ್ಯಗಳ ಬಗ್ಗೆ ಕೇಸ್ ದಾಖಲಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಪೊಲೀಸರಿಗೆ ಅಶ್ಲೀಲ ಚಿತ್ರಗಳನ್ನ ಬಳಸಿಕೊಂಡು ಬ್ಲ್ಯಾಕ್​ಮೇಲ್ ಮಾಡಿದ ಆರೋಪ ಕೇಳಿಬಂದಿದೆ. 

ನಡೆದಿದ್ದೇನು? 

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರಿಗೆ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕೊಂದರ ನಿವಾಸಿ ಪರಿಚಯವಾಗಿದ್ದಾನೆ. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಆದರೆ ಆತ, ಮಹಿಳೆಯ ಅಶ್ಲೀಲ ಚಿತ್ರಗಳನ್ನ ತೆಗೆದು, ಆಕೆಯನ್ನು ಬ್ಲ್ಯಾಕ್​ಮೇಲ್​ಮಾಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ  ಮಹಿಳೆ ಬೆಂಗಳೂರು ಬಿಟ್ಟು ಶಿವಮೊಗ್ಗ ಜಿಲ್ಲೆಗೆ ವಾಪಸ್ ಆಗಿದ್ದರು.

ಜಿಲ್ಲೆಯಲ್ಲಿಯು ಟಾರ್ಚರ್​

ಹೀಗೆ ಜಿಲ್ಲೆ ವಾಪಸ್ ಆದ ಮೇಲೆಯು ಮಹಿಳೆಯ ಬೆನ್ನಬಿಡದ ಆಸಾಮಿಯು, ಮಹಿಳೆ ಕೆಲಸ ಮಾಡುತ್ತಿದ್ದ ಜಾಗದಲ್ಲಿದ್ದವರ ನಂಬರ್ ಹಾಗೂ ಮಹಿಳೆಯ ಮಗನ ನಂಬರ್​ಗೆ ಆಕೆಯ ಚಿತ್ರಗಳನ್ನ ವಾಟ್ಸ್ಯಾಪ್ ಮಾಡಿದ್ದಾನೆ. ಅಲ್ಲದೆ ತನ್ನ ಜೊತೆ ಬರದಿದ್ದರೇ ಎಲ್ಲಿಯು ಕೆಲಸ ಮಾಡೋದಕ್ಕೆ ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಶಿವಮೊಗ್ಗದ ಠಾಣೆಯೊಂದರಲ್ಲಿ ಕಂಪ್ಲೆಂಟ್ ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ Act & Section : INFORMATION TECHNOLOGY ACT 2000 (U/s-66(E),67(A)); IPC 1860 (U/s-354(A),354(D),354C) ಅಡಿಯಲ್ಲಿ ಕೇಸ್ ದಾಖಲಾಗಿದೆ.