ಶಿವಮೊಗ್ಗ ಏರ್​ಪೋರ್ಟ್​ ಬಗ್ಗೆ INDIGO ದಿಂದ ಹೊರಬಿತ್ತು ಮತ್ತೊಂದು ನ್ಯೂಸ್! ಹೈದ್ರಾಬಾದ್​, ತಿರುಪತಿಗೂ ಶುರವಾಗುತ್ತಾ ಫ್ಲೈಟ್?

Another news comes out of INDIGO from Shivamogga airport! Flying to Hyderabad and Tirupati?

ಶಿವಮೊಗ್ಗ ಏರ್​ಪೋರ್ಟ್​ ಬಗ್ಗೆ INDIGO ದಿಂದ ಹೊರಬಿತ್ತು ಮತ್ತೊಂದು ನ್ಯೂಸ್!  ಹೈದ್ರಾಬಾದ್​, ತಿರುಪತಿಗೂ ಶುರವಾಗುತ್ತಾ ಫ್ಲೈಟ್?

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಇದೇ ಆಗಸ್ಟ್ 11 ರಿಂದ ಇಂಡಿಗೋ ವಿಮಾನ ಹಾರಾಟ ಆರಂಭಿಸಿಲಿದೆ. ಈ ಸಂಬಂಧ ಈಗಾಗಲೇ ದಿನಾಂಕ ನಿಕ್ಕಿಯಾಗಿದ್ದು, ಸಂಸದ ರಾಘವೇಂದ್ರರವರು ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದರು. 

ಇದರ ಮುಂದುವರಿದ ಭಾಗವಾಗಿ ಇಂಡಿಗೋ ಸಂಸ್ಥೆಯ ವೆಬ್​ಸೈಟ್​ನಲ್ಲಿ ಶಿವಮೊಗ್ಗ ಏರ್​ಪೋರ್ಟ್ ಎಂಬ ಹೆಸರು ನಮೂದಾಗಿದೆ. ಇದುವರೆಗೂ ಶಿವಮೊಗ್ಗ ಎಂದು ಟೈಪಿಸಿದರೇ ಏನೂ ಸಹ ಬರುತ್ತಿರಲಿಲ್ಲ. ಇದೀಗ ಎಲ್ಲಿಗೆ ಅಥವಾ ಎಲ್ಲಿಂದ ಎಂಬ ಕಾಲಂನಲ್ಲಿ ಶಿವಮೊಗ್ಗ ಎಂದು ಬರೆದರೇ , ಶಿವಮೊಗ್ಗ ಏರ್​ಪೋರ್ಟ್​ ಹೆಸರು ಕಾಣುತ್ತದೆ. 

ಅಲ್ಲದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆರ್​ಒವೈ ಎಂಬ ಕೋಡ್ ನೀಡಲಾಗಿದೆ.ಸದ್ಯ ಯಾವುದೇ ವಿಮಾನ ಬುಕ್ಕಿಂಗ್​ನ್ನ ತೋರಿಸಲಾಗುತ್ತಿಲ್ಲ.  ಇನ್ನೂ ಉಡಾನ್ ಯೋಜನೆಯಡಿಯಲ್ಲಿ ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್​ ಸೇರಿದಂತೆ ಹೊಸ ರೂಟ್​ಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆಯಂತೆ.  ಪ್ರಸ್ತುತ ಕರಡು ಹಂತದಲ್ಲಿರುವ ಈ ಬಗ್ಗೆ ಈಗಾಗಲೇ ಟ್ವಿಟ್ಟರ್​ಗಳಲ್ಲಿ ಪೋಸ್ಟ್ ಷೇರ್ ಮಾಡಲಾಗುತ್ತಿದ್ದು, ಸಂಸದ ಬಿ.ವೈ.ರಾಘವೇಂದ್ರರವರು ಸಹ ಟ್ವೀಟ್ ಮಾಡಿದ್ದಾರೆ. 


ಮಹಿಳೆಯರಿಗಾಗಿ flipkart onboarding ಟ್ರೈನಿಂಗ್ ! ಏನಿದು ವಿಶೇಷ!?



