ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್​ ಓಡಾಟ ಮೂಡಿಸಿದೆ ಕುತೂಹಲ!

Shimoga: A private jet has been spotted at Kuvempu Airport in Shivamogga. ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್​ ಓಡಾಟ ಮೂಡಿಸಿದೆ ಕುತೂಹಲ!

ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್​ ಓಡಾಟ ಮೂಡಿಸಿದೆ ಕುತೂಹಲ!

KARNATAKA NEWS/ ONLINE / Malenadu today/ Sep 2, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣ ಕುವೆಂಪು ವಿಮಾನ ನಿಲ್ದಾಣ (shivamogga airport) ದಲ್ಲಿ ವಾಣಿಜ್ಯ ವಿಮಾನ ಯಾನ ಆರಂಭವಾದ ಬೆನ್ನಲ್ಲೆ, ಇದೀಗ ಖಾಸಗಿ ಜೆಟ್​ಗಳ ಪ್ರಯಾಣವೂ ಆರಂಭವಾಗಿದೆ.

ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ  ಪ್ರೈವೇಟ್‌ ಜೆಟ್‌ ಕಾಣಿಸಿಕೊಂಡಿದ್ದು, ಈ ಜೆಟ್ ಯಾರದ್ದು ಎಂಬ ಕುತೂಹಲದ ಚರ್ಚೆ ಸೋಶಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.  ಸೆ.1ರಂದು ಖಾಸಗಿ ವಿಮಾನವೊಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು,  ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಕುವೆಂಪು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. 

ಬಳಿಕ ಈ ವಿಮಾನ ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು  ಮೈಸೂರು ವಿಮಾನ ನಿಲ್ದಾಣ ತಲುಪಿದೆ. ಈ ವಿಮಾನದ ಬಗ್ಗೆ  ಹಿರಿಯ ಪತ್ರಕರ್ತ ಡಿ.ಪಿ.ಸತೀಶ್‌ ಅವರು ತಮ್ಮ ಟ್ವಿಟರ್‌ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. 

ಸದ್ಯ ಶಿವಮೊಗ್ಗದಲ್ಲಿ ಖಾಸಗಿ ಜೆಟ್ ಯಾರು ಬಳಸಿದ್ರು ಎಂಬುದರ ಚರ್ಚೆ ಜೋರಾಗಿ ನಡೆಯುತ್ತಿದ್ದು ನಾನಾ ರೀತಿಯ ಕಾಮೆಂಟ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿವ್ಯಕ್ತವಾಗುತ್ತಿದೆ 


ಇನ್ನಷ್ಟು ಸುದ್ದಿಗಳು