ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಶಿವಮೊಗ್ಗದಲ್ಲಿ ಒಂದು ಸೇನಾ ಸ್ಮಾರಕದಂತಹ ಮಾದರಿ ಇದ್ದರೇ ಹೇಗೆ ಎಂಬ ಆಲೋಚನೆ ಹೇಗೆ ಬಂತು? ಎಲ್ಲಿಂದ , ಯಾರಿಂದ ಬಂತೋ ಗೊತ್ತಿಲ್ಲ. ಆದರೆ ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ  ಸೇನಾ ಯುದ್ದ ಟ್ಯಾಂಕರ್​ನ ಸ್ಮಾರಕ ನಿರ್ಮಾಣವಾಗಲಿದೆ. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬಳಸಲಾಗಿದ್ದ, ಟಿ55 ಮಾಡಲ್​ನ ಟ್ಯಾಂಕರ್​ನ್ನ ಶಿವಮೊಗ್ಗಕ್ಕೆ ತರಿಸಿಕೊಳ್ಳಲಾಗಿದೆ. ನಿಷ್ಕ್ರೀಯವಾಗಿದ್ದ ಈ ಟ್ಯಾಂಕರ್​ನ್ನ ಸೇನೆಯಿಂದ ಪಡೆಯಲಾಗಿದ್ದು, ವಿಶೇಷ ಲಾರಿಯಲ್ಲಿ ಟ್ಯಾಂಕರ್​ನ್ನ ತರಿಸಿಕೊಳ್ಳಳಾಗಿದೆ. 

ಎಲ್ಲಿ ಸ್ಥಾಪನೆ ?

ಸದ್ಯ ಇದುವರೆಗೂ ಎಂಆರ್​ಎಸ್​ ಸರ್ಕಲ್​ನಲ್ಲಿ  ಇದನ್ನು ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಶಿವಮೊಗ್ಗ ನಗರ ಶಾಸಕರು ಹೇಳುವಂತೆ, ಯುದ್ದ ಟ್ಯಾಂಕರ್​ನ್ನ ಎಲ್ಲಿ ಸ್ಥಾಪಿಸುವುದು ಎಂದು ಇನ್ನೂ ನಿಶ್ಚಯವಾಗಿಲ್ಲ ಎಂಆರ್​ಎಸ್ ಸರ್ಕಲ್​ ಅಥವಾ ಐಬಿ ಸರ್ಕಲ್​ ನ ಬಳಿಯಲ್ಲಿ ಅಥವಾ ಫ್ರೀಡಂಪಾರ್ಕ್​ ಬಳಿಯಲ್ಲಿ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇನ್ನೂ ಈ ಸಂಬಂಧ ಮಾತನಾಡಿರುವ ಆಗಸ್ಟ್ 15 ರೊಳಗೆ ಯುದ್ದ ಟ್ಯಾಂಕರ್​ನ್ನ ಪಡೆಯುವ ನಿರೀಕ್ಷೆಯಲ್ಲಿ ಗುರಿ ಸಾಧಿಸಿದ್ದೇವೆ. ವಾರದೊಳಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿಯವರ ಜೊತೆ ಸಭೆ ನಡೆಸಿ ಟ್ಯಾಂಕರ್​ನ್ನ ಎಲ್ಲಿ ಸ್ಥಾಪಿಸುವುದು ಎಂದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. 

ಬರಲಿದೆ ಯುದ್ದ ವಿಮಾನ?

ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದ ಸದಸ್ಯರು ಟ್ಯಾಂಕರ್​ನ್ನ ಹೂವು ಹಾರ ಅಲಂಕಾರ ಹಾಗೂ ತಾಳಮೇಳಗಳೊಂದಿಗೆ ಬರಮಾಡಿಕೊಂಡರು. ಬಳಿಕ ಮಾತನಾಡಿದ  ಶಾಸಕ ಎಸ್‌.ಎನ್. ಚನ್ನಬಸಪ್ಪ (MLA S.N. Channabasappa), 2020 ರಲ್ಲಿಯೇ ರಕ್ಷಣಾ ಇಲಾಖೆಗೆ ನಿಷ್ಕ್ರಿಯ ಯುದ್ಧ ಟ್ಯಾಂಕರ್​ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಪೂನಾದ ರಕ್ಷಣಾ ಕಾರ್ಯಾಲಯದಿಂದ ಈ   ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ಬಂದಿದೆ. ಬರೋಬ್ಬರಿ ಮೂರು ದಿನ ಪ್ರಯಾಣ ಮಾಡಿದೆ. ಸದ್ಯದಲ್ಲೇ ಇನ್ನೊಂದು ನಿಷ್ಕ್ರಿಯ ವಿಮಾನ ಕೂಡ ಬರಲಿದೆ ಎಂದು ತಿಳಿಸಿದ್ದಾರೆ. 

ಎಲ್ಲಿದೆ ಈಗ ಟ್ಯಾಂಕರ್

ಎಂ.ಆರ್.ಎಸ್.ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೃತ್ತದ ಬಳಿ ಇರುವ ಜಾಗದಲ್ಲಿ ಸೂಕ್ತ ಭದ್ರತೆಯೊಂದಿಗೆ ಟ್ಯಾಂಕರ್​ನ್ನ ಇರಿಸಲಾಗಿದೆ.  ಸೂಕ್ತ ಕಟ್ಟೆ ಕಟ್ಟಿದ ಬಳಿಕ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಪಾಲಿಕೆ  ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment