ಮಾರಿಕಾಂಬಾ ದೇವಸ್ಥಾನದ ಅಂಗಡಿ & 20 ಸಾವಿರ ಸಾಲದ ಅರ್ಜಿ! ಕೊರೊನಾ ಕಾಲದ ಕಷ್ಟ ಹೇಳಿ ಕಣ್ಣೀರಿಟ್ಟ ಮಹಿಳೆ! ಸಚಿವರೆದುರು ನಡೆದಿದ್ದೇನು?

Madhu Bangarappa instructed the authorities to provide loan to the woman who appliedಅರ್ಜಿ ಸಲ್ಲಿಸಿದ ಮಹಿಳೆಗೆ ಸಾಲ ಒದಗಿಸುವಂತೆ ಅಧಿಕಾರಿಗಳಿಗೆ ಮಧು ಬಂಗಾರಪ್ಪ ಸೂಚಿಸಿದ್ದಾರೆ

ಮಾರಿಕಾಂಬಾ ದೇವಸ್ಥಾನದ ಅಂಗಡಿ & 20 ಸಾವಿರ ಸಾಲದ ಅರ್ಜಿ! ಕೊರೊನಾ ಕಾಲದ ಕಷ್ಟ ಹೇಳಿ ಕಣ್ಣೀರಿಟ್ಟ ಮಹಿಳೆ! ಸಚಿವರೆದುರು ನಡೆದಿದ್ದೇನು?

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’

ಸಾರ್,,, ತಿರುಗಿ ತಿರುಗಿ ಸಾಕಾಗಿದೆ…ಅಂತಾ ಆಯಮ್ಮ ಕಣ್ಣೀರು ಹಾಕುತ್ತಿದ್ದಳು…ಮಾಧ್ಯಮಗಳು ಆಕೆಯ ದುಃಖ ಆಲಿಸಲು ಮೈಕ್ ಮುಂದೆ ಮಾಡಿ ಹಿಡಿದಿದ್ದವು. ಅಳುತ್ತಲೇ  . ನಾನು ಬೀದಿ ಬದಿ ವ್ಯಾಪಾರಿ, ಹತ್ತು ಸಾವಿರ ರೂಪಾಯಿ ಸಾಲ ಮಾಡಿದ್ದೆ, ಕೊರೊನಾ ಟೇಮ್​ನಲ್ಲಿ ಸ್ವಲ್ಪ ಆಚೆ ಈಚೆ ಆಯ್ತು..ಆಮೇಲೆ ಕ್ಲೀಯರ್​ ಮಾಡಿದೆ, ಆದರೆ ಈಗ 20 ಸಾವಿರ ಸಾಲ ಕೇಳಿದರೇ, ಅಧಿಕಾರಿಗಳು ಈ ಕಡೆ ಬರಲೇ ಬೇಡ ಅಂತಿದ್ದಾರೆ. ಏನ್​ ಮಾಡಿದ್ರೂ ಸಾಲ ಕೊಡುತ್ತಿಲ್ಲ.. ಅದಕ್ಕೆ ಇಲ್ಲಿಗೆ ಬಂದು ಸಾಹೇಬ್ರ ಹತ್ರ ಹೇಳಿದೆ,, ಅವರು ಮಾಡಿಸಿಕೊಡ್ತೀನಿ ಎಂದಿದ್ದಾರೆ..ಈಗ ಚೂರು ಸಮಾಧಾನ ಆಯ್ತು ಎನ್ನುತ್ತಾಳೆ.. 

ನಿನ್ನೆ ಕುವೆಂಪು ರಂಗಮಂದಿರದಲ್ಲಿ ನಡೆದ ಜನತಾ ದರ್ಶನದ ಸ್ಯಾಂಪಲ್​ ಉದಾಹರಣೆ ಇದು. ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಲೆಂದು ಬಂದ ಹೆಣ್ಣುಮಕ್ಕಳು ನಿನ್ನೆ ಇಲ್ಲಿ ಸಾಲುಗಟ್ಟಿದ್ದರು. ಪಕ್ಷದ ಮುಖಂಡರ ತೋರಿಕೆ ಪ್ರಯತ್ನಗಳು, ಬೆಂಬಲಿಗರ ಭರಾಟೆಯ ಅಡೆತಡೆಗಳ ನಡುವೆ ಮಹಿಳೆಯರು ಸಚಿವರಿಗೆ ಸಮಸ್ಯೆಗಳನ್ನು ಹೇಳಿಕೊಂಡರು. ಮಧು ಬಂಗಾರಪ್ಪರವರು ಸಹ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಯತ್ನಿಸಿದ್ದರು. 

ಅದರಲ್ಲಿ 10 ಸಾವಿರ ಸಾಲ ತಗೊಂಡು, ಮತ್ತೆ ಇಪ್ಪತ್ತು ಸಾವಿರ ಸಾಲಕ್ಕೆ ಅರ್ಜಿ ಹಾಕಿದ್ದ ಮಹಿಳೆ ಸಾಲ ಕೊಡಿಸಿ ಅಂತಾ ಸಚಿವರಿಗೆ ಅರ್ಜಿ ಹಿಡಿದು ಬಂದಿದ್ದಳು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಮಾರಿಕಾಂಬಾ ದೇವಸ್ಥಾನ, ಗಾಂಧಿಬಜಾರ್​ನಲ್ಲಿ ರೋಡ್​​ ಸೈಡ್​ನಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವ ಮಹಿಳೆಗೆ ಕೊರೊನಾ ಕಾಲದಲ್ಲಿ ಲೋನ್ ಕಟ್ಟಕಾಗದ ಕಾರಣಕ್ಕೆ ಮತ್ತೆ ಸಾಲ ಕೊಡಲ್ಲ ಅಂತಾ ಕಡ್ಡಿ ಮುರಿದಿದ್ದರಂತೆ ಅಧಿಕಾರಿಗಳು. ಅವರದ್ದೇನಿತ್ತೋ ಒಳ ಚಿಂತೆ..

ಆದರೆ ಲೋನ್​ ಬೇಕೆಬೇಕು ಎಂದು ಹಠ ಹಿಡಿದು ಕಣ್ಣಿರಿಟ್ಟ ಮಹಿಳೆ ಸಚಿವರ ಬಳಿ ಸಮಸ್ಯೆ ಹೇಳಿಕೊಂಡಿದ್ದಾಳೆ. ಸಚಿವರು ಸಹ ಸ್ಥಳದಲ್ಲಿಯೇ ಆ ಸಮಸ್ಯೆ ಬಗೆಹರಿಸುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿ, ಅದರ ಬಗ್ಗೆ ತಮಗೆ ಅಪ್​ಡೇಟ್ ನೀಡಬೇಕು ಎಂದು ಸಹ ಸೂಚಿಸಿದ್ರು.. ಇದನ್ನೆ ಕೇಳಿದ ಮಹಿಳೆ ಏನೋ ಸಮಾಧಾನ ಆದಂಗಾತು ಎನ್ನುತ್ತಾ ಸುರಿದ ಕಣ್ಣೀರು ಒರೆಸಿಕೊಳ್ಳುತ್ತಾ ಅಲ್ಲಿಂದ ತೆರಳಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?