ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪದ ಗೌರಿ ಕೆರೆ ಬಳಿ ಇವತ್ತು ಅಪಘಾತ ಸಂಭವಿಸಿದೆ. ಸಾಗರದಿಂದ ಸಿದ್ದಾಪುರದ ಕಡೆಗೆ ತೆರಳುತ್ತಿದ್ದ ಬೈಕ್ವೊಂದಕ್ಕೆ 407 ಲಾರಿ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
BREAKING NEWS : 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ/ ಮೆಗ್ಗಾನ್ ಆಸ್ಪತ್ರೆಗೆ ICMR ತಂಡ ಭೇಟಿ
ಚರಂಡಿಗೆ ಉರುಳಿದ ವಾಹನ
ಇನ್ನೂ ಹರಿಹರದಲ್ಲಿ ಔಷಧಿ ಸಾಗಣೆಯ ವಾಹನವೊಂದು ತೆರೆದ ಚರಂಡಿಗೆ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ಹಳೆ ಪಿ.ಬಿ.ರಸ್ತೆ ಬಳಿಯಲ್ಲಿ ಸಂಭವಿಸಿದೆ. ರಾಣೆಬೆನ್ನೂರು ಕಡೆಯಿಂದ ಬರುತ್ತಿದ್ದ ಟಾಟಾ ಏಸ್ ವಾಹನ (ಕೆಎ 17 ಡಿ 7508) ವು ಚಾಲಕನ ಆಯತಪ್ಪಿ ರಸ್ತೆ ಪಕ್ಕದ ತೆರೆದ ಚರಂಡಿಗೆ ಬಿದ್ದಿದೆ. ಚಾಲಕ ಸಣ್ಣ, ಪುಟ್ಟಗಾಯಗಳೊಂದಿಗೆ ಪಾರಾಗಿದ್ದು, ವಾಹನದ ಮುಂಬಾಗ ಜಖಂಗೊಂಡಿದೆ. ಈ ರಸ್ತೆಯ ಎರಡೂ ಬದಿಯ ಚರಂಡಿ ಹಾಗು ರಸ್ತೆ ಸಮನಾಗಿಲ್ಲ. ರಸ್ತೆ ನಿರ್ಮಿಸಿ ಏಳೆಂಟು ವರ್ಷಗಳು ಕಳೆದರೂ ಅಧಿಕಾರಿಗಳು ಈ ಸಂಚರಿಸುವವರಿಗೆ ಸುರಕ್ಷತೆ ಒದಗಿಸದೆ ಇರುವುದರಿಂದ ವಾಹನ ಅಪಘಾತಕ್ಕೀಡಾಗುತ್ತಿವೆ ಎಂದು ಸ್ಥಳೀಯ ಆರೋಪಿಸಿದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com