SHIVAMOGGA | Jan 1, 2024 | ಶಿವಮೊಗ್ಗದಲ್ಲಿ ಹೊಸವರ್ಷ ಆಚರಣೆ ನಡುವೆ ನಡೆದ ಗನ್ಫೈರ್ ವೊಂದು ಸಖತ್ ಸುದ್ದಿಯಾಗುತ್ತಿದೆ. ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯನ್ನ ಪೊಲೀಸರು ಇತ್ಯರ್ಥ ಮಾಡಿದ್ದಾರೆ.
Tunganagara police station/ ತುಂಗಾ ನಗರ ಪೊಲೀಸ್ ಸ್ಟೇಷನ್
ಪೊಲೀಸರು ಹೇಳುವ ಪ್ರಕಾರ, 29-12-2023 ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಆ ವಿಡಿಯೋದಲ್ಲಿ ರೈಫಲ್ನಿಂದ ಫೈರ್ ಮಾಡುತ್ತಿರುವ ದೃಶ್ಯವೊಂದು ರೆಕಾರ್ಡ್ ಆಗಿದ್ದು ಕಂಡು ಬಂದಿದೆ.
ಇದು ದಿನಾಂಕ: 26-12-2023 ರಂದು ಮಧ್ಯ ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೇನಹಳ್ಳಿಯ ಮಲ್ನಾಡು ಕ್ಯಾನ್ಸರ್ ಆಸ್ಪತ್ರೆ ಬಳಿ ಹೆದ್ದಾರಿ ಹತ್ತಿರ ನಡೆದ ಘಟನೆ ಎಂದು ಹೇಳಲಾಗಿತ್ತು.
ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಕಾರನ್ನು ನಿಲ್ಲಿಸಿಕೊಂಡು ಬಂದೂಕಿನಿಂದ ಯುವಕನೊಬ್ಬ ಆಕಾಶದ ಕಡೆಗೆ ಗುಂಡು ಹಾರಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0517/2021 ಕಲಂ 336, 287, 290 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣ ಸಂಬಂಧ ಆರೋಪಿತರಾದ 1) ಹರ್ಷ ಪಟೇಲ್, 23 ವರ್ಷ, ಸಿರಗನಹಳ್ಳಿ, ಚಿಕ್ಕಮಗಳೂರು ಮತ್ತು 2) ಅಭಿಷೇಕ್, 23 ವರ್ಷ, ಅಜ್ಜಂಪುರ, ಚಿಕ್ಕಮಗಳೂರು ಮತ್ತು ಕಾರನ್ನು ಪತ್ತೆ ಹಚ್ಚಿ, ಸದರಿಯವರನ್ನು ವಶಕ್ಕೆ ಪಡೆದು, ಒಂದು ಏರ್ ಗನ್ ಮತ್ತು ಕಾರನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
