ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್​ ಅದಾಲತ್​! ಯಾವಾಗ? ಯಾವೆಲ್ಲಾ ಕೇಸ್​ಗಳು ಆಗಲಿವೆ ಇತ್ಯರ್ಥ! ಪಾಲ್ಗೊಳ್ಳುವುದು ಹೇಗೆ?|

Malenadu Today

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS 

ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದಲ್ಲಿ ಇಡೀ ರಾಜ್ಯಾದೆಲ್ಲೆಡೆ ಮುಂಬರುವ 09.09,2023 ರಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ನಡೆಸಲಾಗಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡಂತೆ ಎಲ್ಲಾ ನ್ಯಾಯಾಲಯಗಳಲ್ಲೂ ಏಕ ಕಾಲದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ. 

ಇದನ್ನು ಸಹ ಓದಿ :GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!

ಯಾವ್ಯಾವ ಪ್ರಕರಣಗಳು ಇತ್ಯರ್ಥ?

ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ವಿವಿಧ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್ ಬ್ಯಾಂಕ್‌ ವಸೂಲಾತಿ, ಮೋಟಾರು ವಾಹನಗಳ, ಕೌಟುಂಬಿಕ, ಭೂ ಸ್ವಾಧೀನ, ಕಂದಾಯ, ಜನನ ಮತ್ತು ಮರಣ ನೊಂದಣಿ, ಜೀವನಾಂಶ ಪ್ರಕರಣಗಳು ಹಾಗೂ ಇನ್ನಿತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯ ಪೂರ್ವ ಬ್ಯಾಂಕು ಸಾಲ ಮರುಪಾವತಿಯ ಪ್ರಕರಣಗಳನ್ನು ಇತ್ಯಾರ್ಥ ಪಡಿಸಿಕೊಳ್ಳಲು ಅವಕಾಶ ಇದೆ. 

ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?

ಪಾಲ್ಗೊಳ್ಳುವುದು ಹೇಗೆ?

ಸಂಬಂಧಪಟ್ಟ ಕಕ್ಷಿದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯಾರ್ಥಪಡಿಸಿ ಕೊಳ್ಳಬಹುದಾಗಿದ್ದು, ಇದರ ಸದುಪಯೋಗ ಕಕ್ಷಿಗಾರರು ಪಡೆಯ ಬಹುದಾಗಿದೆ. ರಾಜೀ ಪ್ರಕ್ರಿಯೆಯಿಂದ ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ ಹಾಗೂ ಉಭಯ ಪಕ್ಷಗಾರರ ನಡುವಿನ ಬಾಂಧವ್ಯವು ವೃದ್ಧಿಸುವುದು. ಆದುದರಿಂದ ಕಕ್ಷಿಗಾರರು ಲೋಕ ಅದಾಲತ್‌ ನಲ್ಲಿ ಪಾಲ್ಗೊಳುವ ಅನುಕೂಲವನ್ನು ಪಡೆಯುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್‌. ಚಂದನ್ ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article