10 ಸಾವಿರಕ್ಕೂ ಅಧಿಕ ಮಕ್ಕಳ ಅಮೃತ ನಡಿಗೆ! ಹೇಗಿತ್ತು ಗೊತ್ತಾ ಎನ್​ಇಎಸ್​ ಹಬ್ಬದ ಜಿಸ್ಟ್​!

In Shivamogga city, 10,000 children participated in the 'Amrit Mahotsav' programme organised by NES.

10 ಸಾವಿರಕ್ಕೂ ಅಧಿಕ ಮಕ್ಕಳ ಅಮೃತ ನಡಿಗೆ!  ಹೇಗಿತ್ತು ಗೊತ್ತಾ ಎನ್​ಇಎಸ್​  ಹಬ್ಬದ ಜಿಸ್ಟ್​!

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಎನ್‌ಐಎಸ್ ಸಮೂಹದ ಸುಮಾರು 35 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಶಿವಮೊಗ್ಗ ನಗರದ  ಪ್ರಮುಖ ರಸ್ತೆಗಳಲ್ಲಿ ಅಮೃತ ನಡಿಗೆ ನಡೆದರು. 

.

ನಗರದ ವಿವಿಧ ಭಾಗಗಳಿಂದ ಸುಮಾರು 6 ತಂಡಗಳಲ್ಲಿ  10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಮೃತ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಎನ್​ಇಎಸ್​ ಸಂಸ್ಥೆಯ ಪ್ರೌಢ ಮತ್ತು ಪದವಿ ಶಾಲೆಗಳ ಮಕ್ಕಳು ಸಾಗಿಬಂದ ದೃಶ್ಯ ನೋಡುಗರ ಗಮನ ಸೆಳೆದಿತ್ತು.   

ಎನ್ ಇಎಸ್ ಸಂಸ್ಥೆಯ ಪರವಾಗಿ ಘೋಷಣೆಗಳನ್ನು ಕೂಗಿದ ಮಕ್ಕಳು ನಮ್ಮ ಶಾಲೆ, ನಮ್ಮ ಸಂಸ್ಥೆ, ನಮ್ಮ ಹೆಮ್ಮೆ ಕೂಗುತ್ತಿದ್ದ ದೃಶ್ಯ ವಿಶೇಷವಾಗಿತ್ತು.  ಮೂರು ಕಿ.ಮೀ. ಉದ್ದಕ್ಕೂ ವಿದ್ಯಾರ್ಥಿಗಳ ಸರತಿ ಸಾಲು ಎನ್‌ ಇಎಸ್ ಮೈದಾನಕ್ಕೆ ಬರುವುದರೊಂದಿಗೆ ಯಶಸ್ವಿಯಾಗಿ ಸಮಾಪ್ತಿಯಾಯ್ತು.. ಇದೇ ವೇಳೆ ವಿದ್ಯಾರ್ಥಿಗಳು ಹೀಲಿಯಂ ಬಲೂನ್​ಗಳನ್ನ ಆಗಸಕ್ಕೆ ಹಾರಿಬಿಡಲಾಯ್ತು. 

ಇನ್ನೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಇದೇ ಜೂ.20ಮತ್ತು 21ರಂದು ಎನ್‌ಇಎಸ್ ಮೈದಾನದಲ್ಲಿ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. 

ಎನ್​ಇಎಸ್​ ಹಬ್ಬ ಎಂದೇ ಕರೆಸಿಕೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಎರಡೂ ದಿನಗಳ ಕಾಲವೂ ಮಕ್ಕಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 35 ಸಂಸ್ಥೆಗಳ 18 ಸಾವಿರ ಮಕ್ಕಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