ಪೊಲೀಸರಿಗೆ ಕಳ್ಳರು ಹೇಗೆ ಸಿಕ್ಕಿಬೀಳ್ತಾರೆ ಗೊತ್ತಾ | 4 ಬೈಕ್​ ಕದ್ದು ಭದ್ರಾವತಿಗೆ ಬಂದವ ಸಿಕ್ಕಿಬಿದ್ದ ಕಥೆ

Details of the case in Shimoga district Bhadravati ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ಪ್ರಕರಣದ ವಿವರ

ಪೊಲೀಸರಿಗೆ ಕಳ್ಳರು ಹೇಗೆ ಸಿಕ್ಕಿಬೀಳ್ತಾರೆ ಗೊತ್ತಾ | 4 ಬೈಕ್​ ಕದ್ದು ಭದ್ರಾವತಿಗೆ ಬಂದವ ಸಿಕ್ಕಿಬಿದ್ದ ಕಥೆ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

BHADRAVATI |  ಕೆಲವೊಮ್ಮೆ ಸಣ್ಣದೊಂದು ಭಯ, ಅನುಮಾನ ಸಹ ಆರೋಪಿಯನ್ನು ಹಿಡಿದುನಕೊಡುತ್ತದೆ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ನಲ್ಲೊಂದು ಘಟನೆ ನಡೆದಿದೆ. 



ಇಲ್ಲಿನ  ಎಚ್.ಕೆ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದರು. ಈ  ವೇಳೆ ದ್ವಿಚಕ್ರ ವಾಹನವೊಂದು ಅಲ್ಲಿಗೆ ಬಂದಿದೆ. ಆತ ಪೊಲೀಸರ ಚೆಕ್ಕಿಂಗ್ ನೋಡುತ್ತಲೇ ಹತ್ತಿರ ಬಂದವನು ಬೈಕ್​ ತಿರುಗಿಸಿ ಓಡಲು ಆರಂಭಿಸಿದ್ದಾನೆ. ಆತ ಹಾಗೂ ಆತನಿದ್ದ ಬೈಕ್​ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ತಕ್ಷಣ ಹಿಂಬಾಲಿಸಿ ಆತನನ್ನ ಹಿಡಿದಿದ್ದಾರೆ. ಈ ವೇಳೆ ಮೊದಲು ತನ್ನದೇ ಬೈಕ್​ ಡಾಕ್ಯುಮೆಂಟ್ ಮನೆಯಲ್ಲಿ ಇಟ್ಟಿದ್ದೇನೆ ಎಂದಿದ್ದಾನೆ. ಆನಂತರ ಕಳೆದುಹೋಗಿದೆ ಎಂದಿದ್ದಾನೆ. ಬಳಿಕ ಜೋರು ಮಾಡಿದ ಮೇಲೆ ಸಾರ್ ಬೈಕ್ ಕದ್ದಿದ್ದು ಮಾರೋದಕ್ಕೆ ತರ್ತಿದ್ದೇನೆ ಎಂದಿದ್ದಾನೆ. 

READ : BREAKING NEWS : ಶಿವಮೊಗ್ಗ ಪೊಲೀಸ್​ಗೆ ರಾಷ್ಟ್ರಮಟ್ಟದ ಗರಿ/ ಇನ್​ಸ್ಪೆಕ್ಟರ್​ ಗುರುರಾಜ್​ಗೆ ಸಿಕ್ಕಿತು India Cyber Cop Award



ತಕ್ಷಣ ಅಲರ್ಟ್​ ಆದ ಪೊಲೀಸರು ಆತನನ್ನು ಸ್ಟೇಷನ್​ಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೇ  ಬಂಧಿತ ವ್ಯಕ್ತಿ ಉಮೇಶ ಅಲಿಯಾಸ್ ಮುದ್ದ ಬಿನ್ ಹರಿಹರಪ್ಪ  ನಡೆಸಿದ ನಾಲ್ಕು ಕಳ್ಳತನ ಪ್ರಕರಣಗಳು ಬಯಲಾಗಿದೆ. 

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಜಗದೀಶ್ ಹಂಚಿನಾಲ್, ಠಾಣಾಧಿಕಾರಿಗಳಾದ ಶ್ರೀಶೈಲ ಕೆಂಚಣ್ಣವರ, ಜಯಪ್ಪ, ಶಿಲ್ಪನಾಯನೇಗಲಿ, ಮಹೇಶ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಮಂಜುನಾಥ್, ಈರಯ್ಯ ಮತ್ತು ಶಿವಪ್ಪರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.