ಆಕಾಶ ಅದರೀತು ಎಚ್ಚರ ! ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೊರಬಿತ್ತು ಈ ಕಾರ್ಣಿಕ!

Karnika held at Maidollu village in Bhadravathi ...ಭದ್ರಾವತಿ ಮೈದೊಳಲು ಗ್ರಾಮದಲ್ಲಿ ನಡೆದ ಕಾರ್ಣಿಕ

ಆಕಾಶ ಅದರೀತು ಎಚ್ಚರ !   ಶಿವಮೊಗ್ಗ ಜಿಲ್ಲೆಯಲ್ಲಿಯೇ  ಹೊರಬಿತ್ತು  ಈ ಕಾರ್ಣಿಕ!

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS 

ಭದ್ರಾವತಿ ತಾಲೂಕು ಮೈದೊಳಲಿನಲ್ಲಿ  ಹನುಮಂತ ದೇವರ ಕಾರ್ಣಿಕ ಹೊರಬಿದ್ದಿದೆ. ಮೈದೊಳಲಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕ ನಡೆಯುತ್ತದೆ. 

ಅದರಂತೆ ನಿನ್ನೆ ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈ ಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿದಿದ್ದಾರೆ. 

ಆಕಾಶ ಅದಿರಿತು ಎಚ್ಚರ

ಕಾರ್ಣಿಕ ಹೇಳಿದವರು ಈ ಸಲ ಆಕಾಶ ಅದಿರಿತು ಎಚ್ಚರ ಎಂದಿದ್ಧಾರೆ. ಅಂದರೆ,  ಈ ಸಲ ಮಳೆ ಕಡಿಮೆಯಾಗುವ ಸಾಧ್ಯತೆಯನ್ನು ಉಲ್ಲೇಖಿಸಲಾಗುತ್ತಿದೆ. ನಾಗರಪಂಚಮಿಯಂದು ನಡೆಯುವ ಕಾರ್ಣಿಕವೂ ಈ ಭಾಗದಲ್ಲಿ ವಿಶೇಷತೆಯನ್ನು ಹೊಂದಿದ್ದು ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ, ಶ್ರೀರಾಮದೇವರ ಉತ್ಸವ ಮೂರ್ತಿಗಳು ಕಾರ್ಣಿಕೋತ್ಸವದಲ್ಲಿ ಭಾಗಿಯಾಗಿದ್ದವು.

ಸಿಗಲಿದೆ ಸಹಾಯ ಧನ! ತೀರ್ಥಹಳ್ಳಿ ತಾಲ್ಲೂಕಿನ ಮಂದಿಗೆ ಅವಕಾಶ ! ಸೆಪ್ಟೆಂಬರ್​ 10 ಲಾಸ್ಟ್ ಡೇಟ್​

2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಅನುದಾನ ಲಭ್ಯತೆ, ಹೋಬಳಿವಾರು ಹಂಚಿಕೆ ಮತ್ತು ಜೇಷ್ಟತೆಯ ಆಧಾರದ ಮೇಲೆ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     ಪ್ರದೇಶ ವಿಸ್ತರಣೆಯಡಿ ಜಾಯಿಕಾಯಿ, ಗೇರು, ಕಾಳು ಮೆಣಸು, ಬೆಣ್ಣೆಹಣ್ಣು, ಹಲಸು ಮತ್ತು ಕಾಳುಮೆಣಸು ಪುನಃಶ್ಚೇತನ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪ್ಯಾಕ್‍ಹೌಸ್, ಸೋಲಾರ್ ಟನಲ್ ಡ್ರೈಯರ್ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

     ತೀರ್ಥಹಳ್ಳಿ ತಾಲ್ಲೂಕಿನ ಆಸಕ್ತ ಹಾಗೂ ಅರ್ಹ ರೈತರು ಸೆಪ್ಟೆಂಬರ್ 10 ರೊಳಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕುಶಾವತಿಯಲ್ಲಿರುವ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಕರೆ ಮಾಡಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಗಡಿಪಾರು ಮಾಡಿದ್ರೂ ಜಿಲ್ಲೆಯಲ್ಲಿಯೆ ಇದ್ದುಕೊಂಡು ಕ್ರೈಂ ! ದಾಖಲಾಯ್ತು ಮತ್ತೊಂದು ಕೇಸ್! ಏನಿದು?

ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರಾದರೂ ಸಹ ಮತ್ತೆ ಜಿಲ್ಲೆ ವ್ಯಾಪ್ತಿಯಲ್ಲಿ ಇದ್ದುಕೊಂಡು ಕ್ರೈಂ ನಲ್ಲಿ ಸಕ್ರಿಯವಾಗಿದ್ದ ಆರೋಪದ ಮೇರೆಗೆ ಪ್ರವೀಣ್ ಅಲಿಯಾಸ್ ಮೋಟು ವಿರುದ್ದ ಮತ್ತೊಂದು ಕೇಸ್ ದಾಖಳಾಗಿದೆ. 

ಮಾದಕ ವಸ್ತು ಮಾರಾಟ, ಪೋಕ್ಸ್‌, ಹಾಫ್ ಮರ್ಡರ್ ಪ್ರಕರಣಗಳೂ ಸೇರಿದಂತೆ 10 ಪ್ರಕರಣಗಳು ಪ್ರವೀಣ್ ಯಾನೆ ಮೋಟು ವಿರುದ್ಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಒಂದು ವರ್ಷ ಕಾಲ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಆದೇಶಿಸಿದ್ದರು.

ಗಡಿಪಾರಾದ ಮೂರೇ ತಿಂಗಳಲ್ಲಿ ಶಿವಮೊಗ್ಗಕ್ಕೆ ಬ೦ದು ಆತ  ಗಾಂಜಾ ಮಾರಾಟದಲ್ಲಿ ತೊಡಗಿದ್ದ.  ಈ ಹಿನ್ನೆಲೆಯಲ್ಲಿ ಮಾಲು ಸಮೇತ ಪ್ರವೀಣನನ್ನು ಪೊಲೀಸರು ಬಂಧಿಸಿದ್ದುರು. ಇದೀಗ  ಗಡಿಪಾರು - ಉಲ್ಲಂಘನೆ ವಿರುದ್ಧ  ಮೋಟು  ವಿರುದ್ಧ ಮತ್ತೊ೦ದು ಸುಮೋಟೋ ಪ್ರಕರಣ ಪೇಟೆ ಠಾಣೆಯಲ್ಲಿ ದಾಖಲಾಗಿದೆ  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು