ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?

Those who come to Shivamogga city can have lunch without money! You don't need money to satiate your hunger! What's so special about it?

ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS  

ಯಾವುದೋ ಊರು, ಎನೋ ಕೆಲಸ, ಶಿವಮೊಗ್ಗಕ್ಕೆ ಬಂದಿದ್ದಾರೆ ಆತ. ಅನುಭವದ ಬದುಕಿನ ಕೈಯಲ್ಲಿ ಕಾಸಿಲ್ಲ. ಕೈವೊಡ್ಡಿ ಕೇಳಲು ಮನಸ್ಸಿಲ್ಲ. ಕೇಳ ಎನ್ನುವ ಮನಸ್ಸಿಗೂ, ಅವಮಾನ ಎದುರಿಸುವ ಆತಂಕ. ಇರಲಿ ಬಿಡು ಹಸಿವು ಹಾಗೆ ಎಂದುಕೊಂಡೆ, ಎಲ್ಲೋ ಸಿಗುವ ನೀರು ಕುಡಿದು ಸುಮ್ಮನಾಗುವವರು ನಮ್ಮೂರಲ್ಲಿ ಬಹಳ ಮಂದಿ ಇದ್ದಾರೆ. 

ಅಂತವರ ಹಸಿವು, ಅನ್ನದೇವರಿಗೂ ಶಾಪವಿದ್ದಂತೆ. ಹಾಗಾಗಿ, ಮುಜುಗರಕ್ಕೋ ಅಥವಾ ಸ್ವಾಭಿಮಾನಕ್ಕೋ ಅಥವಾ ದುಡ್ಡಿಲ್ಲದ ಪರಿಸ್ಥಿತಿಯನ್ನು ತೋರಲಾಗದ ಸನ್ನಿವೇಶಕ್ಕೋ ಬಿದ್ದು ಖಾಲಿ ಕೈಗಳಿಗೆ ಟೋಕನ್​ ಕೊಟ್ಟು ಹೋಟೆಲ್​ನಲ್ಲಿ ಹೊಟ್ಟೆ ತುಂಬಾ ಊಟ ಮಾಡಿಸುವ ವ್ಯವಸ್ಥೆಯೊಂದು ಶಿವಮೊಗ್ಗದಲ್ಲಿ ಜಾರಿಗೆ ಬಂದಿದೆ. 

ಇಲ್ಲಿ ಯಾರನ್ನು ಕೇಳಬೇಕಿಲ್ಲ. ಹಸಿವಾಗಿದ್ದರೇ, ಕೊಡಲು ಕಾಸಿಲ್ಲದಿದ್ದರೇ, ಅಲ್ಲೆ ಗೋಡೆ ಮೇಲೆ ಟೋಕನ್​ವೊಂದು ಇರುತ್ತದೆ. ಅದನ್ನ ತೆಗೆದುಕೊಂಡು ಹೋಟೆಲ್​ನವರಿಗೆ ಕೊಟ್ಟರೇ ಊಟ ಕೊಡುತ್ತಾರೆ. ಯಾಕೆ ? ಏನು? ಯಾವೊಂದು ವಿವರ ಕೊಡುವ ಅಗತ್ಯವಿಲ್ಲ. ಅಂತಹದ್ದೊಂದು ವ್ಯವಸ್ಥೆಯನ್ನು ಮಾಸ್ಟರ್ ರೋಹನ್ ಶಿರಿಯವರ ಸಾರಥ್ಯದ ಯೂನಿವರ್ಸಲ್ ನಾಲೇಜ್ ಸಂಸ್ಥೆ ಜಾರಿಗೆ ತಂದಿದೆ. 

ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಇರುವ ಕೌಸ್ತುಭ ಹೊಟೆಲ್ ನಲ್ಲಿ ಅಗತ್ಯವಿರುವವರಿಗೆ ಊಟದ ಟೋಕನ್ ವಿತರಿಸುವ ಮೂಲಕ ಪುಡ್ ಆನ್​ ವಾಲ್ ಎಂಬ ಸಿಸ್ಟಮ್​ನ್ನ ಅನಾವರಣಗೊಳಿಸಲಾಗಿದೆ. ಅಂದಹಾಗೆ,   2023 ಜನವರಿ 26 ರಿಂದ ಇಂತಹದ್ದೊಂದು ವ್ಯವಸ್ಥೆಯು ಜಾರಿಯಲ್ಲಿತ್ತು. ಬೆಂಗಳೂರು, ಮಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಪುತ್ತೂರು ಗಳಲ್ಲಿದ್ದ ವ್ಯವಸ್ಥೆಯನ್ನು ಶಿವಮೊಗ್ಗದಲ್ಲಿ ಯೂನಿವರ್ಸಲ್ ನಾಲೇಜ್  ಸಂಸ್ಥೆ ಜಾರಿಗೆ ತಂದಿದೆ. 


ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

 ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಿರೀಕ್ಷೆಯಂತೆಯೇ ನಡೆಯುತ್ತಾ ಎಂಬ ಪ್ರಶ್ನೆಗೆ ಸಂಸದ ಬಿ.ವೈ.ರಾಘವೇಂದ್ರ ಕಾದು ನೋಡೋಣ ಎಂದು ಉತ್ತರಿಸಿದ್ಧಾರೆ. ನಿನ್ನೆ ಜೋಗ ಜಲಪಾತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು,  ನಿರೀಕ್ಷೆಯಂತೆ ಆಗಸ್ಟ್​ 11 ರಂದು ಇಂಡಿಗೋ ವಿಮಾನ ಹಾರಾಟ  ಆರಂಭವಾಗಬೇಕಿದೆ. ಆದರೆ ಇದುವರೆಗೂ ವೆಬ್​ಸೈಟ್​ನಲ್ಲಿ ಬುಕ್ಕಿಂಗ್ ಆರಂಭಿಸಿಲ್ಲ, ಇನ್ನು  ಸಚಿವ ಎಂಬಿ ಪಾಟೀಲ್​ರಿಗೆ ವಿಚಾರ ತಿಳಿಸಿದ್ದು, ಮೊದಲ ಪ್ಲೈಟ್​ನಲ್ಲಿ ಪ್ರಯಾಣ ಬೆಳಸಿ ಸಂಚಾರಕ್ಕೆ ಚಾಲನೆ ನೀಡಬೇಕು ಎಂದು ಕೋರಿರುವುದಾಗಿ ತಿಳಿಸಿದರು. 


ಬೆಂಗಳೂರು ಕೋರ್ಟ್​ಗೆ ಬೇಕಿದ್ದ ವಿಜಯಪುರದ ಆರೋಪಿಯನ್ನ ಹಿಡಿದ ಶಿವಮೊಗ್ಗ ಪೊಲೀಸರು! ಏನಿದು ಪ್ರಕರಣ

ಶಿವಮೊಗ್ಗ ಪೊಲೀಸರು ವಿಜಯಪುರ ಜಿಲ್ಲೆಯ ಆರೋಪಿಯೊಬ್ಬನನ್ನ ಹಿಡಿದು ಬೆಂಗಳೂರು ಕೋರ್ಟ್​ಗೆ ಮುಂದಕ್ಕೆ ನಿಲ್ಲಿಸಿದ್ದಾರೆ. 

ಏನಿದು ಪ್ರಕರಣ?

2014 ನೇ ಸಾಲಿನಲ್ಲಿ ಆರೋಪಿ ಎಜಾಸ್ ಪಟೇಲ್, 35 ವರ್ಷ, ನಂದ್ರಾಳ ಗ್ರಾಮ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಈತನ ವಿರುದ್ಧ ಕಲಂ 66(ಎ) ಐಟಿ ಕಾಯ್ದೆ, ಕಲಂ 3 KCOCA ಕಾಯ್ದೆ, ಕಲಂ 8, 3, 25 ಆಯುಧ ಕಾಯ್ದೆ ಮತ್ತು ಕಲಂ 506, 504, 120(ಬಿ), 149, 399, 400, 402 ಐಪಿಸಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈ ಸಂಬಂಧ  Prl. City Civil & Sessions Court, Bangalore ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿತ್ತು.  