ಶಿವಮೊಗ್ಗ: ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ಫಿಪ್ ಕಾರ್ಟ್ ಆನ್ ಬೋರ್ಡಿಂಗ್ ಕುರಿತು ಜುಲೈ 13ರಂದು ನಗರದ ಮಥುರಾ ಪಾರಾಡೈಸ್‌ನಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ  ಸಂಘದ ಅಧ್ಯಕ್ಷೆ ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ತಿಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಪ್ಲಿಪ್‌ಕಾಟ್ (FilpKart ) ನಿಂದ  ತಂತ್ರಜ್ಞರು ತರಬೇತಿ ನೀಡಲಿದ್ದಾರೆ. 31 ವಿಧಾನದ ಈ ಲರ್ನಿಂಗ್ ಕೋರ್ಸ್‌ಗಳನ್ನು  ಮೊಬೈಲ್ ಆ್ಯಪ್‌ನಲ್ಲಿಯೇ ಕಲಿಯಲು ಬೇಕಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತಿಯುಳ್ಳ ಮಹಿಳಾ ಉದ್ಯಮಿಗಳು ಜೂ.30 ರೊಳಗೆ ಹೆಸರನ್ನು ಮೊ.9740760061, 9243314217,9980181488 ನಂಬರ್​ ಕರೆ ಮಾಡಿ ನೋಂದಾಯಿಸಬಹುದು.


ಮತ್ತೆ ಸತ್ಯಾಗ್ರಹದ ವೇದಿಕೆ ಏರಿದ ಕಿಮ್ಮನೆ ರತ್ನಾಕರ್! ಜುಲೈ 3 ಕ್ಕೆ ಉಪವಾಸ ಧರಣಿ! ಕಾರಣವೇನು ಗೊತ್ತಾ?

ಶಿವಮೊಗ್ಗ/ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane ratnakar) ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಭಾರಿ ಕೇಂದ್ರ ಸರಕಾರದ ವಿರುದ್ಧ ಜುಲೈ 3 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ಧಾರೆ. ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಶಿವಮೊಗ್ಗ ನಗರದ ಗಾಂಧಿ ಪಾರ್ಕಿನ ಮಹಾತ್ಮ ಗಾಂಧೀಜಿ  ಪ್ರತಿಮೆ ಬಳಿ ಮಾಜಿ ಸಚಿವರು ಉಪವಾಸ ಸತ್ಯಾಗ್ರಹ  ನಡೆಸಲಿದ್ದಾರೆ. ಈ ಸಂಬಂಧ ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ಕರೆದು ಮಾತನಾಡಿದ, ಕಿಮ್ಮನೆ ರತ್ನಾಕರ್,  ಕೇಂದ್ರ ಸರಕಾರ ಕಳೆದ 9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು ಆದರೆ ಅದನ್ನ ಈಡೇರಿಸಿಲ್ಲ ಹೀಗಾಗಿ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಕಿಮ್ಮನೆ ರತ್ನಾಕರ್ ಆರೋಪಗಳು

ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ, ಉದ್ಯೋಗ ನೀಡುವುದಿರಲಿ, ಇರುವ ಉದ್ಯೋಗ ಕಸಿದುಕೊಂಡಿದೆ ಪ್ರಧಾನಿ ಮೋದಿ ಅವರು ವಿದೇಶದಲ್ಲಿ ರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದಿದ್ದರು. ಬಗ್ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಅವರೇನು ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ. ಬರೆದುಕೊಟ್ಟರೆ ಮಾತ್ರ ಕೊಡಬೇಕೆ? ಮಾತು ಕೊಟ್ಟರೆ ಕೊಡಬಾರದೆ ದೇಶದ ಎಲ್ಲ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದದ್ದು ಪ್ರಧಾನಿ ಅವರ ಜವಾಬ್ದಾರಿ. ಈಗ ಎಂದು ರಾಜ್ಯ ಸರಕಾರಕ್ಕೆ ಅಕ್ಕಿ ಕೊಡಲ್ಲ ಹೇಳುತ್ತಿ ದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುವು ದಿಲ್ಲವೇ ಎಂದು ಪ್ರಶ್ನಿಸಿದರು.