ಗಡಿಪಾರು ಮಾಡಿದ್ರೂ ಜಿಲ್ಲೆಯಲ್ಲಿಯೆ ಇದ್ದುಕೊಂಡು ಕ್ರೈಂ ! ದಾಖಲಾಯ್ತು ಮತ್ತೊಂದು ಕೇಸ್! ಏನಿದು?

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರಾದರೂ ಸಹ ಮತ್ತೆ ಜಿಲ್ಲೆ ವ್ಯಾಪ್ತಿಯಲ್ಲಿ ಇದ್ದುಕೊಂಡು ಕ್ರೈಂ ನಲ್ಲಿ ಸಕ್ರಿಯವಾಗಿದ್ದ ಆರೋಪದ ಮೇರೆಗೆ ಪ್ರವೀಣ್ ಅಲಿಯಾಸ್ ಮೋಟು ವಿರುದ್ದ ಮತ್ತೊಂದು ಕೇಸ್ ದಾಖಳಾಗಿದೆ. 

ಮಾದಕ ವಸ್ತು ಮಾರಾಟ, ಪೋಕ್ಸ್‌, ಹಾಫ್ ಮರ್ಡರ್ ಪ್ರಕರಣಗಳೂ ಸೇರಿದಂತೆ 10 ಪ್ರಕರಣಗಳು ಪ್ರವೀಣ್ ಯಾನೆ ಮೋಟು ವಿರುದ್ಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಒಂದು ವರ್ಷ ಕಾಲ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಆದೇಶಿಸಿದ್ದರು.

ಗಡಿಪಾರಾದ ಮೂರೇ ತಿಂಗಳಲ್ಲಿ ಶಿವಮೊಗ್ಗಕ್ಕೆ ಬ೦ದು ಆತ  ಗಾಂಜಾ ಮಾರಾಟದಲ್ಲಿ ತೊಡಗಿದ್ದ.  ಈ ಹಿನ್ನೆಲೆಯಲ್ಲಿ ಮಾಲು ಸಮೇತ ಪ್ರವೀಣನನ್ನು ಪೊಲೀಸರು ಬಂಧಿಸಿದ್ದುರು. ಇದೀಗ  ಗಡಿಪಾರು – ಉಲ್ಲಂಘನೆ ವಿರುದ್ಧ  ಮೋಟು  ವಿರುದ್ಧ ಮತ್ತೊ೦ದು ಸುಮೋಟೋ ಪ್ರಕರಣ ಪೇಟೆ ಠಾಣೆಯಲ್ಲಿ ದಾಖಲಾಗಿದೆ  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment