BREAKING NEWS : 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ/ ಮೆಗ್ಗಾನ್​ ಆಸ್ಪತ್ರೆಗೆ ICMR ತಂಡ ಭೇಟಿ

BREAKING NEWS: ICMR team visits Meggan Hospital in case of illness of more than 200 students

BREAKING NEWS :  200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ/ ಮೆಗ್ಗಾನ್​ ಆಸ್ಪತ್ರೆಗೆ ICMR  ತಂಡ ಭೇಟಿ
ಸಾಂದರ್ಭಿಕ ಚಿತ್ರ

BREAKING NEWS: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ವಿದ್ಯಾರ್ಥಿಗಳ ಅಸ್ವಸ್ಥತೆ ಘಟನೆಗೆ ಕಾರಣ ಏನು ಎಂಬುದನ್ನ ತಿಳಿಯುವಲ್ಲಿ ವಿಳಂಬವಾಗುತ್ತಿದೆ. ಈ ನಡುವೆ Indian Council of Medical Research ವಿಶೇಷ ತಂಡ ಶಿವಮೊಗ್ಗದ ಮೆಗ್ಗಾನ್ (McGANN Teaching District Hospital, SIMS) ಆಸ್ಪತ್ರೆಗೆ ಭೇಟಿಕೊಟ್ಟಿದೆ. 

ಶಿವಮೊಗ್ಗದಲ್ಲಿ 200 ಕ್ಕೂ ಹೆಚ್ಚು ಮಕ್ಕಳ ಅಸ್ವಸ್ಥತೆಗೆ ಅಸಲಿ ಕಾರಣ ಏನು? ಸಂಸದ ರಾಘವೇಂದ್ರರವರು ಹೇಳಿದ್ದೇನು?

ಆಸ್ಪತ್ರೆಗೆ ದಿಢೀರ್ ಆಗಿ ಭೇಟಿಕೊಟ್ಟಿರುವ ತಂಡ, ಘಟನೆಯ ಸಂಬಂಧ ಮಾಹಿತಿ ಪಡೆದು, ಪರಿಶೀಲನೆ ನಡೆಸಿದೆ.  ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಷ್ಟೆ ಅಲ್ಲದೆ, ಯೋಗಥಾನ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಮಕ್ಕಳು ಅಸ್ವಸ್ಥಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ಮಕ್ಕಳು ಅಸ್ವಸ್ಥರಾಗುವಂತಹ ಘಟನೆಗಳು ಎರಡು ಮೂರು ದಿನಗಳ ಕಾಲವು ಮುಂದುವರಿದಿತ್ತು. ಈ ನಡುವೆ ಓರ್ವ ವಿದ್ಯಾರ್ಥಿಯನ್ನು ಮಣಿಪಾಲ್​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು ಎಂಬ ಮಾಹಿತಿಯು ಇದೆ. 

ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ ಮಾಡಿದ ಜಿಲ್ಲಾಧಿಕಾರಿಗಳು

ವಾಂತಿ, ಸುಸ್ತು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ಪೈಕಿ ಬಹುತೇಕರು ಗುಣಮುಖರಾಗಿದ್ಧಾರೆ. ಇನ್ನೂ ಈ ಬಗ್ಗೆ ಮಾತನಾಡಿದ್ದ ಸಂಸದ ರಾಘವೇಂದ್ರರವರು ಯೋಗಥಾನ್ ಕಾರ್ಯಕ್ರಮದಲ್ಲಿ ನೀಡಲಾಗಿದ್ದ ಆಹಾರದಲ್ಲಿ ನೀಡಿದ್ದ ಮಜ್ಜಿಗೆ ಪ್ಯಾಕೇಟ್​ ನ್ನ ತಡವಾಗಿ ಕುಡಿದಿರುವ ಸಾಧ್ಯತೆ ಇದ್ದು, ಅದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪರಿಶೀಲನೆ ನಡೆಸಲಾಗ್ತಿದೆ ಎಂದಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com