ಸಾಲ ವಾಪಸ್‌ ಕೊಟ್ಟರೂ ಅಡ ಇರಿಸಿದ ಮೊಬೈಲ್‌ ಕೊಡದೇ ಕಿರಿಕ್!‌ ಮೂವರ ಮೇಲೆ ಹಲ್ಲೆ

Three people were attacked in Bhadravati Rural Police Station Limits despite the loan being returned.

ಸಾಲ ವಾಪಸ್‌ ಕೊಟ್ಟರೂ ಅಡ ಇರಿಸಿದ ಮೊಬೈಲ್‌ ಕೊಡದೇ ಕಿರಿಕ್!‌  ಮೂವರ ಮೇಲೆ ಹಲ್ಲೆ
Bhadravati Rural Police Station Limits

Shivamogga  Mar 29, 2024  Bhadravati Rural Police Station Limits ಪಡೆದ ಸಾಲಕ್ಕೆ ಅಡವಿಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ ಮಾಡಿದ ಘಟನೆ ಸಂಬಂದ ಎಫ್‌ಐಆರ್‌ ದಾಖಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ನಲ್ಲಿ ಈ ಸಂಬಂಧ IPC 1860 (U/s-504,324,506,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ

 ಇಲ್ಲಿನ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿರುವ ನಿವಾಸಿಯೊಬ್ಬರು ನಾಲ್ಕು ಸಾವಿರ ಹಣಕ್ಕಾಗಿ ಮೊಬೈಲ್‌ವೊಂದನ್ನ ವ್ಯಕ್ತಿಯೊಬ್ಬರ ಬಳಿ ಅಡವಿಟ್ಟಿದ್ದರು. 10 ದಿನಗಳ ನಂತರ ಪಡೆದ ಹಣ ವಾಪಸ್‌ ಕೊಟ್ಟು ಮೊಬೈಲ್‌ ಕೊಡುವಂತೆ ಕೇಳಿದ್ಧಾರೆ. ಅಡವಿಟ್ಟುಕೊಂಡಿದ್ದ ವ್ಯಕ್ತಿ ಮೊಬೈಲ್‌ ನಾಳೆ ಕೊಡುವುದಾಗಿ ಹೇಳಿದ್ದಾರೆ. ಆ ಬಳಿಕ ಫೋನ್‌ ಕೇಳಲು ಹೋದಾಗ ಯಾವ ಮೊಬೈಲ್‌ ಕೂಡ ಕೊಡುವುದಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಮಾತಾಗಿದೆ. ಅಲ್ಲದೆ ಮೊಬೈಲ್‌ ಅಡವಿಟ್ಟ ವ್ಯಕ್ತಿ ಹಾಗೂ ಅವರ ಸಂಬಂಧಿಕರ ಮೇಲೆ ಕಬ್ಬಿಣದ ರಾಡು ಹಾಗೂ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಕೇಸ್‌ನ ತನಿಖೆ ನಡೆಸ್ತಿದ್ದಾರೆ.