ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

Will the first flight at Shivamogga airport go as scheduled? Mp B.Y. Raghavendra's words

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

KARNATAKA NEWS/ ONLINE / Malenadu today/ Jul 11 2023 SHIVAMOGGA NEWS  

 ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಿರೀಕ್ಷೆಯಂತೆಯೇ ನಡೆಯುತ್ತಾ ಎಂಬ ಪ್ರಶ್ನೆಗೆ ಸಂಸದ ಬಿ.ವೈ.ರಾಘವೇಂದ್ರ ಕಾದು ನೋಡೋಣ ಎಂದು ಉತ್ತರಿಸಿದ್ಧಾರೆ. ನಿನ್ನೆ ಜೋಗ ಜಲಪಾತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು,  ನಿರೀಕ್ಷೆಯಂತೆ ಆಗಸ್ಟ್​ 11 ರಂದು ಇಂಡಿಗೋ ವಿಮಾನ ಹಾರಾಟ  ಆರಂಭವಾಗಬೇಕಿದೆ. ಆದರೆ ಇದುವರೆಗೂ ವೆಬ್​ಸೈಟ್​ನಲ್ಲಿ ಬುಕ್ಕಿಂಗ್ ಆರಂಭಿಸಿಲ್ಲ, ಇನ್ನು  ಸಚಿವ ಎಂಬಿ ಪಾಟೀಲ್​ರಿಗೆ ವಿಚಾರ ತಿಳಿಸಿದ್ದು, ಮೊದಲ ಪ್ಲೈಟ್​ನಲ್ಲಿ ಪ್ರಯಾಣ ಬೆಳಸಿ ಸಂಚಾರಕ್ಕೆ ಚಾಲನೆ ನೀಡಬೇಕು ಎಂದು ಕೋರಿರುವುದಾಗಿ ತಿಳಿಸಿದರು. 


ಬೆಂಗಳೂರು ಕೋರ್ಟ್​ಗೆ ಬೇಕಿದ್ದ ವಿಜಯಪುರದ ಆರೋಪಿಯನ್ನ ಹಿಡಿದ ಶಿವಮೊಗ್ಗ ಪೊಲೀಸರು! ಏನಿದು ಪ್ರಕರಣ

ಶಿವಮೊಗ್ಗ ಪೊಲೀಸರು ವಿಜಯಪುರ ಜಿಲ್ಲೆಯ ಆರೋಪಿಯೊಬ್ಬನನ್ನ ಹಿಡಿದು ಬೆಂಗಳೂರು ಕೋರ್ಟ್​ಗೆ ಮುಂದಕ್ಕೆ ನಿಲ್ಲಿಸಿದ್ದಾರೆ. 

ಏನಿದು ಪ್ರಕರಣ?

2014 ನೇ ಸಾಲಿನಲ್ಲಿ ಆರೋಪಿ ಎಜಾಸ್ ಪಟೇಲ್, 35 ವರ್ಷ, ನಂದ್ರಾಳ ಗ್ರಾಮ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಈತನ ವಿರುದ್ಧ ಕಲಂ 66(ಎ) ಐಟಿ ಕಾಯ್ದೆ, ಕಲಂ 3 KCOCA ಕಾಯ್ದೆ, ಕಲಂ 8, 3, 25 ಆಯುಧ ಕಾಯ್ದೆ ಮತ್ತು ಕಲಂ 506, 504, 120(ಬಿ), 149, 399, 400, 402 ಐಪಿಸಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈ ಸಂಬಂಧ  Prl. City Civil & Sessions Court, Bangalore ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿತ್ತು.  

ಆದರೆ, ಆರೋಪಿ ಎಜಾಸ್ ಪಟೇಲ್ ಈತನು ಸದರಿ ಪ್ರಕರಣದ ವಿಚಾರಣೆಗೆ 2021ನೇ ಸಾಲಿನಿಂದಲೂ ನ್ಯಾಯಾಲಯಕ್ಕೆ  ಹಾಜರಾಗದೇ ತಲೆಮರೆಸಿ ಕೊಂಡಿದ್ದ. ಈತನನ್ನ ಹಿಡಿಯುವ ಜವಾಬ್ದಾರಿ ಶಿವಮೊಗ್ಗ ಪೊಲೀಸರ ತೆಕ್ಕೆಗೆ ಬಂದಿತ್ತು. ಇದೀಗ, ದಿನಾಂಕಃ 09-07-2023 ರಂದು ಇಂಡಿ ತಾಲ್ಲೂಕಿನ ಭೈರವಣಿಗೆ ಗ್ರಾಮದಲ್ಲಿದ್ದ ಎಜಾಸ್ ಪಟೇಲ್​ನನ್ನ ದಸ್ತಗಿರಿ ಮಾಡಿ ದಿನಾಂಕಃ 10-07-2023 ರಂದು  ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. 


ಶಿವಮೊಗ್ಗದಲ್ಲಿ ಇವತ್ತು ಮಳೆ ಜೋರಿದ್ಯಾ? ಹವಾಮಾನ ವರದಿ ಹೇಳೋದೇನು? ನಿನ್ನೆ ಹೇಗಿತ್ತು ವರ್ಷಧಾರೆ? ವಿವರ ಇಲ್ಲಿದೆ

ಶಿವಮೊಗ್ಗ :  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 60.40 ಮಿಮಿ ಮಳೆಯಾಗಿದ್ದು, ಸರಾಸರಿ 8.63 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  188.54 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 03.40 ಮಿಮಿ., ಭದ್ರಾವತಿ 09.20 ಮಿಮಿ., ತೀರ್ಥಹಳ್ಳಿ 10.70 ಮಿಮಿ., ಸಾಗರ 17.00 ಮಿಮಿ., ಶಿಕಾರಿಪುರ 3.40 ಮಿಮಿ., ಸೊರಬ 4.30 ಮಿಮಿ. ಹಾಗೂ ಹೊಸನಗರ 12.40 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್​ಗಳಲ್ಲಿ: 

ಲಿಂಗನಮಕ್ಕಿ: 1819 (ಗರಿಷ್ಠ), 1751.70 (ಇಂದಿನ ಮಟ್ಟ), 8636.00 (ಒಳಹರಿವು), 834.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1777.20.  

ಭದ್ರಾ: 186 (ಗರಿಷ್ಠ), 140.9 (ಇಂದಿನ ಮಟ್ಟ), 4156.00 (ಒಳಹರಿವು), 163.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 171.30.   

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 6677.00 (ಒಳಹರಿವು), 6145.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 572.86 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1493 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 577.70 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.88 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 400 (ಒಳಹರಿವು), 552.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.00 (ಎಂಎಸ್‍ಎಲ್‍ಗಳಲ್ಲಿ)..

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 567.34 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 890.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.86 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 574.84 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 504.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 580.30 (ಎಂಎಸ್‍ಎಲ್‍ಗಳಲ್ಲಿ). 

ಇವತ್ತು ಮಳೆ ಇರುತ್ತಾ?

ಐಎಂಡಿ ಬೆಂಗಳೂರು ನೀಡಿರುವ ಮಾಹಿತಿ ಪ್ರಕಾರ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಅಲರ್ಟ್​ಗಳು ಘೋಷಣೆಯಾಗಿಲ್ಲ. ಸಾಧಾರಣ ಮಳೆಯಾಗುವ ಸೂಚನೆಯಿದ್ದು ಗುಡುಗು ಮಿಂಚಿನ ಜೊತೆ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಅದರ ಪರಿಣಾಮ ಜಿಲ್ಲೆಯ ಮೇಲೂ ಆಗುವ ಸಾಧ್ಯತೆ ಇದೆ. . ಇದೇ ಜುಲೈ 14-15 ರಂದು ಶಿವಮೊಗ್ಗದಲ್ಲಿ ಭಾರೀ ಮಳೆಯ ಜೊತೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.