ಐಫೋನ್​ಗಾಗಿ ಕಳ್ಳತನಕ್ಕಿಳಿದ ಆಸಾಮಿ ಕೇವಲ ನಾಲ್ಕು ಗಂಟೆಯಲ್ಲಿ ಅರೆಸ್ಟ್!

Shikaripura rural police arrested the accused who had stolen money from a house to buy an iPhone in just four hours.

ಐಫೋನ್​ಗಾಗಿ ಕಳ್ಳತನಕ್ಕಿಳಿದ ಆಸಾಮಿ ಕೇವಲ ನಾಲ್ಕು ಗಂಟೆಯಲ್ಲಿ ಅರೆಸ್ಟ್!
Shikaripura rural police arrested the accused who had stolen money from a house to buy an iPhone in just four hours.

Shivamogga | Feb 3, 2024 |   ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ 2 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. 

ಶಿಕಾರಿಪುರ ಬಾಳೆಕೊಪ್ಪ ಗ್ರಾಮದ ಹನುಮಂತ ನಾಯ್ಕ ಎಂಬುವವರ ಮನೆಯಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನವಾಗಿತ್ತು. ಸುಮಾರು 2 ಲಕ್ಷ ರೂಪಾಯಿ ನಗದು ಕಳ್ಳತನವಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿತ್ತು. 

ಈ ಸಂಬಂಧ ಇನ್‌ಸ್ಪೆಕ್ಟರ್ ಆರ್.ಆರ್ ಪಾಟೀಲ್‌, ತೋಟಪ್ಪ ಮತ್ತು ಕೈಮ್ ವಿಭಾಗದ ಸಿಬ್ಬಂದಿಯ ವಿಶೇಷ ತಂಡ ಡಿವೈಎಸ್ಪಿ ಶಿವಾನಂದ ಮದರಖಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದೂರು ದಾಖಲಾದ ಕೇವಲ 4 ಗಂಟೆಯ ಒಳಗಾಗಿ ಚೀಲೂರು ಕೆಂಗಟ್ಟೆ ಗ್ರಾಮದ ನಿವಾಸಿ ಆಕಾಶ್‌ನನ್ನು ದಸ್ತಗಿರಿ ಮಾಡಿ ಈತನಿಂದ ಕಳ್ಳತನವಾದ ನಗದು ಅಮಾನತುಪಡಿಸಿ ಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶೋಕಿಗೆ ಬಿದ್ದಿದ್ದ ಈತ ಐಫೋನ್ ಖರೀದಿಗಾಗಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ.

ಈ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ನೀಡಿದ ಪ್ರಕಟಣೆಯ ವಿವರ ಇಲ್ಲಿದೆ 

ಶಿಕಾರಿಪುರ ಗ್ರಾಮಾಂತರ  ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ  ವಾಸಿ ಹನುಂತ ನಾಯ್ಕ್ ರವರು ದಿನಾಂಕ 29-01-2024 ರಂದು ಬೆಳಿಗ್ಗೆ ಮನೆಗೆ  ಬೀಗವನ್ನು ಹಾಕಿ , ಬೀಗದ  ಕೀಯನ್ನು ಮನೆಯ ಮೇಲ್ಗಡೆ ಮೊಳೆಯಲ್ಲಿ ನೇತು ಹಾಕಿ  ಶಿಕಾರಿಪುರದ  ಆಸ್ಪತ್ರೆಗೆ  ಹೋಗಿದ್ದ ಸಮಯದಲ್ಲಿ ಮನೆಯ ಕೀಯನ್ನು ಬಳಸಿ ಬೀರುವುನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ  ದೂರಿನ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲಿಸ್ ಠಾಣೆ  ಗುನ್ನೆ ಸಂಖ್ಯೆ 0031/2024  ಕಲಂ: 454, 380 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ನಗದು ಹಣದ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಶ್ರೀ ಶಿವಾನಂದ ಎಂ ಮದರಖಂಡಿ, ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಆರ್.ಆರ್. ಪಾಟೀಲ್, ಪೊಲೀಸ್ ನಿರೀಕ್ಷಕರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆರವರ ನೇತೃತ್ವದಲ್ಲಿ, ಶ್ರೀ ಎನ್  ವೈ ಒಲೇಕರ್  ಪಿ.ಎಸ್.ಐ, ಶ್ರೀ ಮಂಜುನಾಥ .ಕೆ, ಪಿ.ಎಸ್.ಐ , ಶ್ರೀ ತೋಟಪ್ಪ ಎ.ಎಸ್.ಐ,  ನಾಗರಾಜ, ಹೆಚ್.ಸಿ, ಲಕ್ಷ್ಮಿಭಾಯಿ, ಮ.ಹೆಚ್.ಸಿ, ಸಿ.ಪಿ.ಸಿಗಳಾದ ಪ್ರಶಾಂತ್, ಹಜರತ್ ಅಲಿ, ಶ್ರೀಶಂಕರ ನಾಯ್ಕ್   ಮತ್ತು ಎ.ಪಿ.ಸಿ ವಿಜಯಕುಮಾರ್ ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯ ಒಳಗಾಗಿ ಪ್ರಕರಣದ ಆರೋಪಿ  ಆಕಾಶ್ 18 ವರ್ಷ, ಚೀಲೂರು ಕೆಂಗಟ್ಟೆ ಗ್ರಾಮ ನ್ಯಾಮತಿ, ದಾವಣಗೆರೆ ಜಿಲ್ಲೆ  ದಸ್ತಗಿರಿ ಮಾಡಿ,  ಆತನಿಂದ  ಕಳ್ಳತನ ಮಾಡಿದ  2,00,000/- ರೂ ( ಎರಡು ಲಕ್ಷ ರೂಪಾಯಿ ) ನಗದು ಹಣವನ್ನು ಅಮಾನತ್ತು  ಪಡಿಸಿಕೊಳ್ಳಲಾಗಿದೆ.ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.