ಮನೆ ಅಡ್ರೆಸ್ ಸಿಗದೇ ದಾರಿ ತಪ್ಪಿದ ಮಹಿಳೆ/ ಮಲ್ನಾಡ್ ನಲ್ಲಿ ಜೋರಾಯ್ತು ಬದ ಬಡಿದಾಟ/ ಗಂಡನಿಲ್ಲದಿದ್ದಾಗ ಸೊಸೆಯನ್ನ ಆಚೆ ಹಾಕಿದ ಅತ್ತೆ ಮಾವ/ ಇನ್ನಷ್ಟು ಸುದ್ದಿಗಳು! TODAY @ NEWS

A brief account of the incidents that took place at various places in Shivamogga district TODAY @ NEWS

ಮನೆ ಅಡ್ರೆಸ್ ಸಿಗದೇ ದಾರಿ ತಪ್ಪಿದ ಮಹಿಳೆ/ ಮಲ್ನಾಡ್ ನಲ್ಲಿ ಜೋರಾಯ್ತು ಬದ ಬಡಿದಾಟ/ ಗಂಡನಿಲ್ಲದಿದ್ದಾಗ ಸೊಸೆಯನ್ನ ಆಚೆ ಹಾಕಿದ ಅತ್ತೆ ಮಾವ/ ಇನ್ನಷ್ಟು ಸುದ್ದಿಗಳು! TODAY @ NEWS

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಅಡ್ರೆಸ್ ಸಿಗದೇ ಕಂಗಾಲಾದ ಮಹಿಳೆ

ಭದ್ರಾವತಿ ತಾಲ್ಲೂಕಿನ ಹೊಸಮನೆ ಪೊಲೀಸ್ ಸ್ಟೇಷನ್​ ಲಿಮಿಟ್​ ಮಹಿಳೆಯೊಬ್ಬಳು ಮನೆಗೆ ಹೋಗುವ ದಾರಿ ಗೊತ್ತಾಗದೇ ಅಂಗಡಿಯೊಂದರ ಮುಂದೆ ಕುಳಿತುಬಿಟ್ಟಿದ್ದಳು. ಯಾವ ಕಡೆ ಹೋಗಬೇಕು ಎಂದು ತಿಳಿಯದೇ ಪರಿತಪಿಸುತ್ತಿದ್ದ ಮಹಿಳೆಯ ಬಗ್ಗೆ ಸ್ಥಳೀಯರು ವಿಚಾರಿಸಿದ್ದಾರೆ. ಕೊನೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಪೂರ್ವಪರವನ್ನು ವಿಚಾರಿಸಿ, ಅಲ್ಲಿಯೇ ಇದ್ದ ಸ್ಥಳೀಯರಿಂದ ಕೆಲವು ಮಾಹಿತಿ ಪಡೆದು , ವಿಳಾಸ ಪತ್ತೆ ಮಾಡಿ ಆಕೆಯನ್ನು ಅವರ ಮನೆಗೆ ತಲುಪಿಸಿದ್ದಾರೆ. 

ವಿನೋಬ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಆಕ್ಸಿಡೆಂಟ್ 

ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪದಲ್ಲಿ  ಬೈಕ್-ಕಾರುಗಳ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇನ್ನ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಎರಡು ಗಾಡಿಗಳಿಗೂ ವ್ಯಾಪಕ ಹಾನಿಯಾಗಿದೆ.

ಮುಂಗಾರು ಆಗಮವಾಗುತ್ತಿದ್ದಂತೆ ಶುರು ಜಗಳ

ಮಲ್ನಾಡ್​ನಲ್ಲಿ  ಮುಂಗಾರು ಆಗಮನದ ಹೊತ್ತಿಗೆ ಮಣ್ಣಿಗಾಗಿ ಹೊಡೆದಾಟಗಳು ಆರಂಭವಾಗುತ್ತವೆ. ಅಣ್ಣ,ತಮ್ಮ, ತಂದೆ ಮಗ, ಅತ್ತೆ ಸೊಸೆ, ಅಕ್ಕಪಕ್ಕ ನೆರೆಹೊರೆ ಹೀಗೆ ಈ ಜಾಗ ತಮ್ಮದು ನಮ್ಮದು ಎಂದು ಹೊಡೆದಾಟ ಶುರುವಿಟ್ಟುಕೊಳ್ಳುತ್ತಾರೆ. ಅದರಲ್ಲಿ ಬದ ವಿಚಾರ, ಬೇಲಿ ವಿಚಾರಗಳು ಜಗಳಕ್ಕೆ ಆಹ್ವಾನ ಕೊಡುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ  ಆನಂದಪುರದಲ್ಲಿ ಭೂಮಿ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ಗಲಾಟೆಯಾಗಿದೆ. ಇನ್ನೂ ಈ ರೀತಿಯ ವ್ಯಾಜ್ಯಗಳನ್ನು ನಿಬಾಯಿಸುವುದೇ ಪೊಲೀಸರಿಗೆ ದೊಡ್ಡ ಕೆಲಸವಾಗುತ್ತಿದೆ. 

ಪತಿಯಿಲ್ಲದ ಸಮಯದಲ್ಲಿ ಸೊಸೆಯನ್ನ ಹೊರಹಾಕಿದ ಅತ್ತೆ ಮಾವ

ಇಂತಹದ್ದೊಂದು ಘಟನೆ  ಭದ್ರಾವತಿಯ ತಿಮ್ಲಾಪುರದಲ್ಲಿ ನಡೆದಿದೆ.  ಅತ್ತೆ ಮಾವ ತನ್ನ ಗಂಡನಿಲ್ಲದ ಸಮಯದಲ್ಲಿ ನಿಂದಿಸಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಸೊಸೆಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಎರಡು ಕಡೆಯವರನ್ನು ಕರೆದು ಮಾತನಾಡಿದ್ದಾರೆ. ಆನಂತರ ಸ್ಠೇಷನ್​ಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ. 

ಮೀನು ಹಿಡಿಯುವ ವಿಚಾರಕ್ಕೆ ಗಲಾಟೆ

ಭದ್ರಾವತಿಯ ತಾರಿಕಟ್ಟೆಯಲ್ಲಿ ಮೀನು ಹಿಡಿಯುವ ವಿಚಾರಕ್ಕೆ ಗ್ರಾಮಸ್ಥರು ಹಾಗೂ ಕೆಲವರಿಗೂ ಜಗಳವಾಗಿದೆ. ಪರಸ್ಪರ ವಾಗ್ವಾದ ಗಲಾಟೆಗೆ ತಿರುಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿ ಮಾಡಿದ್ದಾರೆ. ಅಲ್ಲದೆ  ದೂರುದಾರರಿಗೂ & ಗ್ರಾಮಸ್ಥರಿಗೂ ತಿಳುವಳಿಕೆ & ಎಚ್ಚರಿಕೆಯನ್ನು ನೀಡಿ ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಿದ್ಧಾರೆ.