ಆದರೆ, ಆರೋಪಿ ಎಜಾಸ್ ಪಟೇಲ್ ಈತನು ಸದರಿ ಪ್ರಕರಣದ ವಿಚಾರಣೆಗೆ 2021ನೇ ಸಾಲಿನಿಂದಲೂ ನ್ಯಾಯಾಲಯಕ್ಕೆ  ಹಾಜರಾಗದೇ ತಲೆಮರೆಸಿ ಕೊಂಡಿದ್ದ. ಈತನನ್ನ ಹಿಡಿಯುವ ಜವಾಬ್ದಾರಿ ಶಿವಮೊಗ್ಗ ಪೊಲೀಸರ ತೆಕ್ಕೆಗೆ ಬಂದಿತ್ತು. ಇದೀಗ, ದಿನಾಂಕಃ 09-07-2023 ರಂದು ಇಂಡಿ ತಾಲ್ಲೂಕಿನ ಭೈರವಣಿಗೆ ಗ್ರಾಮದಲ್ಲಿದ್ದ ಎಜಾಸ್ ಪಟೇಲ್​ನನ್ನ ದಸ್ತಗಿರಿ ಮಾಡಿ ದಿನಾಂಕಃ 10-07-2023 ರಂದು  ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. 


ಶಿವಮೊಗ್ಗದಲ್ಲಿ ಇವತ್ತು ಮಳೆ ಜೋರಿದ್ಯಾ? ಹವಾಮಾನ ವರದಿ ಹೇಳೋದೇನು? ನಿನ್ನೆ ಹೇಗಿತ್ತು ವರ್ಷಧಾರೆ? ವಿವರ ಇಲ್ಲಿದೆ



ಶಿವಮೊಗ್ಗ :  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 60.40 ಮಿಮಿ ಮಳೆಯಾಗಿದ್ದು, ಸರಾಸರಿ 8.63 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  188.54 ಮಿಮಿ ಮಳೆ ದಾಖಲಾಗಿದೆ.ಶಿವಮೊಗ್ಗ 03.40 ಮಿಮಿ., ಭದ್ರಾವತಿ 09.20 ಮಿಮಿ., ತೀರ್ಥಹಳ್ಳಿ 10.70 ಮಿಮಿ., ಸಾಗರ 17.00 ಮಿಮಿ., ಶಿಕಾರಿಪುರ 3.40 ಮಿಮಿ., ಸೊರಬ 4.30 ಮಿಮಿ. ಹಾಗೂ ಹೊಸನಗರ 12.40 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್​ಗಳಲ್ಲಿ: 

ಲಿಂಗನಮಕ್ಕಿ: 1819 (ಗರಿಷ್ಠ), 1751.70 (ಇಂದಿನ ಮಟ್ಟ), 8636.00 (ಒಳಹರಿವು), 834.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1777.20.  

ಭದ್ರಾ: 186 (ಗರಿಷ್ಠ), 140.9 (ಇಂದಿನ ಮಟ್ಟ), 4156.00 (ಒಳಹರಿವು), 163.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 171.30.   

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 6677.00 (ಒಳಹರಿವು), 6145.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 572.86 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1493 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 577.70 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.88 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 400 (ಒಳಹರಿವು), 552.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.00 (ಎಂಎಸ್‍ಎಲ್‍ಗಳಲ್ಲಿ)..

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 567.34 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 890.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.86 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 574.84 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 504.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 580.30 (ಎಂಎಸ್‍ಎಲ್‍ಗಳಲ್ಲಿ). 

ಇವತ್ತು ಮಳೆ ಇರುತ್ತಾ?

ಐಎಂಡಿ ಬೆಂಗಳೂರು ನೀಡಿರುವ ಮಾಹಿತಿ ಪ್ರಕಾರ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಅಲರ್ಟ್​ಗಳು ಘೋಷಣೆಯಾಗಿಲ್ಲ. ಸಾಧಾರಣ ಮಳೆಯಾಗುವ ಸೂಚನೆಯಿದ್ದು ಗುಡುಗು ಮಿಂಚಿನ ಜೊತೆ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಅದರ ಪರಿಣಾಮ ಜಿಲ್ಲೆಯ ಮೇಲೂ ಆಗುವ ಸಾಧ್ಯತೆ ಇದೆ. . ಇದೇ ಜುಲೈ 14-15 ರಂದು ಶಿವಮೊಗ್ಗದಲ್ಲಿ ಭಾರೀ ಮಳೆಯ ಜೊತೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.