ಹೊಸನಗರ ರಸ್ತೆಯಲ್ಲಿ ಟ್ಯಾಂಕರ್​ ಲಾರಿ ಪಲ್ಟಿ/ ಆತಂಕ ಮೂಡಿಸಿದ ಹೊಗೆ/ ಅಗ್ನಿಶಾಮಕ ಸಿಬ್ಬಂದಿ ದೌಡು

ಘಟನೆಯಲ್ಲಿ ಆಯಿಲ್​( ಯಾವುದು ಎಂಬುದು ಸ್ಪಷ್ಟವಾಗಿಲ್ಲ) ತುಂಬಿದ್ದ ಲಾರಿ ಪಲ್ಟಿಯಾಗಿದ್ದು, ಒಂದು ಕಡೆಗೆ ಮಗುಚಿ ಬಿದ್ದಿದೆ.

ಹೊಸನಗರ ರಸ್ತೆಯಲ್ಲಿ ಟ್ಯಾಂಕರ್​ ಲಾರಿ ಪಲ್ಟಿ/  ಆತಂಕ ಮೂಡಿಸಿದ ಹೊಗೆ/ ಅಗ್ನಿಶಾಮಕ ಸಿಬ್ಬಂದಿ ದೌಡು

ಶಿವಮೊಗ್ಗ ಜಿಲ್ಲೆಯ, ಆಯನೂರಿನಿಂದ -ರಿಪ್ಪನ್​ಪೇಟೆಗೆ ಹೋಗುವ ಹೊಸನಗರ ಮಾರ್ಗದ (Hosanagara Road) ನಡುವೆ ಟ್ಯಾಂಕರ್​ ಲಾರಿಯೊಂದು ಪಲ್ಟಿಯಾಗಿದೆ. ಇಲ್ಲಿನ 9 ನೇ ಮೈಲಿಕಲ್ಲು ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಆಯಿಲ್​( ಯಾವುದು ಎಂಬುದು ಸ್ಪಷ್ಟವಾಗಿಲ್ಲ) ತುಂಬಿದ್ದ ಲಾರಿ ಪಲ್ಟಿಯಾಗಿದ್ದು, ಒಂದು ಕಡೆಗೆ ಮಗುಚಿ ಬಿದ್ದಿದೆ. 

 ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು...ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ಶಿವಮೊಗ್ಗದ ಕಡೆಗೆ ರಿಪ್ಪನ್​ಪೇಟೆ ( Rippanpet) ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಬಲಭಾಗಕ್ಕೆ ವಾಲಿಕೊಂಡು ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ಇನ್ನೂ ಟ್ಯಾಂಕರ್​ನಿಂದ ಹೊರಬಿಳ್ತಿರುವ ಆಯಿಲ್​ನಿಂದ ಹೊಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು. ಈ ನಡುವೆ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ (Fire brigade) ಸಿಬ್ಬಂದಿ ದೌಡಾಯಿಸಿ, ಸ್ಥಳವನ್ನು ಸೀಲ್​ ಮಾಡಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. 

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​