ಭದ್ರಾವತಿ ಲಕ್ಕಿನಕೊಪ್ಪ ಕ್ರಾಸ್, ಹೆಚ್​.ಕೆ ಜಂಕ್ಷನ್​ ದರೋಡೆ ಕೇಸ್​ ! ಆರೋಪಿಗಳಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

Bhadravathi Lakkinakoppa Cross, H.K. Junction Robbery Case Do you know the punishment given to the accused by the court?

ಭದ್ರಾವತಿ ಲಕ್ಕಿನಕೊಪ್ಪ ಕ್ರಾಸ್, ಹೆಚ್​.ಕೆ ಜಂಕ್ಷನ್​ ದರೋಡೆ ಕೇಸ್​ ! ಆರೋಪಿಗಳಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

SHIVAMOGGA NEWS / Malenadu today/ Nov 30, 2023 | Malenadutoday.com  

BHADRAVATI  |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ಲಕ್ಕಿನಕೊಪ್ಪ ಕ್ರಾಸ್​ ಸಮೀಪ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಕೋರ್ಟ್​ ಮಹತ್ವದ ತೀರ್ಪು ನೀಡಿದೆ. 

ಭದ್ರಾವತಿ ತಾಲ್ಲೂಕು ಲಕ್ಕಿನಕೊಪ್ಪ ಕ್ರಾಸ್

ದಿನಾಂಕಃ 05-03-2019  ರಂದು ರಾತ್ರಿ ಭದ್ರಾವತಿ ತಾಲ್ಲೂಕು ಲಕ್ಕಿನಕೊಪ್ಪ ಕ್ರಾಸ್ ನ ಹತ್ತಿರ 06 ಜನ ಅಪರಿಚಿತರು 02  ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ,  ಬೆದರಿಕೆ ಹಾಕಿ ರೂ  20,000/- ನಗದು ಮತ್ತು ಐ-ಪಾಡ್ ಮತ್ತು ಐ-ಫೋನ್ ಅನ್ನು ದರೋಡೆ ಮಾಡಿದ್ದರು. 

ಭದ್ರಾವತಿ ತಾಲ್ಲೂಕು ಹೆಚ್​.ಕೆ.ಜಂಕ್ಷನ್

ಹೋಗಿದ್ದು,  ಮತ್ತು ಅದೇ ದಿನ ರಾತ್ರಿ ಭದ್ರಾವತಿ ತಾಲ್ಲೂಕು ಹೆಚ್ ಕೆ ಜಂಕ್ಷನ್ ನ ಹತ್ತಿರ 06 ಜನ ಅಪರಿಚಿತರು 02  ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ,  ಬೆದರಿಕೆ ಹಾಕಿ ರೂ  500/- ನಗದು ಮತ್ತು ಮೊಬೈಲ್ ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು.. 

 ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ

ಈ ಸಂಬಂಧ ನೊಂದ ವ್ಯಕ್ತಿಗಳು  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (bhadravati rural police station ) ದೂರು ದಾಖಲಿಸಿದ್ದರು. ನಡೆದ ಘಟನೆಗಳನ್ನ ಆಧರಿಸಿ ಗುನ್ನೆ ಸಂಖ್ಯೆ 0067/2019  ಕಲಂ 395 ಐಪಿಸಿ ಕಾಯ್ದೆ ಮತ್ತು ಗುನ್ನೆ ಸಂಖ್ಯೆ 0069/2019 ಕಲಂ 395 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

 

ಪ್ರಕರಣ ಸಂಬಂಧ  ಆಗಿನ ತನಿಖಾಧಿಕಾರಿಗಳಾದ ಕೆ ಎಂ ಯೋಗೇಶ್ ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ ರವರು 02 ಪ್ರಕರಣಗಳ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ಪ್ರತ್ಯೇಖವಾಗಿ ದೋಷಾರೋಪಣಾ ಪತ್ರಗಳನ್ನು ಸಲ್ಲಿಸಿರುತ್ತಾರೆ. 

READ : ದಾವಣಗೆರೆ ಜಿಲ್ಲೆ ನ್ಯಾಮತಿ ನಿವಾಸಿಗೆ 20 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್! ಕಾರಣ ಇಲ್ಲಿದೆ

 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗ, ಭದ್ರಾವತಿ ಸಿಟ್ಟಿಂಗ್

ಸರ್ಕಾರದ ಪರವಾಗಿ  ರತ್ನಮ್ಮ, ಸರ್ಕಾರಿ ಅಭಿಯೋಜಕರವರು, 2 ಪ್ರಕರಣಗಳ ವಾದ ಮಂಡಿಸಿದ್ದರು. ಈ ಸಂಬಂಧ  4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗ, ಪೀಠಾಸೀನ ಭದ್ರಾವತಿಯಲ್ಲಿ 2 ಪ್ರಕರಣಗಳ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಆರ್ ವೈ ಶಶಿಧರ ರವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. 

ಆರೋಪಿ 1) ದೃವಕುಮಾರ್, 22 ವರ್ಷ, ಸಿದ್ದಾಪುರ ಗ್ರಾಮ ಭದ್ರಾವತಿ, ಈನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 5,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 03  ತಿಂಗಳು ಸಾಧಾ ಕಾರಾಗೃಹ ಶಿಕ್ಷೆ 

READ :ಬಿ.ಹೆಚ್​.ರೋಡ್​ನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ರಸ್ತೆ ತಡೆ! ಕಾರಣ?

ಉಳಿದ ಆರೋಪಿತರಾದ 2) ಸೈಯ್ಯದ್ ಇಮ್ರಾನ್, 22 ವರ್ಷ, ವೇಲೂರು ಜನ್ನಾಪುರ ಭದ್ರಾವತಿ, 3) ಶಿವಕುಮಾರ್, 24 ವರ್ಷ, ಸಿದ್ದಾಪುರ ಗ್ರಾಮ ಭದ್ರಾವತಿ, 4) ಸಚಿನ್, 21  ವರ್ಷ, ಸಿದ್ದಾಪುರ ಗ್ರಾಮ ಭದ್ರಾವತಿ, 5) ಯೋಗೇಶ್ 24 ವರ್ಷ, ವೇಲೂರು ಶೆಡ್ ಭದ್ರಾವತಿ ಮತ್ತು 6) ಗಿರೀಶ ಕುಮಾರ್, 21 ವರ್ಷ, ಹೊಸ ಸಿದ್ದಾಪುರ ಗ್ರಾಮ ಭದ್ರಾವತಿ  ಇವರಿಗೆ ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ರೂ 5,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 03 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.