BREAKING : ಅಪ್ತಾಪ್ತನಿಂದ ಸರಣಿ ಅಪಘಾತ! ಪ್ರಶ್ನಿಸಿದ್ದಕ್ಕೆ 20 ಕ್ಕೂ ಹೆಚ್ಚು ಮಂದಿಯಿಂದ ವಯಸ್ಸಾದವರ ಮೇಲೆ ಹಲ್ಲೆ ! ಮೆಗ್ಗಾನ್​ಗೆ ದಾಖಲು

BREAKING: A series of accidents from the minor! Elderly man attacked by group of youngsters for questioning him!

BREAKING  :  ಅಪ್ತಾಪ್ತನಿಂದ ಸರಣಿ ಅಪಘಾತ! ಪ್ರಶ್ನಿಸಿದ್ದಕ್ಕೆ 20 ಕ್ಕೂ ಹೆಚ್ಚು ಮಂದಿಯಿಂದ ವಯಸ್ಸಾದವರ ಮೇಲೆ ಹಲ್ಲೆ ! ಮೆಗ್ಗಾನ್​ಗೆ ದಾಖಲು
BREAKING : ಅಪ್ತಾಪ್ತನಿಂದ ಸರಣಿ ಅಪಘಾತ! ಪ್ರಶ್ನಿಸಿದ್ದಕ್ಕೆ 20 ಕ್ಕೂ ಹೆಚ್ಚು ಮಂದಿಯಿಂದ ವಯಸ್ಸಾದವರ ಮೇಲೆ ಹಲ್ಲೆ ! ಮೆಗ್ಗಾನ್​ಗೆ ದಾಖಲು

ಶಿವಮೊಗ್ಗ ನಗರದ ಇಲಿಯಾಜ್ ನಗರದ ಬಡಾವಣೆಯೊಂದರಲ್ಲಿ, ಅಪ್ರಾಪ್ತ ಬಾಲಕನೊಬ್ಬ ಸರಣಿ ಅಪಘಾತವೆಸಗಿದ್ದನ್ನು ಪ್ರಶ್ನಿಸಿದ್ದಕ್ಕೆ, ಯುವಕರ ಗುಂಪೊಂದು, ಮನೆಗೆ ನುಗ್ಗಿ ವಯಸ್ಸಾದವರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಅಲ್ಲದೆ ಸಾರ್ವಜನಿಕರವಾಗಿ ಬ್ಯಾಟ್​ಗಳನ್ನ ಬೀಸಿ ಗುಂಪು ಆತಂಕ ಸೃಷ್ಟಿಸುವ ಕೆಲಸ ಮಾಡಿದೆ. ಈ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ನಡೆದಿದ್ದೇನು? 

ಇಲ್ಲಿನ ಬಡಾವಣೆಯೊಂದರಲ್ಲಿ ಅಪ್ತಾಪ್ತ ಬಾಲಕನ ಕೈಗೆ ವೆಹಿಕಲ್​ವೊಂದು ಓಡಿಸಲು ಅವರ ಮನೆಯವರು ಅವಕಾಶ ಮಾಡಿಕೊಟ್ಟಿದ್ಧಾರೆ ಎನ್ನಲಾಗಿದೆ. ಆತ ಬ್ಯಾಲೆನ್ಸ್​ ಸಿಗದೇ, ಅಲ್ಲಿಯೇ ಇದ್ದ ವಾಹನಗಳಿಗೆ ಹಾಗೂ ಸೈಕಲ್​ಗೆ ಬೈಕ್​  ಡಿಕ್ಕಿ ಹೊಡೆಸಿದ್ದಾನೆ ಎಂಬುದು ಸ್ಥಳೀಯರ ಆರೋಪ. ಇದೇ ಕಾರಣಕ್ಕೆ ಅಲ್ಲಿದ್ದ ಮನೆಯ ಮಾಲೀಕರೊಬ್ಬರು, ಬೈಕ್​ನ ಬೀಗ ಕಸಿದುಕೊಂಡು ತಂದೆ ತಾಯಿಯನ್ನು ಕರೆದುಕೊಂಡು ಬಾ ಎಂದು ಕಳಿಸಿದ್ದಾರಂತೆ. ಆದರೆ ಬಾಲಕನ ಬೆಂಬಲಕ್ಕೆ ಬಂದ   ಗುಂಪು, ಮನೆ ಮಾಲೀಕ ಹಾಗೂ ಮನೆಯಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಈ ಘಟನೆಯ ಚಿತ್ರಣ ಸಿಸಿ ಕ್ಯಾಮರಾದಲ್ಲಿಯು ರೆಕಾರ್ಡ್​ ಕೆಲವು ದೃಶ್ಯಗಳು ಟುಡೆಗೂ ಲಭ್ಯವಾಗಿದೆ. 

ಇನ್ನೂ ಕ್ಯಾಮರಾದಲ್ಲಿ ಯುವಕರು ಬ್ಯಾಟ್ ಬೀಸಿ ಆತಂಕ ಮೂಡಿಸ್ತಿರುವಂತಹ ದೃಶ್ಯಗಳು ಕಾಣ ಸಿಗುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾದವರು ಮೆಗ್ಗಾನ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ದೂರು ಪ್ರತಿದೂರು ಕೂಡ ದಾಖಲಿಸುವ ಪ್ರಯತ್ನಗಳು ನಡೆದಿವೆ. ಸದ್ಯ ಶಿವಮೊಗ್ಗ ಪೊಲೀಸರು ಘಟನೆಯನ್ನು ಹೇಗೆ ತನಿಖೆಗೆ ಒಳಪಡಿಸುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com