ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

A shivamogga court has sentenced a man to life imprisonment in connection with the murder of his wife by her husband at Bommanakatte in Shivamogga. ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ನಡೆದಿದ್ದ ಗಂಡನಿಂದ ಪತ್ನಿ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

KARNATAKA NEWS/ ONLINE / Malenadu today/ Jul 20, 2023 SHIVAMOGGA NEWS

ಶಿವಮೊಗ್ಗ:  ತನ್ನ ಪತ್ನಿಯನ್ನ ಕೊಲೆ ಮಾಡಿದ ಪತಿರಾಯನಿಗೆ ಶಿವಮೊಗ್ಗ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಅಲ್ಲದೆ 25 ಸಾವಿರ ದಂಡ ವಿಧಿಸಿದೆ. 

ಏನಿದು ಪ್ರಕರಣ

ಶಿವಮೊಗ್ಗ ನಗರದ   ಬೊಮ್ಮನಕಟ್ಟೆಯಲ್ಲಿ ಅಲ್ಲಾಭಕ್ಷಿ ಎಂಬಾತ ತನ್ನ  27 ವರ್ಷದ ವಯಸ್ಸಿನ ಪತ್ನಿಯನ್ನ ಡಿಶ್ ಕೇಬಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.ದಿನಾಂಕಃ 05-01-2021  ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್​ ದಾಖಲಾಗಿತ್ತು. ಆನಂತರ ಪ್ರಕರಣದ ತನಿಖೆಯನ್ನು ಎನ್.ಎಸ್.ರವಿ ಕೈಗೊಂಡಿದ್ದು,  ಅಲ್ಲಾಭಕ್ಷಿಯನ್ನು ಬಂಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ  ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು. ಅಲ್ಲಿ ಪ್ರಕರಣದ ಪರವಾಗಿ, . ಸರ್ಕಾರಿ ಅಭಿಯೋಜಕಿ ಕೆ.ಎಸ್.ಮಮತಾ ಅವರು  ವಾದ ಮಂಡಿಸಿದ್ದರು.

 ಪ್ರಕರಣವು  ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಕೆ.ಎಸ್.ಮಾನು ಅವರು ಗುರುವಾರ ಅಲ್ಲಾಭಕ್ಷಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ ನಾಲ್ಕು ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ. 


ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೇಸ್! ಚರ್ಚ್​ ಫಾದರ್​ಗೆ 14 ದಿನ ನ್ಯಾಯಾಂಗ ಬಂಧನ! ತೀವ್ರಗೊಂಡ ಸಂಘಟನೆ , ಸಮುದಾಯದ ಪ್ರತಿಭಟನೆ!

ಶಿವಮೊಗ್ಗ/ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರತಿಷ್ಟಿತ ಚರ್ಚ್​​ನ ಫಾದರ್​ ಫ್ರಾನ್ಸಿಸ್​ ಫರ್ನಾಂಡಿಸ್​​ರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿನ್ನೆ ಅವರನ್ನ ಬಂಧಿಸಿದ ಕೋಟೆ ಸ್ಟೇಷನ್ ಪೊಲೀಸರು, ಅವರನ್ನ ವೈದ್ಯಕಿಯ ಪರೀಕ್ಷೆಗೆ ಒಳಪಡಿಸಿ ಶಿವಮೊಗ್ಗ 1ನೇ ಹೆಚ್ಚುವವರ ಜಿಲ್ಲಾ ಸತ್ರ ನ್ಯಾಯಾಲಯ ಮುಂದೆ ಹಾಜರು ಪಡಿಸಿತ್ತು. ಅಲ್ಲಿನ ನ್ಯಾಯಾದೀಶರು ಆರೋಪಿಯನ್ನ 14 ದಿನಗಳ ಕಾಲಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಶಿವಮೊಗ್ಗ ಜಿಲ್ಲೆ ಚರ್ಚ್​ ಫಾದರ್​ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!

ಸಮುದಾಯದ ಪ್ರತಿಭಟನೆ

ಇನ್ನೂ ಇದದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಸ್ಠೇಷನ್​ ಎದುರು ಸಮುದಾಯದ ಸದಸ್ಯರು ಪ್ರತಿಭಟ ನಡೆಸಿದರು. ಈ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಪಾರದರ್ಶಕವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಆರೋಪಿತರ ವಿರುದ್ಧ ಇನ್ನಷ್ಟು ಆರೋಪಗಳು ಕೇಳಿಬಂದಿದ್ದು, ಪ್ರಕರಣದಲ್ಲಿ ಸೂಕ್ತ ತನಿಖೆ ಆಗಿ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ರು. 

ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

ಚರ್ಚ್​ ಎದುರು ಹಿಂದೂ ಸಂಘಟನೆಗಳ ಧರಣಿ

ಇನ್ನೂ ಇದೇ ವಿಚಾರವಾಗಿ ಶಿವಮೊಗ್ಗ ನಗರದ ಪ್ರಮುಖ ಚರ್ಚ್​​ ಮುಂದೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿತು. ಅಲ್ಲದೆ ಈ ಸಂಬಂಧ ದೊಡ್ಡಮಟ್ಟದ ಪ್ರತಿಭಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸದ್ಯದಲ್ಲಿಯೇ ದಿನಾಂಕ ಘೋಷಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇನ್ನೂ ಪ್ರತಿಭಟನೆ ವೇಳೆ ನಡೆದ ಘಟನೆಯನ್ನು ಖಂಡಿಸಿ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದ್ರು.