ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್

A private bus coming from Shikaripura to Shimoga rammed into a garden after the driver lost control of the vehicle.

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಚೋರಡಿಯಲ್ಲಿ ಕುಮದ್ವತಿ ಸೇತುವೆ ಬಳಿ ಸಂಭವಿಸಿದ ಬಸ್ ಅಪಘಾತದ ಬೆನ್ನಲ್ಲೆ ಮತ್ತೊಂದು ಬಸ್ ಅಪಘಾತದ ಘಟನೆ ಬಗ್ಗೆ ವರದಿಯಾಗಿದೆ. 

ಶಿಕಾರಿಪುರ ತಾಲ್ಲೂಕಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್​ವೊಂದು ಹಳೇ ಜೋಗದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿದ್ದ ತೋಟವೊಂದಕ್ಕೆ ನುಗ್ಗಿದೆ.   ಬಸ್​ ಕೆಲವೆಡೆ ಜಖಂಗೊಂಡಿದೆ.  ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ ಎನ್ನಲಾಗಿದ್ದು  , ಇಂದು ಸಂಜೆ ನಡೆದ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. 

ಹೊಸನಗರ ಸುದ್ದಿ/ ಮಂಗಳೂರು-ಶಿವಮೊಗ್ಗ ರಸ್ತೆಯಲ್ಲಿ ಪಲ್ಟಿಯಾದ ಪೆಟ್ರೋಲ್ ಟ್ಯಾಂಕರ್! ಇಂಧನ ಸೋರಿಕೆ!

 ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಪೆಟ್ರೋಲ್​ ತುಂಬಿದ್ದ ಟ್ಯಾಂಕರ್​ವೊಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಿದನೂರಿನಲ್ಲಿ ಪಲ್ಟಿಯಾಗಿದೆ. ಇಂದು ಸಂಜೆ ನಡೆದ ಘಟನೆಯಲ್ಲಿ ಕೆಲಕಾಲ ಸ್ಥಳೀಯವಾಗಿ ಆತಂಕ ಮನೆ ಮಾಡಿತ್ತು. 

ಬಿದನೂರಿನ ಶಾಂತಿಕೆರೆ ಸರ್ಕಲ್​ನ ಕ್ರಾಸ್​ನಲ್ಲಿ ಪೆಟ್ರೋಲ್​ ಟ್ಯಾಂಕರ್ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್​ನಲ್ಲಿದ್ದ ಪೆಟ್ರೋಲ್​ ಸೋರಿಕೆಯಾಗಲು ಆರಂಭವಾಗಿತ್ತು. ಬರೋಬ್ಬರು 29 ಸಾವಿರ ಲೀಟರ್​ ಪೆಟ್ರೋಲ್ ತುಂಬಿದ್ದ ಟ್ಯಾಂಕರ್​ ಪಲ್ಟಿಯಾದ್ದರಿಂದ ಬೆಂಕಿ ಹೊತ್ತಿಕೊಳ್ಳುವ ಆತಂಕವಿತ್ತು. ತಕ್ಷಣವೇ ಕಾರ್ಯನಿರತವಾದ ನಗರ ಪೊಲೀಸ್ ಸ್ಟೇಷನ್​ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಜನರನ್ನ ಸ್ಥಳಕ್ಕೆ ಹೋಗದಂತೆ ಮೊದಲು ನಿಯಂತ್ರಿಸಿದರು. ಆನಂತರ ಯಾವುದೇ ಅವಘಡ ಸಂಭವಿಸದಂತೆ ಪರಿಸ್ಥಿತಿಯನ್ನು ಕಂಟ್ರೋಲ್​ ತೆಗೆದುಕೊಂಡರು. 

ಇನ್ನೂ ಟ್ಯಾಂಕರ್ ಪಲ್ಟಿಯಾದ್ದರಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಹೊಸನಗರ-ನಗರ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಘಟನೆಯಲ್ಲಿ ಚಾಲಕನಿಗೂ ಗಾಯಗಳಾಗಿದ್ದು, ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಇತ್ತೀಚಿನ ಸುದ್ದಿ/ ನೂತನ ಸರ್ಕಾರ ಬಂದ ಬೆನ್ನಲ್ಲೆ ರಾಜ್ಯ 214 ಕೈದಿಗಳು ರಿಲೀಸ್

ಬೆಂಗಳೂರು/ ನೂತನ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಬೆನ್ನಿಂದ ಬೆನ್ನಿಗೆ ಹೊಸ ಹೊಸ ಆದೇಶಗಳು ಹೊರಕ್ಕೆ ಬರುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯದ ವಿವಿಧ ಜೈಲಿನಲ್ಲಿರುವ 214 ಕೈದಿಗಳ ಬಿಡುಗಡೆಗೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. 

ಪ್ರಕಟಣೆಯಲ್ಲಿ ಏನಿದೆ ಓದಿ

ವಿಷಯ : ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಒಟ್ಟು 214 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಿ, ಸರ್ಕಾರವು ಉಲ್ಲೇಖಿತ ಆದೇಶವನ್ನು ಹೊರಡಿಸಿರುತ್ತದೆ 

ಉಲ್ಲೇಖಿತ ಸರ್ಕಾರದ ಆದೇಶದನ್ವಯ, ಸದರಿ ಜೀವಾವಧಿ ಶಿಕ್ಷಾ ಬಂದಿಗಳನ್ನು ನಿಯಮಾನುಸಾರ ಅವಧಿಪೂರ್ವ ಬಿಡುಗಡೆ ಮಾಡುವ ಸಂಬಂಧ, ತಕ್ಷಣ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಈ ಕಛೇರಿಗೆ ಹಾಗೂ ಸಂಬಂಧಪಟ್ಟವರಿಗೆ ತಪ್ಪದೇ ಮಾಹಿತಿ / ವರದಿಯನ್ನು ಸಲ್ಲಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.