ಕನ್ನಡ ಧ್ವಜದ ಕಟ್ಟೆ ತೆರವಿಗೆ ಆಕ್ರೋಶ! ಟೈರ್​ಗೆ ಬೆಂಕಿ

Organisations protest against removal of Kannada flag pole

ಕನ್ನಡ ಧ್ವಜದ ಕಟ್ಟೆ ತೆರವಿಗೆ ಆಕ್ರೋಶ! ಟೈರ್​ಗೆ ಬೆಂಕಿ

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಶಿವಮೊಗ್ಗ ನಗರದ ಜೈಲ್​ ಸರ್ಕಲ್​ ಬಳಿಯಲ್ಲಿದ್ದ ಕನ್ನಡದ ಭಾವುಟ ಹಾರಿಸುವ ಧ್ವಜದ ಕಟ್ಟೆಯನ್ನು ಮುಂದಾಗಿದ್ದಕ್ಕೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. 

ಜೈಲ್ ಸರ್ಕಲ್​ನ ಬಳಿಯಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿ  ಪೂರ್ಣಗೊಂಡಿರದ ಬಗ್ಗೆ ಹಾಗೂ ಅಂಬೇಡ್ಕರ್​ರವರ ಹೆಸರಿರುವ ನಾಮಪಲಕವನ್ನು ಚರಂಡಿ ಮುಚ್ಚಲು ಬಳಸಿದ್ದಕ್ಕೆ ಮಾಧ್ಯಮಗಳು ಸುದ್ದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್​ ಸಿಟಿ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದರು. ಈ ಮಧ್ಯೆ ಧ್ವಜದ ಕಟ್ಟೆಯನ್ನು ತೆಗೆಯಲು ಇವತ್ತು ಮುಂದಾಗಿದ್ದಾರೆ. ಅಲ್ಲದೆ ಜೆಸಿಬಿ ಬಳಸಿ ಕಟ್ಟೆಯನ್ನು ಅರ್ದ ತೆಗೆದಿದ್ದಾರೆ. ಈ ವೇಳೆ ಅಲ್ಲಿಗೆ ಬಂದು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅಲ್ಲದೆ ಟೈಯರ್​ಗೆ  ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದವು. 

35 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಲ್ಲಿಯೇ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಯಾವುದೇ ಸೂಚನೆ ಕೊಡದೇ ದ್ವಜದ ಕಟ್ಟೆ ತೆರವುಗೊಳಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಮುಖಂಡರು, ಅಧಿಕಾರಿಗಳು ಕಾಮಗಾರಿ ನಿಲ್ಲಿಸುವರೆಗೂ ಪ್ರತಿಭಟನೆ ನಡೆಸಿದವು.  

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್

ಶಿವಮೊಗ್ಗ ಜಿಲ್ಲೆ ಚೋರಡಿಯಲ್ಲಿ ಕುಮದ್ವತಿ ಸೇತುವೆ ಬಳಿ ಸಂಭವಿಸಿದ ಬಸ್ ಅಪಘಾತದ ಬೆನ್ನಲ್ಲೆ ಮತ್ತೊಂದು ಬಸ್ ಅಪಘಾತದ ಘಟನೆ ಬಗ್ಗೆ ವರದಿಯಾಗಿದೆ. 

ಶಿಕಾರಿಪುರ ತಾಲ್ಲೂಕಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್​ವೊಂದು ಹಳೇ ಜೋಗದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿದ್ದ ತೋಟವೊಂದಕ್ಕೆ ನುಗ್ಗಿದೆ.   ಬಸ್​ ಕೆಲವೆಡೆ ಜಖಂಗೊಂಡಿದೆ.  ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ ಎನ್ನಲಾಗಿದ್ದು  , ಇಂದು ಸಂಜೆ ನಡೆದ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ.