KARNATAKA NEWS/ ONLINE / Malenadu today/ Aug 13, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು. ಭಾರತೀ ಪುರದಲ್ಲಿರುವಹೋಮ್ ಸ್ಟೇವೊಂದರ ಮೇಲೆ ತೀರ್ಥಹಳ್ಳಿ ಪೊಲೀಸರು ರೇಡ್ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಅಂದಾಜು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ದೇಶಿ ಹಾಗೂ ವಿದೇಶಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಫಾರ್ಚೂನರ್ ಕಾರಿನಲ್ಲಿ ಗಾಂಜಾ ಸಾಗಾಟ ! ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸರಿಂದ ಮೂವರು ವಶಕ್ಕೆ
ತೀರ್ಥಹಳ್ಳಿ ಹೋಮ್ ಸ್ಟೇ ಮೇಲೆ ಪೊಲೀಸರ ದಾಳಿ
ವಿಹಂಗಮದ ಧಾಮ ಹೋಮ್ ಸ್ಟೇ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ನಡೆಸಿದ ರೇಡ್ನಲ್ಲಿ ವಿದೇಶಿ ಮದ್ಯಗಳು ಸೇರಿದಂತೆ ವಿವಿಧ ಕಂಪನಿಗಳ ಡ್ರಿಂಕ್ಸ್ಗಳು ಪತ್ತೆಯಾಗಿವೆ. ಅಲ್ಲದೆ ದಾಳಿಯ ವೇಳೆಯಲ್ಲಿ ಪತ್ತೆಯಾದ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳು, ಕೊಂಬುಗಳು ಹಾಗೂ ಕೋವಿಯೊಂದನ್ನ ವಶಕ್ಕೆ ಪಡೆದಿದ್ದಾರೆ ಎಂಬುದು ಪಂಚನಾಮೆ ವೇಳೆಯಲ್ಲಿ ಚೀತ್ರಿಕರಿಸಿದ ಫೋಟೋದಿಂದ ಸ್ಪಷ್ಟವಾಗಿದೆ. ಇನ್ನೂ ವಸ್ತುಗಳ ಬಗ್ಗೆ ನಿಖರ ಮಾಹಿತಿಯು ಪೊಲೀಸ್ ಪ್ರಕಟಣೆಯಲ್ಲಿ ತಿಳಿದುಬರಲಿದೆ.
24 ಗಂಟೆಯಲ್ಲಿ ಡಬ್ಬಲ್ ರೇಡ್
ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರರವರ ನೇತೃತ್ವದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಯು ಸೇರಿದಂತೆ 15 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತಂಡ ಈ ದಾಳಿಯಲ್ಲಿ ಪಾಲ್ಗೊಂಡಿತ್ತು. ಇದಕ್ಕೂ ಮೊದಲು ನಿನ್ನೆ ರಾತ್ರಿ ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ಫಾರ್ಚೂನರ್ ಕಾರೊಂದರಲ್ಲಿ ಸಾಗಿಸ್ತಿದ್ದ ಗಾಂಜಾ ಸೀಜ್ ಮಾಡಿದ್ದರು.
ಇದನ್ನೂ ಸಹ ಓದಿ : ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?
ಜಿಲ್ಲಾ ಪೊಲೀಸ್ ಇಲಾಖೆಯ ಖಡಕ್ ಸಂದೇಶ
ಶಿವಮೊಗ್ಗ ಪೊಲೀಸ್ ಇಲಾಖೆ ಮಾದಕವ್ಯಸನಕ್ಕೆ ಕಾರಣವಾಗುವ ಅಕ್ರಮಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಿದ್ದು, ತೀರ್ಥಹಳ್ಳಿಯ ಪೊಲೀಸರು ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದರೆ, ಇತ್ತ ಮಾಳೂರು ಪೊಲೀಸರು ಶನಿವಾರದಂದು ಖಚಿತ ಮಾಹಿತಿ ಮೇರೆಗೆ ಫಾರ್ಚೂನರ್ ವೆಹಿಕಲ್ನಲ್ಲಿ ಸಾಗಿಸಲಾಗ್ತಿದ್ದ ಗಾಂಜಾವನ್ನು ಸೀಜ್ ಮಾಡಿದ್ದರು. ಇದರ ಬೆನ್ನಲ್ಲೆ ಶನಿವಾರ ರಾತ್ರಿ ಹೋಮ್ ಸ್ಟೇ ಮೇಲೆ ಪೊಲೀಸರ ದಾಳಿ ನಡೆದಿದೆ.
ಚರ್ಚೆ..ಚರ್ಚೆ.,..ಚರ್ಚೆ
ಸದ್ಯ ನಡೆದಿರುವ ಪೊಲೀಸರ ದಾಳಿ ಸಂಬಂಧ ಈಗಾಗಲೇ ಚರ್ಚೆ ಆರಂಭವಾಗಿದ್ದು ಪರ ಹಾಗೂ ವಿರೋಧದ ಮಾತುಗಳು ಕೇಳಿಬರಲಾರಂಭಿಸಿವೆ. ಹೋಮ್ ಸ್ಟೇನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆಯು ಚರ್ಚೆಯಾರಂಭವಾಗಿದೆ.
ಇನ್ನಷ್ಟು ಸುದ್ದಿಗಳು
ಭದ್ರಾವತಿ ಶಾಸಕರಿಗೆ ಹೊಸ ಜವಾಬ್ದಾರಿ! ಮಿಸ್ ಆಯ್ತಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!?
ಶಿವಮೊಗ್ಗ ನಗರ ಶಾಸಕರಿಂದ ಉದ್ಘಾಟನೆಗೊಂಡ TS ಸರ್ಕಲ್! ಇಲ್ಲಿರೋ ವಿಶೇಷ ಏನು ಗೊತ್ತಾ?
