ಶಿವಮೊಗ್ಗ | ಆಪೆ ಗಾಡಿಗೆ ಬೈಕ್‌ ಡಿಕ್ಕಿ | ಬೈಕ್‌ ಸವಾರನ ಕೈ ಕಟ್‌, ಸ್ಥಳದಲ್ಲಿಯೇ ಸಾವು

Shimoga | Bike collided with APE carriage, died on the spot, Shimoga, Gajanur, Veerapur News, Shimoga News

ಶಿವಮೊಗ್ಗ | ಆಪೆ ಗಾಡಿಗೆ ಬೈಕ್‌ ಡಿಕ್ಕಿ  | ಬೈಕ್‌ ಸವಾರನ ಕೈ ಕಟ್‌, ಸ್ಥಳದಲ್ಲಿಯೇ ಸಾವು

SHIVAMOGGA | MALENADUTODAY NEWS | Apr 26, 2024     

ಶಿವಮೊಗ್ಗದ ಗಾಜನೂರು ಬಳಿಯಲ್ಲಿ ನಿನ್ನೆ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈತ ಸೊರಬದ ಮೂಲದವರು ಎನ್ನಲಾಗಿದ್ದು, ಆತನ ವಿವರ ತಿಳಿದುಬಂದಿಲ್ಲ. 

ಏನಾಗಿದ್ದು?

ಗಾಜನೂರು ಸಮೀಪದ ವೀರಾಪುರದ ಬಳಿ ಸಿಗುವ ಕ್ರಾಸ್‌ ಹತ್ತಿರ ಈ ಘಟನೆ ಸಂಭವಿಸಿದೆ. ಟೈಲ್ಸ್‌ ತುಂಬಿಕೊಂಡು ಬರುತ್ತಿದ್ದ ಆಪೆ ಗಾಡಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರನಿಗೆ ಗಂಭೀರ ಪೆಟ್ಟು ಬಿದ್ದು ‍ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ಭೀಕರತೆ ಎಷ್ಟಿತ್ತು ಎಂದರೇ , ಬೈಕ್‌ ಸವಾರನ ಒಂದು ಕೈ ಸಂಪೂರ್ಣವಾಗಿ ತುಂಡಾಗಿ ರಸ್ತೆ ಬದಿಗೆ ಹಾರಿ ಬಿದ್ದಿತ್ತು. ಇನ್ನೂ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ. 

ಸ್ಥಳೀಯರು ತುರ್ತುಕರೆ ಮಾಡಿ ಆಂಬುಲೆನ್ಸ್‌ಗೆ ಬರುವಂತೆ ತಿಳಿಸಿದ್ದರಾದರೂ ಅಷ್ಟರಲ್ಲಿ ಬೈಕ್‌ ಸವಾರನ ಜೀವ ಹೋಗಿತ್ತು. ಇನ್ನೂ ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.