SHIVAMOGGA | Jan 11, 2024 | ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ನಕಲಿ ಚಿನ್ನದ ವಿಚಾರದಲ್ಲಿ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಸ್ಟೇಷನ್
ಚಿನ್ನ ಅಂದರೆ ಮನಸೋಲದವರಿಲ್ಲ. ಹಾಗಾಗಿಯೇ ಅದನ್ನೇ ತೋರಿಸಿ ನಂಬಿಸಿ ಮೋಸ ಮಾಡುತ್ತಾರೆ. ಇಂತಹ ಮೋಸದ ಕೃತ್ಯಕ್ಕೆ ಜನರು ಆಯ್ದುಕೊಳ್ಳುವ ವೇದಿಕೆ ಕೆಎಸ್ಆರ್ಟಸಿ ಬಸ್ ನಿಲ್ದಾಣ. ಅದೇ ರೀತಿಯಲ್ಲಿ ಶಿವಮೊಗ್ಗ ಬಸ್ ನಿಲ್ದಾಣ ದಲ್ಲಿ ಶಿಕಾರಿಪುರದ ಕೃಷ್ಣಪ್ಪ ಮತ್ತು ಹಾಲೇಶ್ ನಾಯ್ಕ ಎಂಬವರು ಕಾಸಿನ ಸರ ಸ್ಕೆಚ್ ಹಾಕಿದ್ದರು.
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕು ನಿವಾಸಿ ಮಹಿಳೆಯೊಬ್ಬರು ತೀರ್ಥಹಳ್ಳಿ 15 ನೇ ಮೈಲಿ ಕಲ್ಲು ಬಳಿಯಲ್ಲಿ ಅಡಿಕೆ ಸುಲಿಯುವ ಕೆಲಸಕ್ಕೆ ಅಂತಾ ಹೊರಟಿದ್ದರು. KSRTC ನಿಲ್ದಾಣದಿಂದ, ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದ ವೇಳೆ ಅವರನ್ನ ಕೃಷ್ಣಪ್ಪ ಅಡ್ಡಗಟ್ಟಿ ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೆ ಸುಂದರವಾದ ಕಾಸಿನ ಸರದ ಕಥೆ ಕಟ್ಟಿದ್ದಾರೆ.
ಶಿವಮೊಗ್ಗ ಕ್ಕೆ ಬಂದಿದ್ದು ಮಗಳಿಗೆ ಆಪರೇಷನ್ ಮಾಡಿಸ್ತಿದ್ದೀನಿ. ಆದರೆ ದುಡ್ಡು ಶಾರ್ಟೇಜ್ ಆಗಿದೆ. ಅವಳದ್ದು ಕಾಸಿನ ಸರ ಇದೆ. ಇದನ್ನ ಇಟ್ಕೊಂಡು ಸ್ವಲ್ಪ ದುಡ್ಡು ಕೊಡಿ ಎಂದಿದ್ದಾರೆ. ಮೊದಮೊದಲು ಒಪ್ಪದ ಮಹಿಳೆ ಆಮೇಲೆ ತನ್ನ ಬಳಿ ದುಡ್ಡಿಲ್ಲ ಎಂದಿದ್ದಾರೆ. ಆಗ ಇಷ್ಟೊಂದು ದೊಡ್ಡ ಕಾಸಿನ ಸರ ಅಡವಿಟ್ಟರೆ ದುಡ್ಡು ಸಿಗಲ್ಲ. ಹಾಗಿ ಈ ಸರನ ಇಟ್ಕೊಂಡು ನಿಮ್ಮ ವೋಲೆ ಹಾಗೂ ಮಾಟಿ ನೀಡಿ ಎಂದು ತಿಳಿಸಿದ್ದಾರೆ.
ಕಾಸಿನ ಸರದ ಆಸೆ ಮಹಿಳೆ ವೋಲೆ, ಮಾಟಿ ಬಿಚ್ಚುಕೊಟ್ಟಿದ್ದಳು. ಕಾಸಿನ ಸರವನ್ನ ಪಡೆದು ಅಲ್ಲಿಂದ ತೆರಳಿದ್ದರು. ಆ ಬಳಿಕ ಮಹಿಳೆಗೆ ಮೋಸವಾಗಿದ್ದು ಗೊತ್ತಾಗಿದೆ. ಹಾಗಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ದೊಡ್ಡಪೇಟೆ ಪೊಲೀಸರು, ಆರೋಪಿ 1) ಕೃಷ್ಣಪ್ಪನನ್ನ ಬಂಧಿಸಿದ್ದಾರೆ.
ಆತನಿಂದ 25,000/- ರೂ ಬೆಲೆ ಬಾಳುವ ಒಂದು ಜೊತೆ ಬಂಗಾರ ಕಿವಿ ಓಲೆ ಮತ್ತು ಒಂದು ಜೊತೆ ಕಿವಿ ಮಾಟಿಯನ್ನು ವಶಪಡಿಸಿಕೊಳ್ಳಲಾಗಿದೆ. 02 ನೇ ಆರೋಪಿ ಹಾಲೇಶ್ ನಾಯ್ಕ ತಲೆಮರೆಸಿಕೊಂಡಿದ್ದಾನೆ.
