SHIVAMOGGA | Jan 1, 2024 | ಹೊಸವರುಷ ಆಗಮನದ ಹೊಸ್ತಿಲಿನಲ್ಲಿ ಅನಾಹುತಗಳು ಸಂಭವಿಸುತ್ತಿರುತ್ತವೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಹೊಸವುರುಷ ವೆಲಕಮ್ ಮಾಡುವ ಸಡಗರದ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಭದ್ರಾವತಿ ಸೀಗೇಬಾಗಿ
ಭದ್ರಾವತಿ ತಾಲ್ಲೂಕು ಹೊನ್ನವಿಲೆ ಗ್ರಾಮದ ಯುವಕರು ಹುಟ್ಟುಹಬ್ಬದ ಪಾರ್ಟಿ ಮಾಡುವ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ (bhadravati rural police station) ಲಿಮಿಟ್ಸ್ ನಲ್ಲಿ ನಡೆದ ಇನ್ಸಿಡೆಂಟ್ನಲ್ಲಿ ಯುವಕರ ಬೈಕ್ ಬೊಲೆರೊ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
