ನಾಲ್ಕು ವರ್ಷದ ಹಿಂದಿನ ಪ್ರಕರಣ ಇತ್ಯರ್ಥ! ಶಿಕಾರಿಪುರ ನಿವಾಸಿಗೆ 4 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್​

A four-year-old case has been settled! Shimoga court sentences Shikaripura resident to 4 years in jail

ನಾಲ್ಕು ವರ್ಷದ ಹಿಂದಿನ ಪ್ರಕರಣ ಇತ್ಯರ್ಥ! ಶಿಕಾರಿಪುರ ನಿವಾಸಿಗೆ 4 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್​
! Shimoga court sentences Shikaripura resident to 4 years in jail

Shivamogga | Feb 2, 2024 |   ನಾಲ್ಕು ವರ್ಷಗಳ ಹಿಂದಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್​ ಆರೋಪಿಯೊಬ್ಬನಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 20 ಸಾವಿರ ದಂಡ ಹಾಕಿದೆ 

ಶಿವಮೊಗ್ಗ ಕೋರ್ಟ್ 

ದಿನಾಂಕಃ 02-02-2020  ರಂದು ಯಾಸೀರ್ ಪಾಷಾ ಎಂಬವರು  ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್​ ವ್ಯಾಪ್ತಿಯ ಕುಂಬಾರ ಗುಂಡಿಯಲ್ಲಿ ಸಾರ್ವಜನಿಕರಿಗೆ ಮಾದಕವಸ್ತು ಗಾಂಜಾ ಮಾರಾಟ ಮಾಡಲು ತನ್ನ ಸ್ಕೂಟಿಯಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. 

ಈ ಸಂಬಂಧ  ಅಡ್ಡೂರು ಶ್ರೀನಿವಾಸಲು, ಐಪಿಎಸ್, ಎಎಸ್ಪಿ ಶಿಕಾರಿಪುರ ಉಪ ವಿಭಾಗ ತಮ್ಮ ಸಿಬ್ಬಂಧಿಗಳೊಂದಿಗೆ ರೇಡ್ ನಡೆಸಿದ್ದರು. ಈ ವೇಳೆ ಯಾಸೀರ್ ಪಾಷಾನನ್ನು ದಸ್ತಗಿರಿ ಮಾಡಿ ಆತನಿಂದ 1 ಕೆಜಿ 148 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯ ವಿರುದ್ಧ  8(ಸಿ), 20(ಬಿ)(2) ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ  ಬೂದ್ಯಪ್ಪ ಎಎಸ್ಐ  ಕೇಸ್​ನ ತನಿಖೆ ನಡೆಸಿ ಚಾರ್ಜ್​ಶೀಟ್​ ಸಲ್ಲಿಸಿದ್ದರು. 

ಇನ್ನೂ ಪ್ರಕರಣ ಸಂಬಂಧ  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ  ಸುರೇಶ್ ಕುಮಾರ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಇದೀಗ ಪ್ರಕರಣದ ತೀರ್ಪು ನೀಡಿರುವ  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ   ಮಂಜುನಾಥ್ ನಾಯಕ್,  ಆರೋಪಿಗೆ 04  ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 20,000/- ರೂ ದಂಡ ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 06  ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.